ಮೌಲಾನಾ ಅಬುಲ್ ಕಲಾಮ್ ಆಝಾದ ಹಾಗೂ ಇತರ ಕಮ್ಯುನಿಸ್ಟ್ ಶಿಕ್ಷಣಸಚಿವರು ಭಾರತೀಯ ಇತಿಹಾಸವನ್ನು ತಿರುಚಿದ್ದರು !

ಸಿಬಿಐನ ಮಾಜಿ ಮುಖ್ಯಸ್ಥ ಎಮ್. ನಾಗೇಶ್ವರ ರಾವ್ ಇವರ ಅಭಿಪ್ರಾಯ

  • ಇಸ್ಲಾಮಿ ಆಕ್ರಮಣಕಾರಿಗಳ ರಕ್ತರಂಜಿತ ಇತಿಹಾಸವನ್ನು ಮುಚ್ಚಿಹಾಕಿದರು !

  • ರಾವ್ ಇವರ ಅಭಿಪ್ರಾಯ ಸುಳ್ಳಲ್ಲ. ಕಾಂಗ್ರೆಸ್ ಹಾಗೂ ಇತರ ಪ್ರಗತಿ(ಅಧೋಗತಿ)ಪರ ರಾಜಕಾರಣಿಗಳ ಆಡಳಿತಾವಧಿಯಲ್ಲಿ ಹಿಂದೂಗಳ ಅವರ ಪರಾಕ್ರಮದ, ಅವರ ಮಹಾನ ಸಂಸ್ಕೃತಿಯ ಇತಿಹಾಸವನ್ನು ಎಂದಿಗೂ ಹೇಳಿಕೊಡಲಾಗಲಿಲ್ಲ. ಅದೇರೀತಿ ಇಸ್ಲಾಮಿ ದಾಳೊಖೋರರ ಇತಿಹಾಸವನ್ನು ಮುಚ್ಚಿ ‘ಅಕಬರ ಮಹಾನ್ ಆಗಿದ್ದ’, ಎಂದೇ ಕಲಿಸಲಾಯಿತು. ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾಪ್ರತಾಪ ಮುಂತಾದವರ ಶೌರ್ಯಗಳನ್ನು ಅಡಗಿಸಲಾಯಿತು. ಇಂದಿಗೂ ಕೆಲವು ಪ್ರಮಾಣದಲ್ಲಿ ಇದೇ ಸ್ಥಿತಿ ಇದೆ, ಇದು ಹಿಂದೂಗಳ ದೌರ್ಭಾಗ್ಯವೇ ಆಗಿದೆ.

  • ಇತಿಹಾಸವನ್ನು ತಿರುಚಿ ಯುವ ಪಿಳಿಗೆಯ ದಾರಿ ತಪ್ಪಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸರಕಾರವು ಹೆಜ್ಜೆಯನ್ನು ಇಡುವರೇ ?

  • ರಾವ್‌ನಂತಹ ಜನಪ್ರಿಯ ಅಧಿಕಾರಿಗಳತ್ತ ಸಮಾಜವು ಆಶಾಭಾವನೆಯಿಂದ ನೋಡುತ್ತಿರುತ್ತಾರೆ. ಆದ್ದರಿಂದ ಅವರ ಬಳಿ ಇರುವ ಮಾಹಿತಿಯು ಏಕೆ ಇಷ್ಟು ತಡವಾಗಿ ಬಹಿರಂಗಪಡಿಸಿದರು, ಎಂಬುದನ್ನೂ ಅವರು ಹೇಳಬೇಕು !

ಎಮ್. ನಾಗೇಶ್ವರ ರಾವ್

ನವ ದೆಹಲಿ – ಸ್ವಾತಂತ್ರ್ಯದ ನಂತರ ಭಾರತದ ಶಿಕ್ಷಣ ಸಚಿವರು ಭಾರತದ ಇತಿಹಾಸವವನ್ನು ತಿರುಚಿದರು. ಇದರಲ್ಲಿ ಭಾರತೀಯ ಇಸ್ಲಾಮೀ ದಾಳಿಖೋರರ ರಕ್ತರಂಜಿತ ಇತಿಹಾಸವನ್ನು ತೆಗೆಯಲಾಯಿತು, ಎಂಬ ಮಾಹಿತಿಯನ್ನು ಕೇಂದ್ರೀಯ ತನಿಖಾ ದಳ(ಸಿಬಿಐ)ದ ಮಾಜಿ ಸಂಚಾಲಕರಾದ ಎಮ್. ನಾಗೇಶ್ವರ ರಾವ್ ಇವರು ಅವರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ಮಾಡಿದ್ದಾರೆ. ‘ಸ್ಟೋರಿ ಆಫ್ ಪ್ರೊಜೆಕ್ಟ ಅಬ್ರಾಹಮಿಜೆಶನ್ ಆಫ್ ಹಿಂದೂ ಸಿವಿಲೈಜೇಶನ್’ (Sಣoಡಿಥಿ oಜಿ Pಡಿoರಿeಛಿಣ ಂbಡಿಚಿhmisಚಿಣioಟಿ oಜಿ ಊiಟಿಜu ಅiviಟizಚಿಣioಟಿ) ಹೆಸರಿನಲ್ಲಿ ರಾವ್ ಇವರು ಪೋಸ್ಟನ್ನು ಬರೆದಿದ್ದಾರೆ.

 

ನಾಗೇಶ್ವರ ರಾವ ಇವರು ಸಾತಂತ್ರ್ಯನಂತರದ ೩೦ ವರ್ಷಗಳ ವರೆಗೆ ಶಿಕ್ಷಣಸಚಿವರಾಗಿದ್ದವರ ಮೇಲೆಯೂ ಟೀಕಿಸಿದ್ದಾರೆ. ಅದರಲ್ಲಿ ಅವರು ಮೌಲಾನಾ ಅಬುಲ್ ಕಲಾಮ ಆಝಾದ (ಶಿಕ್ಷಣ ಸಚಿವರಾಗಿದ್ದ ಕಾರ್ಯಕಾಲ – ೧೯೪೭ ರಿಂದ ೧೯೫೮), ಹುಮಾಯೂಂ ಕಬೀರ್, ಎಮ್.ಸಿ. ಛಾಗಲಾ ಹಾಗೂ ಫಖರುದ್ದೀನ್ ಅಲೀ ಅಹಮದ(೧೯೬೩ ರಿಂದ ೧೯೬೭), ಅದೇರಿತಿ ನುರಲ್ ಹಸನ (೧೯೭೨ ರಿಂದ ೧೯೭೭) ಇವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಅದೇರೀತಿ ಅವರ ನಂತರ ೧೦ ವರ್ಷ ವಿ.ಕೆ.ಆರ್.ವಿ.ರಾವ್‌ನಂತಹ ಕಮ್ಯುನಿಸ್ಟ ಶಿಕ್ಷಣಸಚಿವರಾಗಿದ್ದರು. ಅವರು ಆರಂಭದಲ್ಲಿ ಇತಿಹಾಸವನ್ನು ತಿರುಚಿದರು, ಎಂದು ರಾವ್ ಇವರು ಹೇಳಿದ್ದಾರೆ.
ರಾವ್ ಇವರು ತಮ್ಮ ಲೇಖನದಲ್ಲಿ, ನಾವು ಸತ್ಯಮೇವ ಜಯತೆಯಂತೆ ನಿಜವಾಗಿಯೂ ಇದ್ದೇವೆಯೇ ? ಹೆಚ್ಚಿನಾಂಶ ಇಲ್ಲ. ನಮಗೆ ರಾಜನೈತಿಕ ಶುದ್ಧತೆಯ ಹೆಸರಿನಲ್ಲಿ ಸುಳ್ಳನ್ನು ಕಲಿಸಲಾಗುತ್ತದೆ. ನಾವು ಶಿಕ್ಷಣದ ಆರಂಭದಲ್ಲಿ ಏನು ಕಲಿಯುತ್ತೇವೆಯೋ ಅದು ಸುಳ್ಳಾಗಿರುತ್ತದೆ.

ನಾಗೇಶ್ವರ ರಾವ್ ಇವರು ಮಂಡಿಸಿದ ೬ ಅಂಶಗಳು

೧. ಹಿಂದೂಗಳಿಗೆ ಅವರ ಜ್ಞಾನದಿಂದ ದೂರ ಮಾಡುವುದು
೨. ಹಿಂದೂ ಧರ್ಮಕ್ಕೆ ಅಂಧವಿಶ್ವಾಸದ ಸಂಗ್ರಹ ಎಂಬಂತೆ ರೂಪಿಸುವುದು
೩. ಶಿಕ್ಷಣದಿಂದ ನೀಡುವಂತಹ ಮಾಹಿತಿಯನ್ನು ತಿರುಚುವುದು
೪. ಪ್ರಸಾರ ಮಾಧ್ಯಮಗಳು ಹಾಗೂ ಮನೋರಂಜನೆಯ ಮೂಲಕ ಹಿಂದೂ ಧರ್ಮವನ್ನು ಟೀಕಿಸುವುದು
೫. ಹಿಂದೂಗಳಿಗೆ ಅವರು ‘ಹಿಂದೂ’ ಇರುವ ಬಗ್ಗೆ ನಾಚಿಕೆಯಾಗಬೇಕು, ಎಂಬಂತೆ ಮಾಡುವುದು
೬. ಹಿಂದೂ ಧರ್ಮಕ್ಕನುಸಾರ ಆಚರಣೆ ಮಾಡಿದರೆ ಹಿಂದೂ ಸಮಾಜ ನಾಶವಾಗುವುದು, ಎಂಬಂತೆ ತೋರಿಸುವುದು.