‘ವಂದೇ ಭಾರತ’ ರೈಲಿನ ಗುತ್ತಿಗೆ ರದ್ದು, ಚೀನಾದ ಕಂಪನಿಗೆ ಆಘಾತ

ನವ ದೆಹಲಿ – ಕೇಂದ್ರ ಸರಕಾರದಿಂದ ೪೪ ಸೆಮಿ ಹೈ ಸ್ಪೀಡ್ ‘ವಂದೇ ಭಾರತ’ ಈ ರೈಲಿನ ಗುತ್ತಿಗೆಯನ್ನು ರದ್ದುಪಡಿಸಿದೆ ಎಂದು ರೈಲ್ವೆ ಸಚಿವಾಲಯದಿಂದ ಮಾಹಿತಿ ಸಿಕ್ಕಿದೆ, ರೇಲ್ವೆಯಿಂದ ಮುಂದಿನ ೧ ವಾರಗಳಲ್ಲಿ ಹೊಸದಾಗಿ ಗುತ್ತಿಗೆಯನ್ನು ನೀಡಲಿದ್ದು ಅದರಲ್ಲಿ ಕೇಂದ್ರ ಸರಕಾರದ ‘ಮೇಕ್ ಇನ್ ಇಂಡಿಯಾ’ ಅಂತರ್ಗತದಲ್ಲಿ ಆದ್ಯತೆಯನ್ನು ನೀಡಲಾಗುವುದು. ಈ ರೈಲಿನ ಪೂರೈಕೆಗಾಗಿ ಇರುವ ಸ್ಪರ್ಧೆಯಲ್ಲಿ ಚೀನಾದ ಕಂಪನಿಯೊಂದಿಗೆ ಪಾಲುದಾರರಾಗಿರುವ ‘ಸಿಆರ್‌ಸಿ ಪಯೋನಿರ್ ಇಲೆಕ್ಟ್ರಿಕ್ (ಇಂಡಿಯಾ) ಪ್ರಾ.ಲಿ.’ ಇದೊಂದೇ ವಿದೇಶಿ ಕಂಪನಿ ಇತ್ತು. ಆದ್ದರಿಂದ ಈ ಗುತ್ತಿಗೆಯನ್ನು ರದ್ದು ಪಡಿಸಿ ಸರಕಾರವು ಚೀನಾಗೆ ಆಘಾತ ನೀಡಿದೆ. ಚೀನಾದ ‘ಸಿಆರ್‌ಸಿ ಯೊಂಗಿಜಿ ಇಲೆಕ್ಟ್ರಿಕ್ ಕಂಪನಿ ಲಿಮಿಟೆಡ್’ ಹಾಗೂ ಗುರುಗ್ರಾಮದಲ್ಲಿರುವ ‘ಪಯೋನಿರ್ ಫೀಲ್ ಮೇಡ್ ಪ್ರಾ.ಲಿ.’ ಇವು ೨೦೧೫ ರಲ್ಲಿ ಈ ಕಂಪನಿಯನ್ನು ಆರಂಭಿಸಿದ್ದವು.