ಇಸ್ಲಾಂಗೆ ಮತಾಂತರವಾಗಿ ಅಥವಾ ಸಾಯಲು ಸಿದ್ಧರಾಗಿ ! – ‘ಜನಮ ಟಿವಿ’ಗೆ ಇಸ್ಲಾಮಿಕ್ ಸ್ಟೇಟ್‌ನಿಂದ ಬೆದರಿಕೆ

  • ‘ಜನಮ ಟಿವಿ’ಯಲ್ಲಿ ರಾಷ್ಟ್ರವಾದಿ ವಿಚಾರಗಳನ್ನು ಭಿತ್ತರಿಸುವುದರಿಂದ ಬೆದರಿಕೆ

  • ‘ಭಯೋತ್ಪಾದಕರಿಗೆ ಧರ್ಮ ಇರುತ್ತದೆ ಹಾಗೂ ಅವರು ಹಿಂದೂಗಳೊಂದಿಗೆ ಇತರ ಧರ್ಮೀಯರನ್ನು ಗುರಿಪಡಿಸುತ್ತಾರೆ’, ಎಂಬುದು ಗಮನದಲ್ಲಿಡಿ !

ಕೊಚಿ (ಕೇರಳ) –  ಕೇರಳದ ರಾಷ್ಟ್ರವಾದಿ ವಿಚಾರಸರಣಿಯ ‘ಜನಮ ಟಿವಿ’ ಈ ವಾಹಿನಿಯ ಎಲ್ಲ ಸಿಬ್ಬಂದಿಗಳಿಗೆ ಇಸ್ಲಾಮಿಕ್ ಸ್ಟೇಟ್ ‘ಇಸ್ಲಾಂಗೆ ಮತಾಂತರವಾಗಿ ಅಥವಾ ಸಾಯಲು ಸಿದ್ಧರಾಗಿ’ ಎಂದು ಬೆದರಿಕೆಯೊಡ್ಡಿದೆ. ಇಸ್ಲಾಮಿಕ್ ಸ್ಟೇಟ್‌ನ ಕೇರಳ ಶಾಖೆಯು ‘ಇನ್ಸ್ಟಾಗ್ರಾಮ್’ನಿಂದ ಈ ಬೆದರಿಕೆಯನ್ನು ಹಾಕಿದ್ದಾರೆ. (ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನಂತಹ ಭಯೋತ್ಪಾದಕ ಸಂಘಟನೆ ಹೇಗೆ ಸಕ್ರಿಯವಿರುತ್ತದೆ ? ಕಮ್ಯುನಿಸ್ಟ್ ರಾಜ್ಯದಲ್ಲಿ ಒಂದು ಭಯೋತ್ಪಾದಕ ಸಂಘಟನೆ ‘ಇನ್ಸ್ಟಾಗ್ರಾಮ್’ ಖಾತೆ ನಡೆಸುತ್ತದೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಭಯೋತ್ಪಾದಕರು ನೀಡಿದ ಬೆದರಿಕೆಯ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ ಬೆಹರಾ ಇವರು ‘ಜನಮ ಟಿವಿ’ಯ ಕಛೇರಿಯ ಭದ್ರತೆಯನ್ನು ಹೆಚ್ಚಿಸುವಂತೆ ಆದೇಶ ನೀಡಿದ್ದಾರೆ.

‘ಜನಮ ಟಿವಿ’ಯ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಹಾಗೂ ಅದು ಈಗ ರಾಜ್ಯದ ೫ ಮಹತ್ವದ ಮಲ್ಯಾಳಂ ವಾರ್ತಾವಾಹಿಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಈ ವಾಹಿನಿಯು ಕೇರಳದಲ್ಲಿ ರಾಷ್ಟ್ರವಾದಿ ದೃಷ್ಟಿಕೋನದಿಂದ ವಾರ್ತೆ ಹಾಗೂ ಮಾಹಿತಿಗಳನ್ನು ಪ್ರಸಾರ ಮಾಡುತ್ತದೆ. ಇತರ ವಾಹಿನಿಗಳಲ್ಲಿ ಕಮ್ಯುನಿಸ್ಟ್ ವಿಚಾರದ ವರ್ಚಸ್ಸು ಇದೆ. (ಇಸ್ಲಾಮಿಕ್ ಸ್ಟೇಟ್‌ಗೆ ಕಮ್ಯುನಿಸ್ಟ್ ವಿಚಾರಕ್ಕೆ ಯಾವುದೇ ವಿರೋಧವಿಲ್ಲ; ಏಕೆಂದರೆ ಅದು ಭಾರತೀಯ ರಾಷ್ಟ್ರವಾದದ ವಿಚಾರ ಮಾಡುವುದಿಲ್ಲ ಹಾಗೂ ಅದರ ಪ್ರಸಾರವನ್ನೂ ಮಾಡುವುದಿಲ್ಲ; ಆದರೆ ಜನಮ ಟಿವಿ ಅದು ಮಾಡುತ್ತಿದ್ದರಿಂದ ಅದರ ಸಿಬ್ಬಂದಿಗಳನ್ನು ಹತ್ಯೆ ಮಾಡುವ ಬೆದರಿಕೆ ಹಾಕಲಾಗುತ್ತದೆ ಎಂಬುದೇ ಗಮನಕ್ಕೆ ಬರುತ್ತದೆ ! ಈ ಬೆದರಿಕೆಯ ಹಿಂದೆ ಕಮ್ಯುನಿಸ್ಟ್ ವಿಚಾರ ಸರಣಿಯ ಜನರು ಇದ್ದಾರೆಯೇ, ಇದರ ಬಗ್ಗೆಯೂ ತನಿಖೆ ನಡೆಯಬೇಕು ! – ಸಂಪಾದಕರು)