‘ತನಿಷ್ಕ’ ನ ಆಭರಣಗಳ ವಿನ್ಯಾಸಗಳಲ್ಲಿ ಮುಸ್ಲಿಮರಿಗಾಗಿ ೩೫೨ ಮತ್ತು ಹಿಂದೂಗಳಿಗೆ ಕೇವಲ ಒಂದೇ ವಿನ್ಯಾಸ !

‘ತನಿಷ್ಕ ಜ್ಯುವೆಲ್ಲರಿ’ಯ ಮತ್ತೊಂದು ಹಿಂದೂದ್ವೇಷ !

  • ಹಾಗಾದರೆ, ಹಿಂದೂಗಳು ಈ ಅಂಗಡಿಗಳಿಗೆ ಖರೀದಿಗಾಗಿ ಏಕೆ ಹೋಗಬೇಕು?, ಇಂತಹ ಪ್ರಶ್ನೆಗಳು ಹಿಂದೂಗಳ ಮನಸ್ಸಿನಲ್ಲಿ ಬರುತ್ತದೆ !

  • ಹಿಂದೂಗಳು ದೇಶದಲ್ಲಿ ಬಹುಸಂಖ್ಯಾತರಾಗಿದ್ದರೂ ಇಂತಹ ಅಂಗಡಿಗಳಲ್ಲಿ, ಅಲ್ಪಸಂಖ್ಯಾತರ ದೃಷ್ಟಿಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಭರಣಗಳನ್ನು ಮಾರಾಟಕ್ಕೆ ಇಡುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ! ಹಿಂದೂಗಳು ಜಾತ್ಯತೀತರಾಗಿರುತ್ತಾರೆ ಮತ್ತು ಅವರು ಇಂತಹ ರೀತಿಯ ಮಾಹಿತಿಯನ್ನು ಸಹ ಪಡೆಯದಿರುವುದರಿಂದ, ಇತರ ಧರ್ಮದವರಿಗಾಗಿ ತಯಾರಿಸಿದಂತಹ ಆಭರಣಗಳನ್ನೇ ಅವರು ಖರೀದಿಸಬೇಕಾಗುತ್ತದೆ ಹಾಗೂ ಹಿಂದೂಗಳಿಗೆ ಈ ಮಾಹಿತಿ ತಿಳಿದಿರುವುದಿಲ್ಲ, ಇದೂ ಒಂದು ರೀತಿಯ ‘ಜಿಹಾದ್’ ಎಂದು ಹೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ.

  • ಹಿಂದೂಗಳ ಆಭರಣಗಳ ಕಲಾಕುಸರಿಯು ಹೆಚ್ಚಾಗಿ ಸಾತ್ತ್ವಿಕವಾಗಿರುತ್ತದೆ ಮತ್ತು ಅದರಿಂದ ಹಿಂದೂಗಳಿಗೆ ಆಧ್ಯಾತ್ಮಿಕ ಲಾಭವಾಗುತ್ತ್ತದೆ. ಆದ್ದರಿಂದ ಹಿಂದೂಗಳು ಆಭರಣಗಳನ್ನು ಖರೀದಿಸಿದಾಗ, ಅವುಗಳನ್ನು ಹಿಂದೂಗಳಿಗಾಗಿಯೇ ತಯಾರಿಸಲಾಗಿದೆಯೇ? ಇದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಅದರ ಕಲಾಕುಸರಿ ಸಾತ್ತ್ವಿಕವಾಗಿದೆಯೇ? ಎಂಬುದನ್ನು ಸಹ ನೋಡಬೇಕು !

ನವ ದೆಹಲಿ – `ತನಿಷ್ಕ ಜ್ಯುವೆಲ್ಲರಿ’ಯ ಹಿಂದೂದ್ವೇಷದ ಇನ್ನೊಂದು ಪ್ರಸಂಗ ಬೆಳಕಿಗೆ ಬಂದಿದೆ. ಈ ‘ಜ್ಯುವೆಲರಿ ಬ್ರಾಂಡ್’ನಲ್ಲಿ ಆಭರಣಗಳ ಪೈಕಿ, ಮುಸ್ಲಿಮರಿಗೆ ಬೇಕಾದ ಮಾದರಿಗೆ ಒಂದು ರೀತಿಯಲ್ಲಿ ಒತ್ತು ನೀಡಲಾಗಿದೆ, (ಮಾದರಿಗಳ ಆಯ್ಕೆಯು ಅಧಿಕ ಸಂಖ್ಯೆಯಲ್ಲಿವೆ) ಆದರೆ ಹಿಂದೂಗಳಿಗೆ ಮಾತ್ರ ಒಂದು ಆಭರಣ ನೀಡಲಾಗಿದೆ. ನೀವು ತನಿಷ್ಕ ಜ್ಯುವೆಲ್ಲರಿಯ ಜಾಲತಾಣಕ್ಕೆ ಹೋಗಿ ’ಮುಸ್ಲಿಂ’ ಹೆಸರಿನಲ್ಲಿ ಆಭರಣಗಳನ್ನು ಹುಡುಕಿದರೆ, ನೀವು ೩೫೨ ರೀತಿಯ ಆಭರಣಗಳನ್ನು ಕಾಣಬಹುದು, ಆದರೆ ನೀವು ‘ಹಿಂದೂ’ ಹೆಸರಿನಲ್ಲಿ ಹುಡುಕಿದರೆ ನಿಮಗೆ ಕೇವಲ ೧ ಆಭರಣ ಕಂಡುಬರುತ್ತವೆ. ‘ತನಿಷ್ಕ ಜ್ಯುವೆಲ್ಲರಿ’ ಇದು ‘ಟಾಟಾ ಗ್ರೂಪ್’ನ ‘ಟೈಟಾನ್’ ಕಂಪನಿಯ ಭಾಗವಾಗಿದೆ.