ಫೇಸ್‌ಬುಕ್ ಖಾತೆ ಹ್ಯಾಕ್ ಹ್ಯಾಕ್ ಆಗಿದೆ ಎನ್ನುತ್ತಾ ನ್ಯಾಯವಾದಿಯಿಂದ ಕ್ಷಮಾಯಾಚನೆ
ಮತಾಂಧರ ಇತಿಹಾಸ ಹಾಗೂ ಮಾನಸಿಕತೆಯನ್ನು ನೋಡಿದರೆ, ಖಾತೆ ಹ್ಯಾಕ್ ಆಗಿದೆ ಎಂಬ ಮಾತನ್ನು ಯಾರು ನಂಬುತ್ತಾರೆ ?
ನವ ದೆಹಲಿ – ನಟಿ ಕಂಗನಾ ರಾಣಾವತ್ ಅವರಿಗೆ ಸಾಮಾಜಿಕ ಮಾಧ್ಯಮದಿಂದ ಒರಿಸ್ಸಾದ ೩೩ ವರ್ಷದ ನ್ಯಾಯವಾದಿ ಮೆಹಂದಿ ರಾಝಾನು ‘ನಗರದ ಮಧ್ಯದಲ್ಲಿ ನಿನ್ನ ಮೇಲೆ ಅತ್ಯಾಚಾರ ಆಗಬೇಕು’, ಎಂದು ಹೇಳಿದ್ದಾನೆ. ನಂತರ ಸಾಮಾಜಿಕ ಮಾಧ್ಯಮದಿಂದ ಈ ಹೇಳಿಕೆಯ ಬಗ್ಗೆ ಟೀಕೆಗಳಾಗುತ್ತಿದ್ದಂತೆ ಆತನು ‘ನನ್ನ ಫೇಸ್‌ಬುಕ್ ಖಾತೆಯು ಹ್ಯಾಕ್ ಆಗಿತ್ತು’ ಹಾಗೂ ‘ನನ್ನ ಖಾತೆಯಿಂದ ಕೆಲವು ನಿಂದನೀಯ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಲಾಗಿದೆ. ಯಾವುದೇ ಮಹಿಳೆ ಅಥವಾ ಸಮುದಾಯದ ಬಗ್ಗೆ ಇದು ನನ್ನ ಅಭಿಪ್ರಾಯವಲ್ಲ. ನಾನು ಸ್ವತಃ ಆಘಾತಕ್ಕೊಳಗಾಗಿದ್ದೇನೆ ಹಾಗೂ ನಾನು ಈ ಬಗ್ಗೆ ಕ್ಷಮೆಯಾಚಿಸುತ್ತೇನೆ. ನನ್ನ ಕ್ಷಮೆಯನ್ನು ಸ್ವೀಕರಿಸುವಂತೆ ನಾನು ಜನರನ್ನು ಕೋರುತ್ತೇನೆ. ನನ್ನಿಂದ ಯಾರ ಭಾವನೆಗಳಿಗೆ ನೋವಾಗಿದೆಯೋ, ಅವರು ನನ್ನನ್ನು ಕ್ಷಮಿಸಬೇಕು. ನಡೆದ ಘಟನೆಯ ಬಗ್ಗೆ ನನಗೆ ನಿಜವಾಗಿಯೂ ವಿಷಾದವಿದೆ’ ಎಂದು ಹೇಳಿದ್ದಾನೆ.