‘ಟಾಟಾ ಕ್ಲಿಕ್’ನಿಂದ ಯೋಗಾಸನವು ‘ನಿರುತ್ಸಾಹಕರ’ ಎಂದು ಉಲ್ಲೇಖ !

‘ಟಾಟಾ ಗ್ರೂಪ್’ ಸಂಸ್ಥೆಯಿಂದ ಪುನಃ ಹಿಂದೂದ್ವೇಷ

  • ಹಿಂದೂ ಯುವಕನು ಕ್ರೈಸ್ತ ಯುವತಿಯೊಂದಿಗೆ ಕ್ರೈಸ್ತರ ಪದ್ದತಿಯಂತೆ ಮದುವೆಯಾಗುವ ದೃಶ್ಯ !
  • ‘ಟಾಟಾ ಗ್ರೂಪ್’ ನಿರಂತರವಾಗಿ ಹಿಂದೂದ್ವೇಷ ಮಾಡುತ್ತಿದೆ, ಇದನ್ನು ನೋಡಿದರೆ ಇನ್ನು ಟಾಟಾ ಸಂಸ್ಥೆಯನ್ನೇ ಬಹಿಷ್ಕರಿಸಬೇಕು, ಎಂದು ಯಾರಿಗಾದರೂ ಅನಿಸತೊಡಗಿದರೆ ಆಶ್ಚರ್ಯವೇನಿಲ್ಲ ! ಈ ವಿಷಯದಲ್ಲಿ ಈಗ ರತನ್ ಟಾಟಾ ಇವರು ಹಿಂದೂಗಳೆದುರು ಬಂದು ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಅದೇರೀತಿ ಇಂತಹ ಜಾಹೀರಾತನ್ನು ತಯಾರಿಸುವುದರ ಹಿಂದೆ ಅವರ ಸಂಸ್ಥೆಯಲ್ಲಿ ಹಿಂದೂದ್ವೇಷಿ ಅಧಿಕಾರಿ ಯಾರಿದ್ದಾರೆ ಎಂದು ಕಂಡುಹಿಡಿದು ಅವರನ್ನು ಹೊರಹಾಕಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಮುಂಬಯಿ – ‘ಟಾಟಾ ಗ್ರೂಪ್’ ‘ತನಿಷ್ಕ್ ಜ್ಯುವೆಲ್ಲರಿ’ಯ ಜಾಹೀರಾತಿನಿಂದ ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡಿದ ಘಟನೆಯ ನಂತರ, ಈಗ ತನ್ನದೇ ಸಂಸ್ಥೆಯಾದ ‘ಟಾಟಾ ಕ್ಲಿಕ್’ (Tata Cliq) ಸಂಸ್ಥೆಯ ಜಾಹೀರಾತಿನಿಂದ ಯೋಗಾಸನವನ್ನು ಅವಮಾನಿಸಲಾಗಿದೆ. ಈ ಜಾಹಿರಾತಿನಲ್ಲಿ, ಹಿಂದೂ ಯುವಕನೊಬ್ಬ ಕ್ರೈಸ್ತ ಹುಡುಗಿಯೊಂದಿಗೆ ಕ್ರೈಸ್ತರ ಪದ್ದತಿಯಲ್ಲಿ ‘ಆನ್‌ಲೈನ್’ನಲ್ಲಿ ವಿವಾಹವಾಗುತ್ತಿರುವುದನ್ನು ತೋರಿಸಲಾಗಿದೆ. ‘ಟಾಟಾ ಕ್ಲಿಕ್’ ಇದು ‘ಟಾಟಾ ಗ್ರೂಪ್’ನ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯಾಗಿದೆ.

೧. ಈ ಜಾಹೀರಾತಿನ ಒಂದು ಪ್ರಸಂಗದಲ್ಲಿ ತಾಯಿ ಮತ್ತು ಮಗನನ್ನು ತೋರಿಸಲಾಗಿದೆ. ಇಬ್ಬರಿಗೂ ಉಡುಗೊರೆ(ಪಾರ್ಸೆಲ್??) ಸಿಕ್ಕಿರುತ್ತದೆ, ಅದನ್ನು ಅವರು ಅದಲುಬದಲು ಮಾಡಿಕೊಳ್ಳುತ್ತಾರೆ. ಹುಡುಗ ತನಗೆ ಸಿಕ್ಕಿದ ಉಡುಗೊರೆ ಪೆಟ್ಟಿಗೆಯನ್ನು ತೆರೆಯುತ್ತಾನೆ. ಅದರಲ್ಲಿ ಯೋಗ ಮತ್ತು ಧ್ಯಾನ ಮಾಡುವಾಗ ಕುಳಿತುಕೊಳ್ಳಲು ಉಪಯೋಗಿಸುವ ‘ಮ್ಯಾಟ್’ ಇರುವುದು ತೋರಿಸಲಾಗಿದೆ. ಅವನು ಆ ‘ಮ್ಯಾಟ್’ ಮೇಲೆ ಕುಳಿತು ಧ್ಯಾನ ಮಾಡುತ್ತಾನೆ. ಆಗ ಅಲ್ಲಿ ‘ಬೋರಿಂಗ್’ ಅಂದರೆ ‘ನಿರುತ್ಸಾಹಕರ’ ಎಂದು ಬರೆಯಲಾಗಿದೆ. ಅಲ್ಲದೆ ಯೋಗಾಸನಗಳು ಹಳೆಯದಾಗಿದ್ದು ಅದನ್ನು ಮಾಡುವುದರಿಂದ ವಿಮುಖಗೊಳಿಸಲಾಗಿದೆ.

೨. ಇನ್ನೊಂದು ಪ್ರಸಂಗದಲ್ಲಿ ಹಿಂದೂ ಯುವಕ ಹಾಗೂ ಕ್ರೈಸ್ತ ಯುವತಿಯನ್ನು ತೋರಿಸಲಾಗಿದೆ. ಅದರಲ್ಲಿ ಅವರು ‘ಆನ್‌ಲೈನ್’ ಓರ್ವ ಪಾದ್ರಿಯ ಉಪಸ್ಥಿತಿಯಲ್ಲಿ ಬೆರಳಿಗೆ ಉಂಗುರವನ್ನು ತೊಡಿಸುವ ಕ್ರೈಸ್ತ ಪದ್ಧತಿಯಿಂದ ವಿವಾಹವಾಗುತ್ತಿದ್ದಾರೆ, ಎಂದು ತೋರಿಸಲಾಗಿದೆ.