ಹಿಂದೂ ಯುವತಿಯರಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಮತಾಂಧರ ಪ್ರೀತಿಯ ಬಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ !
ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಹಿಂದೂ ಯುವತಿಯನ್ನು ಪ್ರಿಯಕರ ಸಯ್ಯದ್ ಮುಸ್ತಫಾ ಹಾಗೂ ಆತನ ಸಹೋದರ ಜಮಿಲ್ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಅಕ್ಟೋಬರ್ ೧೭ ರ ರಾತ್ರಿ ರೇನ್ ಬಜಾರ್‌ನಲ್ಲಿ ಈ ಘಟನೆ ನಡೆದಿದೆ.
ಈ ಯುವತಿಯು ಮೂಲತಃ ಸಂಗಾರೆಡ್ಡಿ ಜಿಲ್ಲೆಯ ಕರಂಗುಟ್ಟಿ ಗ್ರಾಮದವಳಾಗಿದ್ದಳು. ಅವಳು ಇತ್ತೀಚೆಗೆ ಭಾಗ್ಯನಗರಕ್ಕೆ ವಾಸ್ತವ್ಯಕ್ಕಾಗಿ ಬಂದಿದ್ದಳು. ಆಕೆ ಕಾನೂನು ವಿದ್ಯಾರ್ಥಿನಿಯಾಗಿದ್ದಳು ಅದೇರೀತಿ ‘ಪೆಟಾ’ದ ಕಾರ್ಯಕರ್ತೆಯಾಗಿದ್ದಳು. ಮುಸ್ತಫಾನಿಗೂ ಈ ಸಂಘಟನೆಯೊಂದಿಗೆ ನಂಟು ಇತ್ತು. ಅಲ್ಲಿ ಅವರ ಭೇಟಿಯಾಗಿ ಪ್ರೀತಿಯು ಬೆಳೆದಿತ್ತು. ಕೆಲವು ದಿನಗಳ ನಂತರ ಮುಸ್ತಫಾನು ಅವಳೊಂದಿಗೆ ಸಂಬಂಧವನ್ನು ಮುರಿಯಲು ಪ್ರಾರಂಭಿಸಿದನು. ಪರಿಣಾಮವಾಗಿ ಈ ಯುವತಿಯು ಅಕ್ಟೋಬರ್ ೧೭ ರಂದು ರಾತ್ರಿ ಅವನ ಮನೆಗೆ ಹೋಗಿ ಪ್ರಶ್ನಿಸಿದಳು. ಇದರಿಂದ ಅವರ ನಡುವೆ ವಾಗ್ವಾದವಾಯಿತು. ಆಗ ಮುಸ್ತಫಾ ಹಾಗೂ ಆತನ ಸಹೋದರ ಜಮಿಲ್ ಸೇರಿ ಅವಳನ್ನು ಚಾಕುವಿನಿಂದ ಇರಿದು ಕೊಂದರು. ಇಬ್ಬರಿಬ್ಬರನ್ನು ಈಗ ಪೊಲೀಸರು ಹುಡುಕುತ್ತಿದ್ದಾರೆ.