ಮಂಡ್ಯದ ಅರ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ೩ ಅರ್ಚಕರನ್ನು ಹತ್ಯೆ ಮಾಡಿ ದರೋಡೆ

ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಬೆಂಗಳುರು – ಮಂಡ್ಯ ಜಿಲ್ಲೆಯ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ಅರ್ಚಕರಾಗಿ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದೇವಾಲಯದ ಆವರಣದಲ್ಲೇ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ದರೋಡೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ರಾತ್ರಿ ಸುಮಾರು ೧ ಗಂಟೆಯ ಸಮಯದಲ್ಲಿ ಮೂರುಜನರು ಮಲಗಿರುವಾಗ ಸಂಭವಿಸಿದೆ. ಪ್ರಾಥಮಿಕ ತನಿಖೆಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ಈ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ದೇವಸ್ಥಾನದ ಬಳಿ ಒಡೆದು ಹಾಕಿದ್ದ ಹುಂಡಿಯು ಪತ್ತೆಯಾಗಿದ್ದು ಅದರಲ್ಲಿ ನಾಣ್ಯಗಳನ್ನು ಬಿಟ್ಟು ನೋಟುಗಳನ್ನು ಮಾತ್ರ ದರೋಡೆ ಮಾಡಿದ್ದಾರೆಂದು ಕಂಡುಬಂದಿದೆ. ಕಳ್ಳರು ಮೂರಕ್ಕಿಂತ ಹೆಚ್ಚಿರಬಹುದು ಎಂದು ಊಹಿಸಲಾಗಿದ್ದು ಪೊಲೀಸರು ಶೋಧ ಕಾರ್ಯಾಚರಣೆಗೆ ಶ್ವಾನಗಳನ್ನು ಉಪಯೋಗಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಮೃತಪಟ್ಟ ಕುಟುಂಬದವರಿಗೆ ತಲಾ ೫ ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಈ ದೇವಸ್ಥಾನವು ನಗರದಿಂದ ದೂರವಿದೆ. ಆದ್ದರಿಂದ ದರೋಡೆಕೋರರು ಈ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದೇವಸ್ಥಾನದ ಅರ್ಚಕರಲ್ಲಿ ಒಬ್ಬರಾದ ಗಿರೀಶ ಇವರು, ಈ ಹಿಂದೆ ಎಂದಿಗೂ ದೇವಸ್ಥಾನದಲ್ಲಿ ಕಳ್ಳತನದ ಘಟನೆ ನಡೆದಿಲ್ಲ. ಕಳ್ಳರು ಎಷ್ಟು ಇದ್ದರು ಎಂಬುದು ಗೊತ್ತಾಗಲಿಲ್ಲ. ನಾವು ಬೆಳಿಗ್ಗೆ ೬ ಗಂಟೆಗೆ ದೇವಸ್ಥಾನಕ್ಕೆ ಬಂದೆವು, ಆಗ ಈ ಘಟನೆ ಬೆಳಕಿಗೆ ಬಂದಿತು ಎಂದು ಹೇಳಿದರು.