|
ಬೆಂಗಳೂರು – ಬೆಂಗಳೂರಿನ ಆರ್ಚ್‌ಬಿಶಪ ಪೀಟರ ಮಚಾಡೊ ಇವರು ಕೋಟಿಗಟ್ಟಲೆ ರೂಪಾಯಿಯ ವಂಚನೆ ಮಾಡಿದ್ದಾರೆ ಎಂದು ‘ಕರ್ನಾಟಕ ಕ್ಯಾಥೊಲಿಕ ಕ್ರಿಶ್ಚಿಯನ್ ಅಸೋಸಿಯೇಶನ್’ (‘ಕೆ.ಸಿ.ಸಿ.ಎ.’ಯು) ಆರೋಪಿಸಿದೆ. ಪೋಪ್ ಫ್ರಾನ್ಸಿಸ್ ಇವರು ಮಚಾಡೊ ಇವರನ್ನು ಆರ್ಚ್‌ಬಿಶಪ ಎಂದು ನೇಮಿಸಿದ್ದಾರೆ. ಮಚಾಡೊ ಇವರು ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಿದ್ದರು.
Oh Lord, please forgive this Archbishop!
* Bengaluru Archbishop Peter Machado had criticized CAA just bcoz it saved persecuted Pakistani Hindus
* But now this Archbishop is accused of multi million dollar scam
Why CAA-haters always end up doing anti-social activities?
— Mahesh Vikram Hegde (@mvmeet) September 5, 2020
೧. ಈ ಹಗರಣದ ಬಗ್ಗೆ ತನಿಖೆ ಮಾಡುವಂತೆ ‘ಕೆ.ಸಿ.ಸಿ.ಎ.’ಯು ಜಾರಿ ನಿರ್ದೇಶನಾಲಯದ ಬಳಿ ಆಗ್ರಹಿಸಿದೆ. ಮಚಾಡೊ ನೇತೃತ್ವದ ‘ಆಶಾ ಚಾರಿಟೇಬಲ್ ಟ್ರಸ್ಟ್’ ಇದು ೨೨ ಸಾವಿರದ ೪೭ ಕೋಟಿ ೯೩ ಲಕ್ಷ ರೂಪಾಯಿಗಳ ಹಗರಣ ಮಾಡಿದೆ ಎಂದು ಈ ಸಂಘಟನೆಯು ಆರೋಪಿಸಿದೆ.
೨. ಈ ಆರೋಪಗಳ ಬಗ್ಗೆ ಮಚಾಡೊರವರು, ನಾನು ತನಿಖೆಗಾಗಿ ಸಿದ್ಧನಿದ್ದೇನೆ. ನನ್ನಲ್ಲಿ ಮುಚ್ಚಿಡುವಂತಹದ್ದೇನು ಇಲ್ಲ. ಚಿಕ್ಕವಿಷಯವನ್ನು ದೊಡ್ಡದಾಗಿ ಮಾಡುವ ಪ್ರಯತ್ನವಾಗುತ್ತಿದೆ. ತದ್ವಿರುದ್ಧವಾಗಿ ಒಂದು ಹಗರಣದ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಟ್ರಸ್ಟ್‌ನ ಓರ್ವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಈ ಬಗ್ಗೆ ಬೆಂಗಳೂರು ಪೊಲೀಸರಿಂದ ತನಿಖೆಯೂ ನಡೆಯುತ್ತಿದೆ, ಎಂದು ಹೇಳಿದ್ದಾರೆ.
೩. ಈ ಹಿಂದೆ ೨೦೧೮ ರಲ್ಲಿ ಕರ್ನಾಟನ ಉಚ್ಚನ್ಯಾಯಾಲಯವು ಮಚಾಡೊ ಹಾಗೂ ಮೈಸೂರಿನ ಬಿಶಪ ಕೆ.ಎ.ವಿಲ್ಯಮ್ ಇವರಿಗೆ ೪೯ ಕೋಟಿ ೫೦ ಲಕ್ಷ ರೂಪಾಯಿಯ ಹಗರಣ ಮಾಡಿರುವ ಪ್ರಕರಣದಲ್ಲಿ ದೋಷಿಗಳೆಂದು ನಿರ್ಧರಿಸಿದ್ದರು. ಅವರು ಈ ಹಣವನ್ನು ನೆರೆಪೀಡಿತರ ಸಹಾಯಕ್ಕಾಗಿ ಅರ್ಪಣೆ ಎಂದು ಸಂಗ್ರಹಿಸಿದ್ದರು. (ಇದು ಕ್ರೈಸ್ತ ಪಾದ್ರಿಗಳ ನೈಜರೂಪ ! ಅರ್ಪಣೆಯ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಿ ಅದನ್ನು ಲೂಟಿ ಮಾಡಿದ್ದರ ಬಗ್ಗೆ ಭಾರತದ ತಥಾಕಥಿತ ಪ್ರಗತಿ(ಅಧೋಗತಿ)ಪರರು ಹಾಗೂ ಜಾತ್ಯತೀತವಾದಿ ಪ್ರಸಾರ ಮಾಧ್ಯಮಗಳು ಬಾಯಿ ಬಿಡುವುದಿಲ್ಲ. ಇದೇ ಏನಾದರೂ ಓರ್ವ ಹಿಂದೂ ಅರ್ಚಕ ಇರುತ್ತಿದ್ದರೆ, ಕೂಡಲೇ ಹಿಂದೂ ಧರ್ಮದ ಮೇಲೆ ಕೆಸರೆರಚಾಟ ನಡೆಯುತ್ತಿತ್ತು ! – ಸಂಪಾದಕರು)