ಸೆಪ್ಟೆಂಬರ್ ೩೦ ರಿಂದ ಮಥುರಾದ ಶ್ರೀಕೃಷ್ಣಜನ್ಮಭೂಮಿಯ ಮುಕ್ತಿಯ ಅರ್ಜಿಯ ವಿಚಾರಣೆ ಆರಂಭ

ಮಥುರಾ (ಉತ್ತರ ಪ್ರದೇಶ) – ಇಲ್ಲಿ ಶ್ರೀಕೃಷ್ಣಜನ್ಮಭೂಮಿಯ ಮುಕ್ತಿಗಾಗಿ ಸ್ಥಳೀಯ ನ್ಯಾಯಾಲಯದಲ್ಲಿ ಹಿಂದೂ ಪಕ್ಷಕಾರರಿಂದ ಸಲ್ಲಿಸಿದ್ದ ಅರ್ಜಿಯ ಕುರಿತು ಸೆಪ್ಟೆಂಬರ್ ೨೮ ರಂದು ಆಲಿಕೆ ನಡೆಸಲಾಯಿತು. ಈ ಆಲಿಕೆಯಲ್ಲಿ ನ್ಯಾಯಾಲಯವು ಅರ್ಜಿಯನ್ನು ಅಂಗೀಕರಿಸಿತು ಮತ್ತು ಸೆಪ್ಟೆಂಬರ್ ೩೦ ರಂದು ಆಲಿಕೆಯನ್ನು ಆರಂಭಿಸಲು ನಿರ್ದೇಶಿಸಿತು. ಈ ಅರ್ಜಿಯಲ್ಲಿ ಶ್ರೀಕೃಷ್ಣಜನ್ಮಭೂಮಿ ಪ್ರದೇಶದಲ್ಲಿ ೧೩.೩೭ ಎಕರೆ ಜಮೀನಿನ ಮಾಲೀಕತ್ವದ ಅಧಿಕಾರದ ಬಗ್ಗೆ ತಿಳಿಸಲಾಗಿದೆ. ಅದೇರೀತಿ ಅಲ್ಲಿರುವ ಇದ್ಗಾಹ ಮಸೀದಿಯನ್ನು ತೆಗೆದುಹಾಕುವಂತೆ ಆಗ್ರಹಿಸಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರೊಂದಿಗೆ ಶ್ರೀಕೃಷ್ಣವಿರಾಜಮಾನ್‌ನ ಸಖಾ ಅಗ್ನಿಹೋತ್ರಿ ಇವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಬಾಬರಿ ಮಸೀದಿ ಕೆಡವಿದ ಪ್ರಕರಣದ ತೀರ್ಪು ಸೆಪ್ಟೆಂಬರ್ ೩೦ ರಂದು ಬರಲಿದೆ

ಶ್ರೀಕೃಷ್ಣಜನ್ಮಭೂಮಿ ಮರಳಿ ಪಡೆಯುವ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ ೩೦ ರಿಂದ ಆರಂಭಿಸಲಿದ್ದರೆ, ಅದೇ ದಿನ ಬಾಬರಿ ಮಸಿದಿ ಕೆಡವಿದ ಖಟ್ಲೆಯ ಬಗ್ಗೆ ಲಕ್ಷ್ಮಣಪುರಿಯ ವಿಶೇಷ ಸಿಬಿಐ ನ್ಯಾಯಾಲಯವು ತೀರ್ಪು ನೀಡಲಿದೆ.