ದೇಶದ ಹೆಚ್ಚಿನ ಚಿತ್ರರಂಗಗಳಲ್ಲಿ ಮಾದಕ ವಸ್ತುಗಳ ಸೇವನೆ ಮಾಡಲಾಗುತ್ತಿದೆ, ಇದು ಎಲ್ಲರಿಗೂ ಗೊತ್ತಿದ್ದರೂ ಸ್ಥಳೀಯ ರಾಜ್ಯ ಸರಕಾರಗಳು ಹಾಗೂ ಕೇಂದ್ರ ಸರಕಾರಗಳ ಮಾದಕವಸ್ತು ನಿಯಂತ್ರಣ ದಳವು ಕ್ರಮ ಕೈಗೊಳ್ಳುವುದಿಲ್ಲ, ಅದರ ಹಿಂದೆ ಪರಸ್ಪರಲ್ಲಿ ಹಿತವನ್ನು ನೋಡುತ್ತಿರುತ್ತಾರೆ, ಎಂದು ಜನರಿಗೆ ಅನಿಸಿದರೆ ತಪ್ಪೇನಿದೆ ?
ಚೆನ್ನೈ – ದಕ್ಷಿಣದ ಚಿತ್ರರಂಗದಲ್ಲಿಯ (‘ಟಾಲಿವುಡ್’ನ) ಅನೇಕ ದೊಡ್ಡ ಕಲಾವಿದರು ಮಾದಕ ವಸ್ತುಗಳ ಸೇವನೆಯನ್ನು ಮಾಡುತ್ತಾರೆ. ಅಲ್ಲಿಯ ದೊಡ್ಡ ದೊಡ್ಡ ಸಮಾರಂಭಗಳು (ಪಾರ್ಟಿ) ಮಾದಕ ವಸ್ತುಗಳನ್ನು ಸೇವಿಸದೇ ಮುಗಿಯುವುದಿಲ್ಲ.
After Kangana Ranaut's Explosive Allegations, Actress Madhavi Latha Claims 'No Party Exists Without Drugs In Tollywood'#KanganaRanaut #MadhaviLatha #Tollywood https://t.co/L9AoyOX48r
— ABP News (@ABPNews) September 3, 2020
ಅಂದರೆ ಇದರ ಬಗ್ಗೆ ಪೊಲೀಸರಿಗೆ ತಿಳಿದಿರುತ್ತದೆ; ಆದರೆ ಆ ಕಲಾವಿದರ ನಂಟು ರಾಜಕೀಯ ಹಿತಚಿಂತಕರೊಂದಿಗೆ ಇರುವುದರಿಂದ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗುವುದಿಲ್ಲ, ಎಂದು ದಕ್ಷಿಣ ಭಾಗದ ನಟಿ ಮಾಧವಿ ಲತಾ ಇವರು ಒಂದು ತಮಿಳು ದಿನಪತ್ರಿಕೆಗೆ ನೀಡಿದೆ ಸಂದರ್ಶನದಲ್ಲಿ ಹೇಳಿದರು. ಈ ಹಿಂದೆ ‘ಹಿಂದಿ ಚಿತ್ರರಂಗದಲ್ಲಿ (‘ಬಾಲಿವುಡ್’ನಲ್ಲಿ) ಸಮಾರಂಭಗಳು ಮಾದಕ ವಸ್ತುಗಳಿಲ್ಲದೇ ಆಗುವುದೇ ಇಲ್ಲ’, ಎಂದು ನಟಿ ಕಂಗನಾ ರನೌತ್ ಇವರು ಹೇಳಿದ್ದರು.