ಮುಂಬಯಿ – ಕಳೆದ ಹಲವಾರು ವರ್ಷಗಳಿಂದ ಬಾಲಿವುಡ್‌ನ ವಿವಿಧ ಚಲನಚಿತ್ರಗಳು, ವೆಬ್‌ಸರೀಸ್, ಯೂಟ್ಯೂಬ್‌ಗಳ ಮೂಲಕ ಹಿಂದೂ ಧರ್ಮವನ್ನು ನಿರಂತರವಾಗಿ ಗುರಿಪಡಿಸಲಾಗಿದೆ. ಇಲ್ಲಿಯವರೆಗೆ, ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ನೂರಾರು ಚಲನಚಿತ್ರಗಳನ್ನು ಪ್ರದರ್ಶಿಸಲಾಗಿದೆ; ಆದರೆ ಇದುವರೆಗೆ ಯಾವುದಕ್ಕೂ ನಿಷೇಧವನ್ನು ಕೋರಿಲ್ಲ. ಮತ್ತೊಂದೆಡೆ, ‘ಮುಹಮ್ಮದ್ ದಿ ಮೆಸೆಂಜರ್ ಆಫ್ ಗಾಡ್’ ಚಿತ್ರದ ಬಿಡುಗಡೆಗೆ ತಕ್ಷಣದ ಅದನ್ನು ನಿಷೇಧಿಸಲು ಆಗ್ರಹಿಸಲಾಗುತ್ತಿದೆ. ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಒಂದೇ ಧರ್ಮಕ್ಕೆ ಅನ್ವಯಿಸುತ್ತದೆಯೇ ? ಹಿಂದೂಗಳ ಧಾರ್ಮಿಕ ಭಾವನೆಗಳತ್ತ ಯಾರು ಗಮನ ನೀಡುವರು ? ಅಂತಹ ಅನೇಕ ಪ್ರಶ್ನೆಗಳು ಉದ್ಭವಿಸುತ್ತದೆ. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ , ಆಲ್ಟ್ ಬಾಲಾಜಿ, ಝೀ ೫ ನಂತಹ ‘ಓಟಿಟಿ ಆಪ್ಸ್’ಗಳು ಪ್ರಸಾರ ಮಾಡುವ ವೆಬ್‌ಸಿರೀಸ್‌ಗಳ ಮೂಲಕ ಹಿಂದೂ ಸಂಸ್ಕೃತಿ, ಧರ್ಮ, ದೇವತೆಗಳು ಮತ್ತು ಸಂತರನ್ನು ನಿರಂತರವಾಗಿ ಅವಮಾನಿಸಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಬಾಲಿವುಡ್‌ನಲ್ಲಿ ನಡೆಯುತ್ತಿರುವ ವಂಶಾವಳಿ, ಹಿಂದೂ ನಾಯಕರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವುದು, ಹಿಂದೂವಿರೋಧಿ ಚಲನಚಿತ್ರಗಳ ನಿರ್ಮಿತಿ ಇವುಗಳು ನಡೆಯುತ್ತಿದ್ದು ಆ ಮಾಧ್ಯಮದಿಂದ ಆಗುತ್ತಿರುವ ಹಿಂದೂ ವಿರೋಧಿ ಪಿತೂರಿಗಳನ್ನು ಬಹಿರಂಗಪಡಿಸಲು ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಸಂವಾದವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಜುಲೈ ೧೯ ರ ಭಾನುವಾರ ಸಂಜೆ ೭ ರಿಂದ ೮.೩೦ ರ ವರೆಗೆ ‘ಫೇಸ್‌ಬುಕ್’ ಮತ್ತು ‘ಯೂಟ್ಯೂಬ್’ನಲ್ಲಿ ನೇರ (Live) ಪ್ರಸಾರವಾಗಲಿದೆ.
‘ಚರ್ಚೆ ಹಿಂದೂ ರಾಷ್ಟ್ರದ’ ಇದರ ಅಂತರ್ಗತ ಆಯೋಜಿಸಿದ್ದ ‘ಬಾಲಿವುಡ್‌ನಲ್ಲಿ ಹಿಂದೂವಿರೋಧಿ ಪಿತೂರಿ!’ ಎಂಬ ವಿಶೇಷ ಸಂವಾದದಲ್ಲಿ ಸರ್ವೋಚ್ಚ ನ್ಯಾಯಾಲಯದ ಮತ್ತು ಮುಂಬೈ ಉಚ್ಚ ನ್ಯಾಯಾಲಯದ ನ್ಯಾಯವಾದಿ ಸುಭಾಷ್ ಝಾ, ಬಾಲಿವುಂಡ್‌ನ ವಂಶಾಡಳಿತದ ಬಗ್ಗೆ ಖಂಡತುಂಡವಾಗಿ ವಿಚಾರ ಮಂಡಿಸುವ ನಟಿ ಪಾಯಲ್ ರೋಹತಗಿ, ಹಿಂದುತ್ವನಿಷ್ಟ ಕಾರ್ಯಕರ್ತ ಶ್ರೀ. ರಮೇಶ ಸೋಲಂಕಿ, ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ಬರಹಗಾರ ಶ್ರೀ. ವಿನಯ ಧುಮಾಲೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ದೇಶಭಕ್ತ ನಾಗರಿಕರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ಸಾರ್ವಜನಿಕರಿಗೆ ಕರೆ ನೀಡಲಾಗಿದೆ. ಈ ವಿಶೇಷ ಸಂವಾದವನ್ನು ಈ ಕೆಳಗಿನ ಲಿಂಕ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ: