ಚೆನ್ನೈನ ವರಸಿದ್ಧಿ ವಿನಾಯಗರ್ ದೇವಸ್ಥಾನದಲ್ಲಿ ೧೦೮ ತೆಂಗಿನಕಾಯಿ ಒಡೆದಿದ್ದರಿಂದ ಕಮಲಾ ಹ್ಯಾರಿಸ್ ಇವರಿಗೆ ಇಲ್ಲಿಯವರೆಗೆ ಚುನಾವಣೆಯಲ್ಲಿ ಗೆಲುವು

ಕಮಲಾರವರ ಇಲ್ಲಿಯವರೆಗಿನ ಚುನಾವಣೆಯಲ್ಲಿ ಗೆಲುವಿನ ರಹಸ್ಯ ಬಿಚ್ಚಿಟ್ಟ ಅವರ ಚಿಕ್ಕಮ್ಮ

ಈ ಬಗ್ಗೆ ನಾಸ್ತಿಕವಾದಿ, ತಥಾಕಥಿತ ಬುದ್ಧಿಜೀವಿಗಳು ಹಾಗೂ ಆಧುನಿಕವಾದಿಗಳಿಗೆ ಏನು ಹೇಳಲಿಕ್ಕೆ ಇದೆ?

ಕಮಲಾ ಹ್ಯಾರಿಸ್

ವಾಶಿಂಗ್‌ಟನ್ – ಅಮೇರಿಕಾದಲ್ಲಿ ಮುಂಬರುವ ಸಾರ್ವಜನಿಕ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಾಯಡೆನ ಇವರು ಉಪಾಧ್ಯಕ್ಷ ಸ್ಥಾನಕ್ಕಾಗಿ ಭಾರತೀಯ ಸಂಜಾತೆ ಸಿನೆಟರ ಕಮಲಾ ಹ್ಯಾರಿಸ್‌ನನ್ನು ಆರಿಸಿದ್ದಾರೆ. ಕಮಲಾನ ಬಗ್ಗೆ ಆಕೆಯ ಚಿಕ್ಕಮ್ಮ ಸರಳಾ ಗೋಪಾಲನ್ ಇವರು ಕಮಲಾದ ಇಲ್ಲಿಯವರೆಗಿನ ಚುನಾವಣೆಯಲ್ಲಿನ ಗೆಲುವಿನ ರಹಸ್ಯವನ್ನು ಒಂದು ಸಂದರ್ಶನದಲ್ಲಿ ಹೇಳಿದರು.

ಸರಳಾ ಗೋಪಾಲನ ಇವರು ಮಾತನಾಡುತ್ತಾ, ‘ಕಮಲಾಳು ಇಲ್ಲಿಯವರೆಗೆ ಚುನಾವಣೆಗಳಲ್ಲಿ ಸ್ಪರ್ಧಿಸಿದಾಗಲೆಲ್ಲ ನಾನು ಚೆನ್ನೈನಲ್ಲಿಯ ಬೆಸಂತ ನಗರದಲ್ಲಿಯ ವರಸಿದ್ಧಿ ವಿನಾಯಗರ್ ದೇವಸ್ಥಾನದಲ್ಲಿ ೧೦೮ ತೆಂಗಿನ ಕಾಯಿ ಒಡೆದಿದ್ದೇನೆ. ಆದ್ದರಿಂದಲೇ ಕಮಲಾ ಪ್ರತಿಯೊಂದು ಚುನಾವಣೆಯಲ್ಲಿ ಜಯ ಸಾಧಿಸಿದ್ದಾಳೆ. ಕೆಲವು ವರ್ಷಗಳ ಹಿಂದೆ ಯಾವಾಗ ಕಮಲಾಳು ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಸ್ಥಾನಕ್ಕಾಗಿ ಚುನಾವಣೆ ಸ್ಪರ್ಧಿಸಿದ್ದಳೋ, ಆಗ ಆಕೆಯು ತನ್ನ ಗೆಲುವಿಗಾಗಿ ನನಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಹೇಳಿದ್ದಳು ಅದೇರೀತಿ ತೆಂಗಿನ ಕಾಯಿ ಒಡೆಯಲು ಹೇಳಿದ್ದಳು. ಆಗ ನಾನು ದೇವಸ್ಥಾನದಲ್ಲಿ ೧೦೮ ತೆಂಗಿನಕಾಯಿ ಒಡೆದಿದ್ದೆ ಹಾಗೂ ಆಕೆ ಚುನಾವಣೆಯಲ್ಲಿ ಜಯಶಾಲಿಯಾಗಿದ್ದಳು. ಆ ಸಮಯದಲ್ಲಿ ಕಮಲಾಳು ನನಗೆ ಕರೆ ಮಾಡಿ ತೆಂಗಿನಕಾಯಿ ಒಡೆದಿದ್ದರಿಂದಲೇ ಗೆದ್ದೆನು ಎಂದು ಹೇಳಿದ್ದಾಳೆ. ನಂತರ ಕೆಲವು ವರ್ಷಗಳ ನಂತರ ಕಮಲಾರವರರು ಸಿನೆಟರ ಸ್ಥಾನಕ್ಕಾಗಿ ಚುನಾವಣೆ ಸ್ಪರ್ಧಿಸಿದಾಗಲೂ ಅವರ ತಾಯಿ ಶ್ಯಾಮಲಾ ಗೋಪಾಲನ್ ಇದೇ ದೇವಸ್ಥಾನಕ್ಕೆ ಹೋಗಿ ೧೦೮ ತೆಂಗಿನಕಾಯಿ ಒಡೆದಿದ್ದರು. ಆ ಚುನಾವಣೆಯಲ್ಲೂ ಕಮಲಾ ಗೆದ್ದಿದ್ದರು. ಈಗ ಕಮಲಾ ಉಪಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯಲ್ಲಿ ನಿಂತಿದ್ದರಿಂದ ೧ ಸಾವಿರದ ೮ ತೆಂಗಿನಕಾಯಿ ಒಡೆಯಲೂ ನಾನು ಸಿದ್ಧನಿದ್ದೇನೆ” ಎಂದು ಹೇಳಿದರು.

ಕಮಲಾ ಹ್ಯಾರಿಸ್ ಈ ಉಪಾಧ್ಯಕ್ಷ ಪದವಿಯ ಚುನಾವಣೆಯಲ್ಲಿ ಆರಿಸಿಬಂದರೆ ಆಕೆ ಅಮೇರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗುವಳು. ಆದರೆ ಕಮಲಾ ಹ್ಯಾರಿಸ್‌ರವರ ನಿಲುವು ಭಾರತ ವಿರೋಧಿಯಂತಿದೆ.