‘ಉತ್ತಮ ಆಹಾರ ಹಾಗೂ ದೈಹಿಕ ಸಂಬಂಧಗಳಿಂದ ಸಿಗುವ ಆನಂದ ದಿವ್ಯವಾಗಿರುತ್ತದೆ (ಯಂತೆ) !’ – ಪೋಪ್ ಫ್ರಾನ್ಸಿಸ್

  • ಸುಖ ಹಾಗೂ ಆನಂದ ಇವುಗಳ ಅರ್ಥವು ತಿಳಿಯದಿರುವ ಇತರ ಪಂಥಗಳು ! ಉತ್ತಮ ಆಹಾರ ಹಾಗೂ ದೈಹಿಕ ಸಂಬಂಧದಿಂದ ಕೇವಲ ಸುಖ ಸಿಗುತ್ತದೆ, ಅದು ಕ್ಷಣಿಕವಾಗಿರುತ್ತದೆ ಹಾಗೂ ಅದು ಅತಿಯಾದರೆ ದುಃಖದಲ್ಲಿ ರೂಪಾಂತರವಾಗುತ್ತದೆ. ತದ್ವಿರುದ್ಧ ಸಾಧನೆಯನ್ನು ಮಾಡುವುದರಿಂದ ಆನಂದ ಸಿಗುತ್ತದೆ, ಅದು ಚಿರಂತನವಾಗಿ ಉಳಿಯುತ್ತದೆ ! ಈ ಉದಾತ್ತ ಅಧ್ಯಾತ್ಮಶಾಸ್ತ್ರದ ದೃಷ್ಟಿಕೋನವನ್ನು ಕೇವಲ ಹಿಂದೂ ಧರ್ಮವೇ ಕಲಿಸುತ್ತದೆ ಹಾಗೂ ಮಾನವನಿಗೆ ಸಾಧನೆಯ ಮಹತ್ವವನ್ನು ಹೇಳಿ ಸುಖ-ದುಃಖದಲ್ಲಿ ಸಿಲುಕಿಸದೇ ಅದರ ಆಚೆಗಿರುವ ಆನಂದವನ್ನು ಅನುಭವಿಸಲು ಕಲಿಸುತ್ತದೆ !

  • ಹಿಂದೂ ಧರ್ಮಶಾಸ್ತ್ರದಲ್ಲಿ ಅದನ್ನು ಮೀರಿ ಸಿಗುವಂತಹ ಆನಂದದ ಬಗ್ಗೆ ಅಂದರೆ ಸಚ್ಚಿದಾನಂದದ ಬಗ್ಗೆ ಹೇಳಲಾಗಿದ್ದು ಭಾರತೀಯ ಸಾಧು, ಸಂತರು ಅದೇರೀತಿ ಉನ್ನತ ವ್ಯಕ್ತಿಗಳು ಸಾಧನೆಯನ್ನು ಮಾಡಿ ಈ ಅತ್ಯುನ್ನತ ದೈವೀ ಆನಂದವನ್ನು ಅನುಭವಿಸುತ್ತಿರುತ್ತಾರೆ ! ಈ ಆನಂದದ ಮುಂದೆ ಉತ್ತಮ ಆಹಾರ ಅಥವಾ ದೈಹಿಕ ಸಂಬಂಧದಿಂದಾಗಿ ಸಿಗುವ ಸುಖ ಕ್ಷುಲ್ಲಕವಾಗಿ ಕಂಡುಬರುತ್ತದೆ !

ವ್ಯಾಟಿಕನ್ ಸಿಟಿ – ಯಾವುದೇ ರೀತಿಯ ಆನಂದ ನಮಗೆ ಪ್ರತ್ಯಕ್ಷವಾಗಿ ದೇವರಿಂದ ಸಿಗುತ್ತಿರುತ್ತದೆ. ಅದು ಕ್ಯಾಥೊಲಿಕ್ ಕ್ರೈಸ್ತ ಅಥವಾ ಇನ್ನಾವುದೇ ಇರುವುದಿಲ್ಲ, ಅದು ಕೇವಲ ದಿವ್ಯವಾಗಿರುತ್ತದೆ. ಉತ್ತಮವಾದ ಬೇಯಿಸಿದ ಆಹಾರ ಹಾಗೂ ದೈಹಿಕ ಸಂಬಂಧದಿಂದಾಗಿ ಸಿಗುವ ಆನಂದ ದಿವ್ಯವಾಗಿರುತ್ತದೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಹೇಳಿದ್ದಾರೆ. ಅವರು ಇಟಲಿಯ ಓರ್ವ ಲೇಖಕನಿಗೆ ಪುಸ್ತಕಕ್ಕಾಗಿ ನೀಡಿದ ಸಂದರ್ಶನದ ಸಮಯದಲ್ಲಿ ಮಾತನಾಡುತ್ತಿದ್ದರು.

ಪೋಪ್ ಫ್ರಾನ್ಸಿಸ್ ಅವರು ತಮ್ಮ ಮಾತನ್ನು ಮುಂದುವರಿಸುತ್ತಾ,

೧. ಚರ್ಚ್ ಯಾವಾಗಲೂ ಅಮಾನವೀಯ ಹಾಗೂ ಕ್ರೂರತೆಯ ಆನಂದವನ್ನು ಖಂಡಿಸಿದೆ; ಆದರೆ ಇನ್ನೊಂದೆಡೆ ಮಾನವೀಯ ಸರಳ ಹಾಗೂ ನೈತಿಕ ಸುಖವನ್ನು ಸ್ವೀಕರಿಸಿದೆ.

೨. ಈಶ್ವರನ ದೃಷ್ಟಿಯಲ್ಲಿ ಅಸೂಯೆ ಇಲ್ಲದ ನೈತಿಕತೆ ಎಲ್ಲೆಡೆ ಸುಖವನ್ನು ನೀಡುತ್ತದೆ. ಈ ವಿಷಯಗಳನ್ನು ಹಿಂದೆ ಚರ್ಚ್ ಅನುಸರಿಸುತ್ತಿತ್ತು; ಆದರೆ ಕ್ರಮೇಣ ಕ್ರೈಸ್ತರ ಈ ಸಂದೇಶವನ್ನು ತಪ್ಪಾಗಿ ಅರ್ಥೈಸಲು ಪ್ರಾರಂಭಿಸಲಾಯಿತು.

೩. ತಿನ್ನುವ ಆನಂದವು ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ. ಅದೇರೀತಿ ಲೈಂಗಿಕ ಸುಖ ನಿಮ್ಮನ್ನು ಪ್ರೀತಿ ಹಾಗೂ ಸುಂದರವನ್ನಾಗಿಸುತ್ತದೆ. ಆದ್ದರಿಂದ ಬೇರೆ ಬೇರೆ ಪ್ರಜಾತಿಗಳ ಅಸ್ತಿತ್ವವೂ ಶಾಶ್ವತವಾಗಿರುತ್ತದೆ ಎಂದು ಹೇಳಿದರು.