ಸೀತಾಮಢಿ (ಬಿಹಾರ)ಯ ಗಡಿಯಲ್ಲಿನ ಭಾರತದ ರಸ್ತೆ ನಿರ್ಮಾಣ ಕಾರ್ಯವನ್ನು ತಡೆದ ನೇಪಾಳ

ಸೀತಾಮಢಿ (ಬಿಹಾರ) – ಇಲ್ಲಿಯ ಭಾರತ-ನೇಪಾಳ ಗಡಿಯಲ್ಲಿನ ಭಾರತದ ಗಡಿಯಲ್ಲಿ ಭಾರತವು ನಿರ್ಮಿಸುತ್ತಿದ್ದ ರಸ್ತೆಯ ಕೆಲಸವನ್ನು ನೇಪಾಳದ ಪೊಲೀಸರು ತಡೆದಿದ್ದಾರೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದೆ. ಆದ್ದರಿಂದ ಸ್ಥಳೀಯ ಭಾರತೀಯ ನಾಗರೀಕರಿಂದ ಆಕ್ರೋಶವನ್ನು ವ್ಯಕ್ತಪಡಿಸಲಾಗುತ್ತಿದೆ. ಈ ರಸ್ತೆ ಅನೇಕ ವರ್ಷಗಳಿಂದ ಹಾಳಾದ ಸ್ಥಿತಿಯಲ್ಲಿತ್ತು. ಅದನ್ನು ಪುನಃ ನಿರ್ಮಿಸಲಾಗುತ್ತಿತ್ತು. ಈ ಘಟನೆಯ ಬಗ್ಗೆ ಸಶಸ್ತ್ರದಳದ ಅಧಿಕಾರಿ ಕಮಾಂಡೆಂಟ್ ನವೀನ ಕುಮಾರ ಇವರು, ‘ಈ ವಿಷಯದ ಬಗ್ಗೆ ನೇಪಾಳದ ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮಾಡಿ ಈ ಪ್ರಶ್ನೆಯನ್ನು ಬಿಡಿಸಲಾಗುವುದು’ ಎಂದು ಹೇಳಿದ್ದಾರೆ.

ನೇಪಾಳವು ಯಾವ ರಸ್ತೆಯ ಕೆಲಸವನ್ನು ತಡೆದಿದೆಯೋ ಅದು ಭಾರತದ ಭೂಮಿಯಾಗಿದೆ; ಆದರೆ ನೇಪಾಳ ಪೊಲೀಸರು ‘ನೊ ಮನ್ಸ್ ಲ್ಯಾಂಡ್’ ಇದೆ ಎಂದು ಹೇಳಿ ಅದಕ್ಕೆ ವಿರೋಧ ವ್ಯಕ್ತಪಡಿಸಿದೆ. ‘ನೋ ಮನ್ಸ್ ಲ್ಯಾಂಡ್’ ಇದು ಎರಡೂ ದೇಶಗಳ ಗಡಿಯ ಮದ್ಯದ ಭಾಗವಾಗಿದೆ, ಅದರ ಮೇಲೆ ಯಾವುದೇ ದೇಶವು ತನ್ನದೆಂದು ಹೇಳುವಂತಿಲ್ಲ. ಅಲ್ಲಿ ಎರಡೂ ದೇಶಗಳ ಸೈನ್ಯವು ಗಸ್ತು ಮಾಡುವಂತಿಲ್ಲ.