ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ರಾಮಜನ್ಮಭೂಮಿಯಲ್ಲಿ ಕಟ್ಟಲಾಗುವ ರಾಮಮಂದಿರದ ಭೂಮಿಪೂಜೆಯು ಆಗಸ್ಟ್ ೫ ರಂದು ಮಾಡಲಾಗುವುದು. ದೇವಸ್ಥಾನ ಕಟ್ಟುವಾಗ ದೇವಸ್ಥಾನದ ಅಡಿಯಲ್ಲಿ ಸುಮಾರು ೨ ಸಾವಿರ ಅಡಿಯ ಕೆಳಗೆ ಒಂದು ‘ಟೈಮ್ ಕ್ಯಾಪ್ಸೂಲ್’(ವರ್ತಮಾನದಲ್ಲಿಯ ಮಹತ್ವದ ಘಟನೆಗಳ ದಾಖಲೆಗಳಿರುವ ಕಾಗದಪತ್ರಗಳು ಹಾಗೂ ಇತರ ವಸ್ತುಗಳಿರುವ ಧಾರಕವನ್ನು ಭೂಮಿಯಲ್ಲಿ ಹುಗಿದಿಡುವುದು. ಮುಂದಿನ ಪೀಳಿಗೆಯು ಉತ್ಖನನ ಮಾಡುವಾಗ ಸದ್ಯದ ಸ್ಥಿತಿಯ ಮಾಹಿತಿ ಸಿಗಲಿ ಈ ಉದ್ದೇಶ ಇರುತ್ತದೆ.) ಇಡಲಾಗುವುದು. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ರಾಮೇಶ್ವರ ಚೌಪಾಲ ಇವರು ಈ ಮಾಹಿತಿಯನ್ನು ನೀಡಿದರು.