ಕೊರೋನಾದಿಂದ ಗುಣಮುಖರಾಗುವ ಪ್ರಮಾಣವು ಇತರ ದೇಶಗಳ ತುಲನೆಯಲ್ಲಿ ಭಾರತದಲ್ಲಿ ಉತ್ತಮ ಸ್ಥಿತಿ ! – ಪ್ರಧಾನಿ ಮೋದಿ

ನವ ದೆಹಲಿ – ಈಗ ಯುದ್ಧ ಕೇವಲ ಗಡಿಯಲ್ಲಿ ಮಾತ್ರ ಹೋರಾಡುವುದಲ್ಲ, ದೇಶದಲ್ಲಿಯೂ ಹೋರಾಟ ನಡೆಯುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ನಿಲುವನ್ನು ನಿರ್ಧರಿಸಬೇಕಾಗಬಹುದು. ಕಳೆದ ಕೆಲವು ತಿಂಗಳಿಂದ ದೇಶವು ಒಗ್ಗಟ್ಟಿನಿಂದ ಕೊರೋನಾವನ್ನು ಎದುರಿಸಿದೆ. ಆದ್ದರಿಂದ ಅನೇಕ ಸಂದೇಹಗಳು ತಪ್ಪಾದವು. ದೇಶವು ಕೊರೋನಾದಿಂದ ಗುಣಮುಖರಾಗುತ್ತಿರುವ ಪ್ರಮಾಣವು ಇತರ ದೇಶಗಳ ತುಲನೆಯಲ್ಲಿ ಉತ್ತಮವಾಗಿದೆ, ಮೃತ್ಯುದರವೂ ಅಲ್ಪವಿದೆ; ಆದರೆ ಕೊರೋನಾ ಆರಂಭದಲ್ಲಿ ಎಷ್ಟು ಘಾತಕವಿತ್ತೋ ಈಗಲೂ ಅಷ್ಟೇ ಘಾತಕವಿದೆ, ಆದ್ದರಿಂದ ಮುತುವರ್ಜಿವಹಿಸುವುದು, ಇದೇ ನಮ್ಮ ಶಸ್ತ್ರವಾಗಿದೆ. ಕೊರೋನಾದ ಅಪಾಯ ಇನ್ನೂ ತಪ್ಪಿಲ್ಲದ್ದರಿಂದ ನಮಗೆ ಇನ್ನೂ ಹೆಚ್ಚು ಜಾಗರೂಕತೆಯಿಂದ ಇರುವುದು ಅಗತ್ಯವಿದೆ, ಎಂದು ಪ್ರಧಾನಿ ಮೋದಿಯವರು ಆಕಾಶವಾಣಿಯಲ್ಲಿ ಅವರ ‘ಮನ ಕಿ ಬತ್’ ಕಾರ್ಯಕ್ರಮದಲ್ಲಿ ಹೇಳಿದರು.