ನವ ದೆಹಲಿ – ಕೊರೋನಾ ರೋಗಾಣು ಮೇಲಿನ ‘ಕೋವ್ಯಾಕ್ಸಿನ್’ ಈ ಮೊದಲನೇಯ ದೇಶಿ ಲಸಿಕೆಯ ಮನುಷ್ಯನ ಮೇಲಿನ ಪ್ರಯೋಗವು ದೆಹಲಿಯ ‘ಎಮ್ಸ್’ ಆಸ್ಪತ್ರೆಯಲ್ಲಿ ಆರಂಭವಾಗಿದೆ. ಮೊದಲ ಹಂತದಲ್ಲಿ ೩೭೫ ಸ್ವಯಂಸೇವಕರಿಗೆ ‘ಕೊವ್ಯಾಕ್ಸಿನ್’ ಲಸಿಕೆ ನೀಡಲಾಗುವುದು. ‘ಎಮ್ಸ್’ ಆಸ್ಪತ್ರೆಯಲ್ಲಿ ೧೦೦ ಸ್ವಯಂಸೇವಕರ ಮೇಲೆ ಈ ಲಸಿಕೆಯ ಪರೀಕ್ಷಣೆ ಮಾಡಲಾಗುವುದು, ಉಳಿದ ೨೭೫ ಸ್ವಯಂಸೇವಕರ ಮೇಲೆ ದೇಶದ ಇತರ ಕೇಂದ್ರಗಳಲ್ಲಿಯ ಮಾನವನ ಮೇಲೆ ಪರೀಕ್ಷಣೆ ಮಾಡಲಾಗುವುದು. ‘ಎಮ್ಸ್’ನ ೧೦೦ ಸ್ವಯಂಸೇವಕರ ಪೈಕಿ ಕೇವಲ ಮೊದಲ ೫೦ ಸ್ವಯಂಸೇವಕರಿಗೆ ಈ ಲಸಿಕೆ ನೀಡಲಾಗುವುದು. ಈ ಪ್ರಯೋಗದಿಂದ ಸಕಾರಾತ್ಮಕ ಪರಿಣಾಮ ಬಂದರೆ, ಈ ಪ್ರಯೋಗದ ವರದಿಯನ್ನು ‘ಡೆಟಾ ಕಮೀಟಿ’ಗೆ ಕಳುಹಿಸಲಾಗುವುದು. ಈ ಪ್ರಯೋಗಕ್ಕನುಸಾರ ಎಲ್ಲವೂ ಸರಿ ಇದ್ದಲ್ಲಿ, ಆ ಲಸಿಕೆ ಇತರ ಸ್ವಯಂಸೇವಕರಿಗೆ ನೀಡಲಾಗುವುದು.
AIIMS on Monday, announced that it will start screening volunteers for phase-1 testing of the indigenous #COVID19 vaccine, Covaxin, , on healthy persons aged 18-55, without co-morbidities https://t.co/Aq2ZBUoxJM
— The Hindu (@the_hindu) July 21, 2020
ಭಾಗ್ಯನಗರದ ‘ಭಾರತ ಬಯೊಟೆಕ್’ ಈ ಭಾರತೀಯ ವೈದ್ಯಕೀಯ ಸಂಶೋಧನೆ ಸಂಸ್ಥೆ (ಐ.ಸಿ.ಎಮ್.ಆರ್.) ಹಾಗೂ ‘ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವಾಯರೊಲಾಜಿ’ (ಎನ್.ಐ.ವಿ.)ನವರು ಜಂಟಿಯಾಗಿ ‘ಕೊವ್ಯಾಕ್ಸಿನ್’ನನ್ನು ನಿರ್ಮಿಸಿದ್ದಾರೆ. ಈ ಲಸಿಕೆಯ ಸಾಂಕೇತಿಕ ಹೆಸರು ‘ಬಿಬಿವಿ-೧೫೨’ ಆಗಿದೆ.