ಹಿಂದೂ ಧರ್ಮದ ಮೇಲೆ ಪುಸ್ತಕಗಳನ್ನು ಬರೆದು ತಮ್ಮನ್ನು ‘ತಜ್ಞ’ರು ಎಂದು ಹೇಳುಕೊಳ್ಳುವ ದೇವದತ್ತ ಪಟ್ನಾಯಕ ಇವರಿಂದ ಹಿಂದೂಗಳ ದೇವತೆಯ ಅವಮಾನ

ಸರಕಾರವು ಇಂತಹವರ ಮೇಲೆ ಕೂಡಲೇ ಅಪರಾಧವನ್ನು ದಾಖಲಿಸಿ ಅವರನ್ನು ಸೆರೆಮನೆಗೆ ಅಟ್ಟಬೇಕು !

ಮುಂಬಯಿ – ಹಿಂದೂ ಧರ್ಮ ಹಾಗೂ ಧರ್ಮಗ್ರಂಥಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿರುವಂತೆ ಹೇಳಿಕೊಂಡು ತಮ್ಮನ್ನೆ ತಾವು ‘ತಜ್ಞ’ರೆಂದು ಹೇಳಿಕೊಳ್ಳುವ ದೇವದತ್ತ ಪಟ್ನಾಯಕನವರು ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ. ಅವರು ‘ಭಗವಾನ ಶ್ರೀರಾಮ ನೇಪಾಳದವರಾಗಿದ್ದರೆ ರಾವಣನು ಶ್ರೀಲಂಕಾದವನಾಗಿದ್ದನು’, ಎಂದು ಬರೆದು ಭಾರತವನ್ನು ‘ಮಂಗಗಳ ದೇಶ’ ಎಂದು ಹೇಳಿದ್ದಾರೆ. ಪಟ್ನಾಯಕರವರು ಟ್ವೀಟ್ ಮೂಲಕ ಶ್ರೀ ಕಾಲಭೈರವನನ್ನೂ ಅವಮಾನ ಮಾಡಿದ್ದಾರೆ. ಈ ಹಿಂದೆ ಅವರು ಲಕ್ಷ್ಮಣ ರೇಖೆ ಬಗ್ಗೆಯೂ ಪ್ರಶ್ನಿಸಿದ್ದರು. ‘ಸೀತಾ ಮಾತೆಯನ್ನು ಬಂಧನದಲ್ಲಿಡಲು ಲಕ್ಷ್ಮಣನು ರೇಖೆಯನ್ನು ಹಾಕಿದ್ದನು’, ಎಂದು ಬರೆದಿದ್ದರು.