ಎಲ್ಲ ೧೩ ಆಖಾಡಾಗಳು ಒಟ್ಟಾಗಿ ಸಭೆ ನಡೆಸಿ ಠರಾವಿಗೆ ಒಪ್ಪಿಗೆ ನೀಡಿದರು
|
ನವದೆಹಲಿ – ಅಯೋಧ್ಯೆಯಲ್ಲಿ ರಾಮಜನ್ಮಭೂಮಿಗಾಗಿ ಹೋರಾಡಿದಂತೆ ವಾರಣಾಸಿಯ ಶ್ರೀ ಕಾಶಿವಿಶ್ವನಾಥ ದೇವಸ್ಥಾನ ಹಾಗೂ ಮಥುರಾದ ಶ್ರೀ ಕೃಷ್ಣಜನ್ಮಭೂಮಿಯನ್ನು ಮುಕ್ತ ಮಾಡಲು ನಾವು ಮುಂದಾಳತ್ವ ವಹಿಸುವೆವು, ಎಂದು ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಮಹಾರಾಜ ಇವರು ಮಾಹಿತಿಯನ್ನು ನೀಡಿದರು. ಮಹಂತ ನರೇಂದ್ರ ಗಿರಿ ಮಹಾರಾಜರ ನೇತೃತ್ವದಡಿಯಲ್ಲಿ ಎಲ್ಲ ೧೩ ಆಖಾಡಾದ ಮುಖಂಡರೊಂದಿಗೆ ಪ್ರಯಾಗರಾಜನಲ್ಲಿ ನಡೆದ ಸಭೆಯಲ್ಲಿ ಈ ಠರಾವಿಗೆ ಒಪ್ಪಿಗೆ ನೀಡಲಾಯಿತು.
ಮಹಂತ ನರೇಂದ್ರ ಗಿರಿ ಮಹಾರಾಜರು ತಮ್ಮ ಮಾತನ್ನು ಮುಂದುವರೆಸುತ್ತಾ, “ಮೊಗಲಶಾಹಿ ಮುಸಲ್ಮಾನ ಆಕ್ರಮಣಕಾರರು ಹಾಗೂ ಭಯೋತ್ಪಾದಕರು ನಮ್ಮ ದೇವಸ್ಥಾನಗಳನ್ನು ಧ್ವಂಸ ಮಾಡಿ ಆ ಸ್ಥಳಗಳಲ್ಲಿ ಮಸೀದಿ ಹಾಗೂ ಗೋರಿಳನ್ನು ನಿರ್ಮಸಿದರು. ಹೇಗೆ ಸಂತರು ಅಯೋಧ್ಯೆಯ ರಾಮಜನ್ಮಭೂಮಿಯ ಮುಕ್ತಿಗಾಗಿ ಅಭಿಯಾನವನ್ನು ಹಮ್ಮಿಕೊಂಡಿದ್ದರೋ ಹಾಗೂ ಆ ಪ್ರಕರಣ ಇತ್ಯರ್ಥವಾಗುವ ತನಕ ಪಟ್ಟು ಹಿಡಿದರೋ, ಅದೇ ರೀತಿ ವಾರಣಾಸಿ ಹಾಗೂ ಮಥುರಾ ಸಂದರ್ಭದಲ್ಲೂ ಮಾಡುವಂತೆ ನಿರ್ಧರಿದ್ದೇವೆ. ವಾರಣಾಸಿ ಹಾಗೂ ಮಥುರಾದ ಹಿಂದೂಗಳ ದೇವಸ್ಥಾನಗಳನ್ನು ಒಡೆದಿರುವ ಬಗ್ಗೆ ಆಖಾಡಾ ಪರಿಷತ್ತಿನ ವತಿಯಿಂದ ದೂರನ್ನೂ ದಾಖಲಿಸಲಾಗುವುದು. ದೇವಸ್ಥಾನವನ್ನು ಮುಕ್ತ ಮಾಡಲು ಕಾನೂನಿನ ಹೋರಾಟಕ್ಕಾಗಿ ನಾವು ವಿಶ್ವ ಹಿಂದೂ ಪರಿಷತ್ತು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಂತಹ ಹಿಂದೂತ್ವನಿಷ್ಠ ಸಂಘಟನೆಗಳ ಸಹಾಯವನ್ನು ಪಡೆದುಕೊಳ್ಳಲಿದ್ದೇವೆ. ಕಾನೂನಿನ ಈ ಹೋರಾಟದ ತೀರ್ಪು ನಮ್ಮ ಪರವಾಗಿಯೇ ಬರುವುದು ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.