ಮೀರತ್ ಸಿಎಎ ವಿರೋಧಿ ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಮತಾಂಧ ಕಾರ್ಯಕರ್ತನ ಬಂಧನ

ಸರ್ಕಾರವು ಇಂತಹವರ ವಿರುದ್ಧ ಆದಷ್ಟು ಬೇಗನೆ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಅವರಿಗೆ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸಬೇಕು !

ಮೀರತ್ (ಉತ್ತರ ಪ್ರದೇಶ) – ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ೨೦ ಡಿಸೆಂಬರ್ ೨೦೧೯ ರಂದು ಇಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’(ಪಿಎಫ್‌ಐ) ದ ಕಾರ್ಯಕರ್ತ ಮುಫ್ತಿ ಶಹಜಾದ್‌ನನ್ನು ಬಂಧಿಸಿದ್ದಾರೆ. ಗಲಭೆಗೆ ಪ್ರಚೋದಿಸಿದ ಆರೋಪ ಮತಾಂಧರ ಮೇಲಿದೆ. ಈ ಗಲಭೆಯಲ್ಲಿ ಆರು ಜನರು ಸಾವನ್ನಪ್ಪಿದರು ಹಾಗೂ ೬೦ ಮಂದಿ ಗಾಯಗೊಂಡಿದ್ದರು. ಈ ಸಮಯದಲ್ಲಿ ೩೦ ಪೊಲೀಸರನ್ನು ಜೀವಂತವಾಗಿ ಸುಡುವ ಪ್ರಯತ್ನವೂ ನಡೆದಿತ್ತು.