ದೆಹಲಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕನ ಬಂಧನ; ಸ್ಫೋಟಕಗಳು ಜಪ್ತಿ

ಭಯೋತ್ಪಾದನೆಯ ಸಂಪೂರ್ಣ ನಿರ್ನಾಮಕ್ಕೆ ಹಿಂದೂ ರಾಷ್ಟ್ರವೇ ಬೇಕು !

ಹಿಂದೂಗಳನ್ನು ಭಯೋತ್ಪಾದಕರೆಂದು ಹೇಳಿ ‘ಹಿಂದೂ ಭಯೋತ್ಪಾದನೆ’ ಎಂದು ಪದೇ ಪದೇ ಹೇಳುವ ಕಾಂಗ್ರೆಸ್‌ನವರು, ಪ್ರಗತಿ(ಅಧೋಗತಿ)ಪರರು, ಸಾಮ್ಯವಾದಿಗಳು, ಹಿಂದೂದ್ವೇಷಿ ಮಾಧ್ಯಮಗಳು ಈಗ ಒಂದು ಪದವನ್ನೂ ಉಚ್ಚರಿಸುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ನವ ದೆಹಲಿ – ಪೊಲೀಸರ ವಿಶೇಷ ಪಡೆಯು ಇಲ್ಲಿಯ ಧೌಲಾ ಕುಂವಾ ರಿಂಗ್ ರೋಡ್ ಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್‌ನ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನನ್ನು ಬಂಧಿಸಿದೆ. ಅಬ್ದುಲ್ ಯುಸುಫ್‌ನನ್ನು ಬಂಧಿಸಿದ್ದು ಆತನಿಂದ ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಗನುಸಾರ ಪೊಲೀಸ್ ಪಡೆ ಜಾಗರೂಕರಾಗಿ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿತು. ಈ ಸಮಯದಲ್ಲಿ ಚಕಮಕಿ ಆರಂಭವಾಯಿತು. ನಂತರ ಪೊಲೀಸರು ಅಬ್ದುಲನನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ವಿಶೇಷ ಪೊಲೀಸ್ ಪಡೆಯ ಉಪಾಯುಕ್ತ ಪ್ರಮೋದ್‌ಸಿಂಹ ಕುಶವಾಹ ಇವರು ಮಾಹಿತಿ ನೀಡಿದರು.

ಅಬೂ ಯುಸುಫ್ ಉತ್ತರ ಪ್ರದೇಶದ ಬಲರಾಮಪುರದವನಾಗಿದ್ದು ದೆಹಲಿಯಲ್ಲಿ ಕೆಲವು ಸಹಚರರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ. ಈ ಕಾರ್ಯಾಚರಣೆಯ ನಂತರ ಪೊಲೀಸರು ಆತನ ಸಹಚರರನ್ನು ಹುಡುಕುತ್ತಿದ್ದಾರೆ. ಅದೇರೀತಿ ಘಟನಾ ಸ್ಥಳದ ಪರಿಸರದಲ್ಲಿ ಪೊಲೀಸರು ರೇಡ್ ಮಾಡುತ್ತಿದ್ದಾರೆ. ಅಬೂ ಯುಸುಫನನ್ನು ಬಂಧಿಸಿದ್ದರಿಂದ ದೊಡ್ಡ ರಕ್ತಪಾತದ ಸಂಚನ್ನು ವಿಫಲಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಭಯೋತ್ಪಾದಕರ ಗುರಿ ದೆಹಲಿಯ ಕೆಲವು ಗಣ್ಯವ್ಯಕ್ತಿಗಳಿದ್ದರು, ಎಂದು ಹೇಳಲಾಗುತ್ತಿದೆ.