ಪ.ಪೂ. ಭಕ್ತರಾಜ ಮಹಾರಾಜರ ಶತಕ ಜನ್ಮೋತ್ಸವದ (೭.೭.೨೦೨೦(ದಿನಾಂಕಾನುಸಾರ)) ನಿಮಿತ್ತ….

ಪ.ಪೂ. ಭಕ್ತರಾಜ ಮಹಾರಾಜರ ಅಮೃತಮಯ ಬೋಧನೆ

ಪ.ಪೂ. ಭಕ್ತರಾಜ ಮಹಾರಾಜರು ಭಕ್ತರಿಗೆ ಪ್ರವಚನ ಅಥವಾ ವ್ಯಾಖ್ಯಾನ ನೀಡಿ ಕಲಿಸಿದ ಪ್ರಸಂಗ ತೀರ ವಿರಳ. ಆದರೆ ಪ.ಪೂ. ಬಾಬಾ ಅವರ  ಒಡನಾಟವೇ ಅಧ್ಯಾತ್ಮದ ನಡೆದಾಡುವ ಶಾಲೆಯಾಗಿತ್ತು. ಭಜನೆಯು ಭಕ್ತರಿಗೆ ಕಲಿಸುವ ಅವರ ಮುಖ್ಯ ಮಾಧ್ಯಮವಾಗಿತ್ತು. ಅದರೊಂದಿಗೆ ಪ.ಪೂ. ಬಾಬಾ ಅವರ ಮಾತು, ಅವರ ತಮಾಷೆ, ಅವರ ನಡುವಳಿಕೆಯಲ್ಲಿನ ಘಟನೆಗಳಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಕ್ತರಿಗೆ ಹೆಚ್ಚು ಕಲಿಯುವಂತಿತ್ತು. ಅದರ ಕೆಲವು ಮುಖ್ಯಾಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ನಾಮಸಂಕೀರ್ತನಯೋಗ

‘ನಾಮವು ಬಾಬಾರವರ ಜೀವ ಅಥವಾ ಪ್ರಾಣವಾಗಿದೆ. ಗೀತೆಯ ಬಗ್ಗೆ ಮಾತನಾಡುವಾಗ ಬಾಬಾರವರು ಯಾವಾಗಲೂ ಹೀಗೆ ಹೇಳುತ್ತಿದ್ದರು, “ಗೀತೆಯ ಸಾರವೆಂದರೆ, ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ | (ಅಧ್ಯಾಯ ೧೮ ಶ್ಲೋಕ ೬೬). ಹಾಗೆಯೇ ಬಾಬಾರವರ ಎಲ್ಲ ಬೋಧನೆಯ ಸಾರ ನಾಮವಾಗಿರುವುದರಿಂದ, ಈ ಪ್ರಕರಣವು ವಿಶೇಷ ಮಹತ್ವದ್ದಾಗಿದೆ. ಯಾವಾಗ ಬಾಬಾರವರು ನಾಮದ ಬಗ್ಗೆ ಮಾತನಾಡುತ್ತಿದ್ದರೋ, ಆಗ ಅದು ಹೆಚ್ಚಾಗಿ ಪಶ್ಯಂತಿ ಅಥವಾ ಪರಾ ವಾಣಿಯಲ್ಲಿನ ನಾಮದ ಸಂದರ್ಭದಲ್ಲಿರುತ್ತಿತ್ತು. ತದ್ವಿರುದ್ಧವಾಗಿ ಹೆಚ್ಚಿನ ಸಾಧಕರ ನಾಮಜಪವು ಪ್ರಾರಂಭದಲ್ಲಿ ವೈಖರಿ ಮತ್ತು ನಂತರ ಮಧ್ಯಮಾ ವಾಣಿಯಲ್ಲಿಯೇ ನಡೆಯುತ್ತಿರುತ್ತದೆ; ಆದ್ದರಿಂದ ಸಾಧಕರು ಮೊದಲಿಗೆ ನಾಮದೊಂದಿಗೆ ಸೇವೆ, ತ್ಯಾಗ, ಇತರರ ಬಗ್ಗೆ ಪ್ರೇಮ ಈ ವಿಷಯಗಳಿಗೆ ಸಾಧನೆಯಲ್ಲಿ ಮಹತ್ವವನ್ನು ಕೊಡುವುದು ಆವಶ್ಯಕವಾಗಿದೆ. ಇದರಿಂದಲೇ ಅವರು ನಾಮದಲ್ಲಿ ಪ್ರಗತಿಯನ್ನು ಮಾಡಿಕೊಂಡು ಪರಾ ವಾಣಿಯವರೆಗೆ ಹೋಗಬಲ್ಲರು, ಅಂದರೆ ನಾಮದೊಂದಿಗೆ ಏಕರೂಪವಾಗಬಲ್ಲರು.

೧ ಅ. ಪ.ಪೂ. ಬಾಬಾರವರ ‘ಭಜನೆ ಮತ್ತು ನಾಮಜಪ ಈ ವಿಷಯದ ವಿಚಾರ

೧ ಅ ೧. ಭಜನೆ ಮತ್ತು ನಾಮ ಇವು ನನ್ನ ಜನ್ಮಸಿದ್ಧ ಹಕ್ಕುಗಳಾಗಿವೆ.

೧ ಅ ೨. ಈಗ ಭಜನೆಯನ್ನು ಮಾಡಿರಿ. ನಾಮಜಪವನ್ನು ಮಾಡಿರಿ. ನಾಮಜಪವು ಭಜನೆಯಾಗಿದೆ. ಸತತವಾಗಿ ಮಾಡಿರಿ.

೧ ಆ. ಭಜನೆಯ ಬೋಧನೆ : ನಾಮಸಾಧನೆ ಮಾಡಿ !

(ಪರಾತ್ಪರ ಗುರು) ಡಾ. ಜಯಂತ ಆಠವಲೆ : ತಮ್ಮ ಗುರುಗಳು, “ಭಜನಹೀ ಸಬ ಕುಛ ಹೈ | ಎಂದು ಹೇಳುತ್ತಿದ್ದರು. ತಾವು ಮಾತ್ರ ಭಜನೆಗಳಲ್ಲಿ ಮತ್ತು ಮಾತನಾಡುವಾಗ ಮಾತ್ರ ‘ಭಜನೆಗಳನ್ನು ಹೇಳಿರಿ ಎಂದು ಹೇಳದೇ ‘ನಾಮಜಪ ಮಾಡಿರಿ ಎಂದು ಹೇಳುತ್ತೀರಿ, ಇದು ಹೇಗೆ ?

ಬಾಬಾ : ನಮ್ಮ ಗುರುಗಳೂ ‘ನಾಮಜಪ ಮಾಡಿರಿ ಎಂದೇ ಹೇಳಿದ್ದಾರೆ. ಅವರು ‘ಭಜನೆಯನ್ನು ಮಾಡಿರಿ ಎಂದಿದ್ದಾರೆ, ಆ ‘ಭಜನೆಯಲ್ಲಿನ ‘ಭಜ ಶಬ್ದವು ‘ಸಾಧನೆಯನ್ನು ಮಾಡಿರಿ ಮತ್ತು ‘ನ ಈ ಅಕ್ಷರವು ‘ನಾಮ ಎಂಬರ್ಥದಲ್ಲಿದೆ, ಅಂದರೆ ಅವರೂ ‘ನಾಮಸಾಧನೆಯನ್ನು ಮಾಡಿರಿ ಎಂದೆ ಹೇಳಿದ್ದಾರೆ ಮತ್ತು ಅದನ್ನೇ ನಾನೂ ಹೇಳುತ್ತೇನೆ.

೧ ಇ.. ಶ್ವಾಸ ಮತ್ತು ನಾಮ

೧ ಇ ೧. ನಾಮವನ್ನು ಶ್ವಾಸಕ್ಕೆ ಜೋಡಿಸುವುದು : ನಾವು ಶ್ವಾಸದಿಂದಾಗಿ ಜೀವಂತ ವಿರುತ್ತೇವೆ, ನಾಮದಿಂದ ಅಲ್ಲ; ಆದ್ದರಿಂದ ಶ್ವಾಸದ ಮೇಲೆ ಗಮನವನ್ನು ಕೇಂದ್ರೀ ಕರಿಸುವುದು ಮಹತ್ವದ್ದಾಗಿದೆ, ಆದ್ದರಿಂದ ನಾಮವನ್ನು ಶ್ವಾಸಕ್ಕೆ ಜೋಡಿಸುವು ದಿರುತ್ತದೆ. ಶ್ವಾಸವನ್ನು ನಾಮಕ್ಕೆ ಜೋಡಿಸುವುದಿರುವುದಿಲ್ಲ.

೨. ವರ್ತನೆಯಿಂದ (ಪರೋಕ್ಷವಾಗಿ) ಕಲಿಸುವುದು

೨ ಅ. ಇತರರ ಅನುಕೂಲವನ್ನು ನೋಡುವುದು

೨ ಆ ೧. ರಾತ್ರಿ ಅಪರಾತ್ರಿ ಬಾಬಾ ಯಾರಾದರೊಬ್ಬರ ಮನೆಗೆ ಹೋದರೆ, ಬಾಗಿಲಿನ ಮೇಲಿನ ಕರೆಘಂಟೆಯನ್ನು ಬಾರಿಸಿದ ನಂತರ ಸ್ವಲ್ಪ ಸಮಯ ಹೊರಗೆ ವಾಹನದಲ್ಲಿಯೇ ಕುಳಿತಿರುತ್ತಿದ್ದರು. ಮನೆಯವರಿಗೆ ವ್ಯವಸ್ಥೆಮಾಡಲು ಸಮಯವನ್ನು ಕೊಡುತ್ತಿದ್ದರು ಮತ್ತು ನಂತರವೇ ಮನೆಯೊಳಗೆ ಪ್ರವೇಶಿಸುತ್ತಿದ್ದರು.

೨ ಆ ೨. ಬಾಬಾ ಯಾರಾದರ ಮನೆಗೆ ಅವೇಳೆಯಲ್ಲಿ ಹೋದರೆ ಊಟ, ತರಕಾರಿ ಇತ್ಯಾದಿಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು.

೨ ಆ ೩. ಬಾಬಾ ಯಾರ ಮನೆಗಾದರೂ ಹೋದರೆ ಅಲ್ಲಿ ಜನರ ಜನಸಂದಣಿ ಪ್ರಾರಂಭವಾಗುತ್ತಿತ್ತು. ಬೆಳಗ್ಗೆ-ಸಾಯಂಕಾಲ ಭಂಡಾರ (ಅನ್ನ ಸಂತರ್ಪಣೆ) ಇರುತ್ತಿತ್ತು. ಬಾಬಾರವರು ಆ ಮನೆಯಲ್ಲಿ ಇರುವವರೆಗೆ ಅವರ ಅಸ್ತಿತ್ವದ ಶಕ್ತಿಯಿಂದ ಎಲ್ಲರೂ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಬಾಬಾ ಅಲ್ಲಿಂದ ಹೋದ ಬಳಿಕ ಹೆಚ್ಚಿನ ಜನರಿಗೆ ಆಯಾಸವಾಗುತ್ತಿತ್ತು. ಯಾರಿಗೂ ಹೆಚ್ಚು ಆಯಾಸವಾಗಬಾರದೆಂದು, ಬಾಬಾರವರು ಸಾಧ್ಯವಾದಷ್ಟು ಯಾರಲ್ಲಿಯೂ ಒಂದೆರಡು ದಿನಗಳಿಗಿಂತ ಜಾಸ್ತಿ ಇರುತ್ತಿರಲಿಲ್ಲ.

೨ ಇ. ಎಲ್ಲವನ್ನು ಸರ್ವೋತ್ಕೃಷ್ಟವಾಗಿ ಮಾಡಬೇಕು

೨ ಇ ೧. ೧೯೯೨ರ ಶ್ರೀರಾಮ ನವಮಿ ಉತ್ಸವಕ್ಕೆ ಗೋವಾದ ಶಿಷ್ಯರು ಮೊದಲ ಬಾರಿಗೆ ಬಂದಿದ್ದರು. ಅನಾರೋಗ್ಯದಿಂದಾಗಿ ಮೂರು-ನಾಲ್ಕು ತಿಂಗಳು ಬಾಬಾ ಭಜನೆಗಳನ್ನು ಹೇಳಿರಲಿಲ್ಲ ಮತ್ತು ಆ ದಿನ ರಾತ್ರಿ ಬಾಬಾರವರಿಗೆ ಭಜನೆಗಳನ್ನು ಹೇಳುವುದಿತ್ತು. ಅದಕ್ಕಾಗಿ ಸ್ವರ ಬರಬೇಕೆಂದು, ಬಾಬಾರವರು ಮಧ್ಯಾಹ್ನ ಭಜನೆಯ ಅಭ್ಯಾಸ ಮಾಡಿದರು.

೨ ಇ ೨. ಭಂಡಾರಗಳ ಸಮಯದಲ್ಲಿ ಬಾಬಾರವರು ಸ್ವತಃ ಅಡುಗೆಯಲ್ಲಿನ ಪ್ರತಿಯೊಂದು ಪದಾರ್ಥದ ರುಚಿಯನ್ನು ನೋಡುತ್ತಿದ್ದರು. ಅದರಲ್ಲಿ ಏನಾದರೂ ಹೆಚ್ಚು-ಕಡಿಮೆ ಬೇಕಿದ್ದರೆ ಹಾಗೆ ಹೇಳುತ್ತಿದ್ದರು. ಅಡುಗೆಯು ಮನಸ್ಸಿನಂತೆ  ಸರಿ ಅನಿಸದ ಮೇಲೆಯೇ ಬಡಿಸಲು ಹೇಳುತ್ತಿದ್ದರು. ‘ಯೋಗಃ ಕರ್ಮಸು ಕೌಶಲಮ್ (ಶ್ರೀಮದ್‌ಭಗವದ್ಗೀತಾ ೨:೫೦) ಏನೆಲ್ಲವನ್ನು ಮಾಡುತ್ತೀರಿ ಅದನ್ನು, ಕೌಶಲ್ಯದಿಂದ ಮತ್ತು ಉತ್ಕೃಷ್ಟ ರೀತಿಯಲ್ಲಿ ಮಾಡಬೇಕು, ಎಂಬ ಗೀತೆಯ ತತ್ತ್ವಜ್ಞಾನವನ್ನು ಬಾಬಾರವರು ಪಾಲಿಸುತ್ತಿದ್ದರು.

(ಆಧಾರ : ಸನಾತನ ನಿರ್ಮಿತ ‘ಸಂತ ಭಕ್ತರಾಜ ಮಹಾರಾಜರ ಬೋಧನೆ ಮಾಲಿಕೆಯ ಖಂಡ ೩ ‘ನಾಮದ ಮಹತ್ವ ಮತ್ತು ಕಲಿಸುವ ವಿವಿಧ ಪದ್ಧತಿಗಳು)