-
ನ್ಯಾಯಸಮ್ಮತ ಮಾರ್ಗದಿಂದ ವಿರೋಧಿಸಿ ಧರ್ಮಹಾನಿಯನ್ನು ತಡೆಗಟ್ಟಿದ ಎಲ್ಲ ಹಿಂದೂಗಳಿಗೆ ಅಭಿನಂದನೆಗಳು !
-
ಜನರಿಗೆ ಹೀಗೇಕೆ ವಿರೋಧ ಮಾಡಬೇಕಾಗುತ್ತದೆ ? ಪೊಲೀಸ್ ಹಾಗೂ ಆಡಳಿತಕ್ಕೆ ಇಂತಹ ಅಯೋಗ್ಯ ಅಂಶಗಳತ್ತ ಗಮನ ಇರುವುದಿಲ್ಲವೇ ? ಇಂತಹ ಅಂಶಗಳಿಂದಾಗಿ ನಾಳೆ ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯ ನಿರ್ಮಾಣವಾದ ನಂತರ ಪೊಲೀಸ್ ಹಾಗೂ ಆಡಳಿತ ಎಚ್ಚೆತ್ತುಕೊಳ್ಳುವುದೇ ?
ಮುಂಬಯಿ – ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ‘ಫಿಪ್‌ಕಾರ್ಟ್’ ಈ ಸಂಸ್ಥೆಯು ಶ್ರೀ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಒಂದು ಬ್ಯಾಂಕಿನ ವಿಷಯದಲ್ಲಿ ರಿಯಾಯತಿಯನ್ನು ನೀಡುವ ಜಾಹೀರಾತನ್ನು ಪ್ರಸಾರ ಮಾಡಿದ್ದರು. ಈ ಜಾಹೀರಾತಿನಲ್ಲಿ ಭಗವಾನ ಶ್ರೀ ಗಣೇಶನ ಸೊಂಡಲಿನಲ್ಲಿ ಸಂಚಾರವಾಣಿ ಹಿಡಿದಿರುವಂತೆ ತೋರಿಸಲಾಗಿತ್ತು. ಇದರ ಬಗ್ಗೆ ಧರ್ಮಪ್ರೇಮಿಗಳು ಹಿಂದೂ ಜನಜಾಗೃತಿ ಸಮಿತಿಗೆ ತಿಳಿಸಿದ ನಂತರ ಸಮಿತಿಯಿಂದ ನ್ಯಾಯಸಮ್ಮತ ಮಾರ್ಗದಿಂದ ವಿರೋಧಿಸುವಂತೆ ಕರೆ ನೀಡಿತ್ತು. ಅದಕ್ಕೆ ಧರ್ಮಪ್ರೇಮಿಗಳಿಂದ ಒಳ್ಳೆಯ ಸ್ಪಂದನೆ ಸಿಕ್ಕಿದ್ದರಿಂದ ಅದಕ್ಕೆ ನ್ಯಾಯಸಮ್ಮತ ಮಾರ್ಗದಿಂದ ತೀವ್ರ ವಿರೋಧ ಮಾಡಲಾಯಿತು. ಇದರಿಂದಾಗಿ ‘ಫ್ಲಿಪ್‌ಕಾರ್ಟ್’ನಿಂದ ಈ ಜಾಹೀರಾತಿನಲ್ಲಿದ್ದ ಭಗವಾನ ಶ್ರೀ ಗಣೇಶನ ಚಿತ್ರವನ್ನು ತೆಗೆಯಲಾಯಿತು.