ನರಸಿಂಗಪುರ(ಮಧ್ಯಪ್ರದೇಶ)ದಲ್ಲಿ ಪೊಲೀಸರು ಸಾಮೂಹಿಕ ಅತ್ಯಾಚಾರದ ದೂರನ್ನು ದಾಖಲಿಸಿಕೊಳ್ಳದ ಕಾರಣ ಪೀಡಿತೆ ಆತ್ಮಹತ್ಯೆ

  • ದೂರನ್ನು ನೋಂದಾಯಿಸದಿರುವ ಪೊಲೀಸ್ ಅಧಿಕಾರಿ ಬಂಧನ !

  • ಮುಖ್ಯಮಂತ್ರಿಯವರ ಆದೇಶದ ನಂತರ ಕ್ರಮ

  • ಮುಖ್ಯಮಂತ್ರಿಗಳು ಆದೇಶ ನೀಡದಿರುತ್ತಿದ್ದರೆ ಇಂತಹ ಪೊಲೀಸರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿರಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಕಳ್ಳರು ಕಳ್ಳರಿಗೆ ಹಾಗೂ ಪೊಲೀಸರು ಅಪರಾಧಿಗಳಿಗೆ ಸಹಾಯ ಮಾಡುತ್ತಾರೆ, ಎಂದು ತಿಳಿಯಬೇಕೇ ?
  • ಇಂತಹ ಪೊಲೀಸರಿಗೆ ಗಲ್ಲಿಗೇರಿಸುವ ಶಿಕ್ಷೆ ನೀಡುವಂತೆ ಸರಕಾರ ಪ್ರಯತ್ನಿಸಿದರೇ ಮಾತ್ರ ಇತರರಲ್ಲಿ ಭಯ ನಿರ್ಮಾಣವಾಗಬಹುದು !
  • ಅತ್ಯಾಚಾರ ಮಾಡುವವರಿಗೆ ಶೀಘ್ರವಾಗಿ ಶಿಕ್ಷೆಯಾಗುವುದಿಲ್ಲ, ಒಂದು ವೇಳೆ ಆದರೂ ಆ ಶಿಕ್ಷೆ ಕಠೋರವಾಗಿರುವುದಿಲ್ಲ. ಈಗ ಪೊಲೀಸರೇ ಹೀಗೆ ವರ್ತಿಸುತ್ತಿದ್ದಲ್ಲಿ, ಪೀಡಿತೆಯು ಆತ್ಮಹತ್ಯೆ ಮಾಡಿಕೊಳ್ಳಬೇಕು, ಎಂದು ಆಡಳಿತದವರಿಗೆ ಅನಿಸುತ್ತದೆಯೇ ? ಇದು ಸರಕಾರಿ ವ್ಯವಸ್ಥೆಗೆ ನಾಚಿಕೆಯ ಸಂಗತಿಯಾಗಿದೆ !

ನರಸಿಂಗಪುರ(ಮಧ್ಯಪ್ರದೇಶ) – ಇಲ್ಲಿ ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ನಂತರ ಪೊಲೀಸರು ೪ ದಿನಗಳ ವರೆಗೆ ದೂರನ್ನು ನೊಂದಾಯಿಸದೇ ಇದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಳು.

ಇದಕ್ಕಾಗಿ ಜವಾಬ್ದಾರರಾದ ಓರ್ವ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ‘ಸ್ಥಳೀಯ ಪೊಲೀಸ್ ಅಧಿಕಾರಿಯ ವಿರುದ್ಧ ದೂರನ್ನು ದಾಖಲಿಸಬೇಕು’, ಎಂದು ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣ ಇವರು ಆದೇಶ ನೀಡಿದ ನಂತರ ಅವರನ್ನು ಬಂಧಿಸಲಾಗಿದೆ. ಈ ಆದೇಶದ ನಂತರ ಇಬ್ಬರು ಹಿರಿಯ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ. (ವರ್ಗಾವಣೆಯೆಂದರೆ ಸಂಬಂಧಪಟ್ಟವರು ಇತರ ಸ್ಥಳಗಳಲ್ಲಿ ಅಪರಾಧಗಳು ಮಾಡಲು ಸ್ವಾತಂತ್ರ್ಯ ಸಿಕ್ಕಿದಂತಾಗಿದೆ ! – ಸಂಪಾದಕರು) ೩ ಜನರು ಅತ್ಯಾಚಾರ ಮಾಡಿದ ನಂತರ ಈ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.