ಇಸ್ಲಾಮೀ ದೇಶ ಪಾಕಿಸ್ತಾನದ ಮಂತ್ರಿ ಶೇಖ ರಶೀದ್ ಇವರ ದ್ಷೇಷಭರಿತ ಮಾತುಗಳು

‘ಭಾರತ ಜಾತ್ಯತೀತ ದೇಶವಾಗಿಲ್ಲ, ಅದು ಹಿಂದುತ್ವನಿಷ್ಠ ದೇಶವಾಗಿದೆಯಂತೆ !’

  • ಕಳೆದ ೭೩ ವರ್ಷಗಳಿಂದ ಇಸ್ಲಾಮೀ ದೇಶವಾಗಿರುವ ಪಾಕಿಸ್ತಾನದಲ್ಲಿ ಹಿಂದೂಗಳ ವಂಶನಾಶ ಮಾಡಲಾಗುತ್ತಿದೆ, ಇಂತಹ ದೇಶವು ಭಾರತಕ್ಕೆ ಜಾತ್ಯತೀತತೆಯನ್ನು ಕಲಿಸಲು ಪ್ರಯತ್ನಿಸುವುದು ಹಾಸ್ಯಾಸ್ಪದವೇ ಆಗಿದೆ !

  • ‘ಭಾರತವು ಹಿಂದೂತ್ವನಿಷ್ಠವಾದರೆ, ಜಗತ್ತಿನ ಭೂಪಟದ ಮೇಲಿನಿಂದ ಪಾಕಿಸ್ತಾನದ ಅಸ್ತಿತ್ವವು ಶಾಶ್ವತವಾಗಿ ನಾಶವಾಗುವುದು’, ಎಂಬ ಭಯ ಈಗ ಅದಕ್ಕೆ ಕಾಡುತ್ತಿರಬಹುದು, ಹೀಗಿದ್ದರೆ ಅದರಲ್ಲಿ ತಪ್ಪೇನಿದೆ ?

ಶೇಖ ರಶೀದ್

ಇಸ್ಲಾಮಾಬಾದ (ಪಾಕಿಸ್ತಾನ) – ಜಗತ್ತಿನ ಭೂಪಟದಿಂದ ಈಗ ಒಂದು ಅತ್ಯಂತ ಹಳೆಯ ಜಾತ್ಯತೀತ ರಾಷ್ಟ್ರವನ್ನು ತೆಗೆದುಹಾಕಲಾಗಿದೆ. ಭಾರತ ಈಗ ಹಿಂದುತ್ವನಿಷ್ಠ ದೇಶವಾಗಿದೆ. ಅದು ಈಗ ‘ರಾಮನಗರ’ ಆಗಿದೆ, ಎಂದು ಪಾಕಿಸ್ತಾನದ ಮಂತ್ರಿ ಶೇಖ್ ರಶೀದ್ ಅಹ್ಮದ್ ಇವರು ಒಂದು ‘ವಿಡಿಯೋ’ ಪ್ರಸಾರ ಮಾಡುವ ಮೂಲಕ ತಮ್ಮ ದ್ವೇಷವನ್ನು ಪ್ರಕಟಿಸಿದ್ದಾರೆ. ರಾಮಮಂದಿರದ ಭೂಮಿ ಪೂಜೆಯ ಸಂದರ್ಭದಲ್ಲಿ ಅವರು ಈ ಟೀಕೆಯನ್ನು ಮಾಡಿದ್ದಾರೆ. (ಇಸ್ಲಾಮಾಬಾದ್‌ನಲ್ಲಿನ ಶ್ರೀಕೃಷ್ಣ ದೇವಸ್ಥಾನ ನಿರ್ಮಾಣ ಕಾರ್ಯವನ್ನು ಏಕೆ ತಡೆಯಲಾಯಿತು? ಶೇಖ್ ರಶೀದ್ ಇವರು ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ? – ಸಂಪಾದಕರು)

ಕಾಶ್ಮೀರದ ಬಗ್ಗೆ ಮಾತನಾಡುವಾಗ ಶೇಖ್ ರಶೀದ್, ‘ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡುವ ಕಲಂ ೩೭೦ ನ್ನು ತೆಗೆದುಹಾಕಿದ ನಂತರ ಭಾರತದಲ್ಲಿ ಮುಸಲ್ಮಾನರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಪಾಕಿಸ್ತಾನ ಮತ್ತು ವಿಶ್ವದಾದ್ಯಂತದ ಮುಸಲ್ಮಾನರು ಕಾಶ್ಮೀರಿ ಜನರೊಂದಿಗಿದ್ದಾರೆ’ ಎಂದು ಹೇಳಿದರು. (ಇದಕ್ಕೆ ಹೇಳೊದು ಕಳ್ಳನಿಗೊಂದು ಪಿಳ್ಳೆ ನೆವ ಅಂತ -ಸಂಪಾದಕರು)