ರಾಮಮಂದಿರದ ಭೂಮಿಪೂಜೆಯ ಸ್ಥಳದಲ್ಲಿ ಇತರ ಧರ್ಮದವರಿಗೆ ಪ್ರವೇಶ ನೀಡಬೇಡಿ ! – ಹಿಂದೂ ಮಹಾಸಭೆಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಅಯೋಧ್ಯೆಯ ರಾಮಮಂದಿರದಲ್ಲಿ ಆಗಸ್ಟ್ ೫ ರಂದು ಭೂಮಿ ಪೂಜೆಯಾಗಲಿದೆ; ಆದರೆ ಈ ಪೂಜೆಯ ಸಮಯದಲ್ಲಿ ಇತರ ಧರ್ಮದವರನ್ನು ಅವರು ಪತ್ರಕರ್ತರಾಗಿರಲಿ, ಸಿಬ್ಬಂದಿಗಳಾಗಿರಲಿ, ಸಾಮಾಜಿಕ ಕಾರ್ಯಕರ್ತರಾಗಿರಲಿ ಅಥವಾ ರಾಜಕಾರಣಿಯಾಗಿರಲಿ, ಯಾರಿಗೂ ಪ್ರವೇಶ ನೀಡಬೇಡಿ, ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರರಾದ ಶಿಶಿರ ಚತುರ್ವೇದಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಶಿಶಿರ ಚತುರ್ವೇದಿಯವರು ಮಾತನಾಡುತ್ತಾ, ‘ಪಾಕಿಸ್ತಾನದಿಂದ ಉಗ್ರವಾದಿ ದಾಳಿಯ ಬೆದರಿಕೆ ಬರುತ್ತಿದೆ. ಎಂಬುದು ಗಮನದಲ್ಲಿಟ್ಟುಕೊಂಡೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ, ಎಂದು ಹೇಳಿದ್ದಾರೆ. ಇತರ ಪಂಥದವರು ದೇಶ ಹಾಗೂ ಜಗತ್ತಿನಲ್ಲಿರುವ ದೇವಸ್ಥಾನಗಳು, ಅದೇರೀತಿ ಸನಾತನ ಧರ್ಮಕ್ಕೆ ಹಾನಿ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ, ಅದರಲ್ಲಿ ಸಮಾಜವಾದಿ ಹಾಗೂ ವಿಶಿಷ್ಟ ಪಂಥದ ಜನರು ಸಹಭಾಗಿಯಾಗಿದ್ದಾರೆ. ಇಂತಹವರಿಗೆ ಪ್ರವೇಶ ನೀಡಿದರೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಭದ್ರತೆಗೂ ಅಪಾಯವಾಗಬಹುದು’ ಎಂದು ಹೇಳಿದ್ದಾರೆ.