ಸನಾತನ ಆಶ್ರಮ, ರಾಮನಾಥಿ (ಗೋವಾ) – ‘ಶ್ರೀರಾಮಜನ್ಮಭೂಮಿ ರಾಮಲಲ್ಲಾನಿಗೇ ಸೇರಿದ್ದು ! ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ನಂತರ ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ಸ್ಥಾಪನೆಗಾಗಿನ ಭೂಮಿಪೂಜೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಆ ನಿಮಿತ್ತ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀರಾಮಮಂದಿರದ ನಿರ್ಮಾಣದ ಕ್ಷಣವನ್ನು ಕೃತಜ್ಞತೆಯ ಉತ್ಸವ ವೆಂದು ಆಚರಿಸಲು ಮನೆಮನೆಗಳಲ್ಲಿ ಶ್ರೀರಾಮನ ಪ್ರತಿಮೆಯ ಪೂಜೆ ಮಾಡಿ ಅದರ ಮುಂದೆ ಎಣ್ಣೆಯ ದೀಪ ಹಾಗೂ ಸಾಯಂಕಾಲ ಮನೆಯೆದುರು ೨ ದೀಪಗಳನ್ನು ಹಚ್ಚಲು ಕರೆ ನೀಡಲಾಗಿತ್ತು. ಈ ಕರೆಗನುಸಾರ ಸನಾತನದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಹಸ್ತದಿಂದ ಭಾವಪೂರ್ಣವಾಗಿ ಮಾಡಲಾಯಿತು. ಈ ಸಮಯದಲ್ಲಿ ಅವರು ಪ್ರಭು ಶ್ರೀರಾಮನಿಗೆ ಅಪೇಕ್ಷಿತವಿರುವ ರಾಮರಾಜ್ಯ ಅಂದರೆ ಹಿಂದೂ ರಾಷ್ಟ್ರವು ಅವತರಿಸಲು ಭಾವಪೂರ್ಣವಾಗಿ ಪ್ರಾರ್ಥನೆ ಮಾಡಿದರು. ಪ್ರಭು ಶ್ರೀರಾಮನ ಆರತಿಯೊಂದಿಗೆ ಪೂಜೆ ಮುಕ್ತಾಯವಾಯಿತು. ಪೂಜೆಯ ಪೌರೋಹಿತ್ಯವನ್ನು ಸನಾತನ ಪುರೋಹಿತ ಪಾಠಶಾಲೆಯ ಶ್ರೀ. ಅಮರ ಜೋಶಿಯವರು ಮಾಡಿದರು.
ಈ ಪೂಜೆಯೊಂದಿಗೆ ಸಾಯಂಕಾಲ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಎಣ್ಣೆ ಎರಡು ದೀಪಗಳನ್ನು ಬೆಳಗಿಸಿದರು ಮತ್ತು ಆಶ್ರಮದಲ್ಲಿ ದಿನವಿಡೀ ನಡುನಡುವೆ ಪ್ರಭು ಶ್ರೀರಾಮನ ನಾಮಜಪವನ್ನು ಧ್ವನಿವರ್ಧಕದಲ್ಲಿ ಹಾಕಲಾಗುತ್ತಿತ್ತು.’
ಶ್ರೀರಾಮ ಪೂಜೆಯ ಸಮಯದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಅರಿವಾದ ವೈಶಿಷ್ಟ್ಯಪೂರ್ಣ ಅಂಶಗಳು
೧. ‘ಪೂಜೆಯಲ್ಲಿರುವ ಪ್ರಭು ಶ್ರೀರಾಮನ ಚಿತ್ರದ ಹಿಂಭಾಗದಲ್ಲಿರುವ ನೀಲಿ ಬಣ್ಣಪರದೆಗಳು ಜೀವಂತವಾಗಿರುವಂತೆ ಕಾಣುತ್ತಿತ್ತು ಹಾಗೆಯೇ ಚಿತ್ರದಲ್ಲಿ ಪ್ರಭು ಶ್ರೀರಾಮನ ಕೊರಳಿನಲ್ಲಿರುವ ಹಾರ ಸಜೀವ ಅನ್ನಿಸುತ್ತಿತ್ತು.
೨.ಪ್ರಭು ರಾಮನ ಸ್ಥಾನದಲ್ಲಿ, ಶ್ರೀರಾಮಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರು ಕುಳಿತಂತೆ ಕಾಣುತ್ತಿತ್ತು.
೩. ಪ್ರಭು ರಾಮನ ಪ್ರತಿಮೆಯ ಪಕ್ಕದಲ್ಲಿ ಇರಿಸಿದ ಎರಡೂ ದೀಪಗಳ ಜ್ಯೋತಿ ಶಾಂತ ರೂಪದಲ್ಲಿ ಕಾಣಿಸಿದವು.
೪. ಶ್ರೀ ರಾಮನನ್ನು ಪೂಜಿಸುವಾಗ, ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ನನ್ನೊಂದಿಗೆ ಸೂಕ್ಷ್ಮದಲ್ಲಿದ್ದಾರೆ’, ಎಂದು ಅರಿವಾಯಿತು’ (ಇದರ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಹೇಳುತ್ತಾ, ‘ಆಶ್ರಮದಲ್ಲಿ ಯಾವುದಾದರೂ ಪೂಜೆ ಅಥವಾ ವಿಧಿ ಮಾಡುವಾಗ ಶ್ರೀಚಿತ್‌ಶಶಕ್ತಿ (ಸೌ.) ಅಂಜಲಿ ಗಾಡಗೀಳರು ಇವರು ನನ್ನ ಜೊತೆಗೆ ಸೂಕ್ಷ್ಮದಿಂದ ಇರುತ್ತಾರೆ, ಎಂದರು -ಸಂಕಲನಕಾರರು)
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೫.೮.೨೦೨೦)
ನವದೆಹಲಿಯ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರ ಹಸ್ತದಿಂದ ಪ್ರಭು ಶ್ರೀರಾಮನ ಪ್ರತಿಮೆಗೆಯನ್ನು ಪೂಜೆ ಮಾಡಲಾಯಿತು.
ವಾರಣಾಸಿಯಲ್ಲಿ (ಉತ್ತರ ಪ್ರದೇಶ) ಸನಾತನದ ಧರ್ಮಪ್ರಚಾರಕಾದ ಪೂ. ನಿಲೇಶ ಸಿಂಗಬಾಳರು ಶ್ರೀರಾಮನ ಮೂರ್ತಿಯ ಪೂಜೆ ಮಾಡಿದರೆ ಮಂಗಳೂರು ಸೇವಕೇಂದ್ರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಪ್ರಭು ಶ್ರೀರಾಮನ ಪ್ರತಿಮೆಯ ಪೂಜೆ ಮತ್ತು ದೀಪಪ್ರಜ್ವಲನೆ ಮಾಡಿದರು. ಅದೇ ರೀತಿ ದೇವದ್ (ಪನವೇಲ್) ನಲ್ಲಿರುವ ಸನಾತನ ಆಶ್ರಮದಲ್ಲಿ ಮತ್ತು ಕೊಲ್ಹಾಪುರದಲ್ಲಿ (ಮಹಾರಾಷ್ಟ್ರ) ಸೇವಾಕೇಂದ್ರದಲ್ಲಿ ಪ್ರಭು ರಾಮನ ಪ್ರತಿಮೆಯ ಪೂಜೆ ಮತ್ತು ದೀಪಗಳನ್ನು ಬೆಳಗಿಸಲಾಯಿತು