ರಾಮಮಂದಿರದ ನಂತರ ಈಗ ಕಾಶಿ ಮತ್ತು ಮಥುರಾ ಮುಕ್ತವಾಗಬೇಕು! – ಭಾಜಪದ ಮಂತ್ರಿಗಳಾದ ಈಶ್ವರಪ್ಪನವರ ಬೇಡಿಕೆ

ಸರಕಾರವು ಈಗ ಇದಕ್ಕಾಗಿಯೂ ಹೆಜ್ಜೆಗಳನ್ನು ಇಡಬೇಕು, ಇದೇ ಅಪೇಕ್ಷೆ !

ಬೆಂಗಳೂರು – ರಾಮ ಮಂದಿರದ ನಂತರ ಈಗ ಕಾಶಿ ಮತ್ತು ಮಥುರಾ ಈ ಧಾರ್ಮಿಕಸ್ಥಳಗಳೂ ಮುಕ್ತವಾಗಬೇಕು, ಎಂದು ಭಾಜಪ ಸರಕಾರದ ಮಂತ್ರಿಗಳಾದ ಕೆ.ಎಸ್. ಈಶ್ವರಪ್ಪನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಶ್ವರಪ್ಪನವರು ಮುಂದೆ ಮಾತನಾಡುತ್ತಾ, “ರಾಮಮಂದಿರದ ಭೂಮಿ ಪೂಜೆಯಾಯಿತು, ಇದು ಒಂದು ಒಳ್ಳೆಯ ಸಂಗತಿಯಾಗಿದೆ; ಆದರೆ ಈಗ ಕಾಶಿ ಮತ್ತು ಮಥುರಾ ಇವುಗಳನ್ನೂ ಕೂಡ ಮುಕ್ತಗೊಳಿಸುವುದು ಆವಶ್ಯಕವಾಗಿದೆ. ಯಾವಾಗ ನಾವು ಈ ಎರಡೂ ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡುತ್ತೇವೆಯೋ, ಆಗ ಅವುಗಳಿಗೆ ಅಂಟಿಕೊಂಡಿರುವ ಮಸೀದಿಗಳು ‘ನಾವು ಇನ್ನೂ ಗುಲಾಮರಾಗಿದ್ದೇವೆ’ ಎಂಬುದನ್ನೇ ಹೇಳುತ್ತ್ತವೆ. ಆದುದರಿಂದ ಈ ದೇವಸ್ಥಾನಗಳು ಮುಕ್ತವಾಗಬೇಕು’ ಎಂದು ಹೇಳಿದರು.

ಇದಕ್ಕೂ ಮೊದಲು ಯೋಗಋಷಿ ರಾಮದೇವಬಾಬಾ ಹಾಗೂ ಬಿಜೆಪಿಯ ರಾಮಜನ್ಮಭೂಮಿಯ ಆಂದೋಲನದಲ್ಲಿನ ಮುಖ್ಯ ನೇತಾರರಾಗಿದ್ದ ವಿನಯ ಕಟಿಯಾರ ಇವರು ಸಹ ರಾಮಮಂದಿರದ ನಂತರ ಮಥುರಾ ಮತ್ತು ಕಾಶಿಯನ್ನು ಮುಕ್ತಗೊಳಿಸುವ ಬಗೆಗಿನ ಹೇಳಿಕೆಗಳನ್ನು ನೀಡಿದ್ದರು.

ಮಥುರಾ ಹಾಗೂ ಕಾಶಿಯ ಬಗ್ಗೆ ಹಿಂದುತ್ವನಿಷ್ಠರು ಸರ್ವೋಚ್ಚ ನ್ಯಾಯಾಲಯದಲ್ಲಿ ‘ಪ್ಲೇಸಿಸ್ ಆಫ್ ವರ್‌ಶಿಪ್’(ವಿಶೇಷ ನಿಯಮ) ಕಾಯ್ದೆ ೧೯೯೧’ ಈ ಕಾಯ್ದೆಯಲ್ಲಿನ ನಿಯಮಗಳಿಗೆ ಆಹ್ವಾನ ನೀಡಿದ್ದಾರೆ. ‘ವಿಶ್ವ ಭದ್ರ ಪೂಜಾರಿ ಪೊರೋಹಿತ ಮಹಾಸಂಘ’ವು ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಜನಹಿತ ಯಾಚಿಕೆಯನ್ನು ನೀಡಿ ಮೇಲಿನ ಕಾಯ್ದೆಯ ಸೆಕ್ಷನ್ ೪ ಅನ್ನು ‘ಅಲ್ಟ್ರಾ ವೈರಸ್’ ಎಂದು ಘೋಷಿಸುವಂತೆ ಕೋರಿದ್ದರು.