ಮೀರತ್‌ನಲ್ಲಿ (ಉತ್ತರ ಪ್ರದೇಶ) ಹಿಂದೂ ಹೆಸರು ಹೇಳಿ ಹಿಂದೂ ಯುವತಿಯನ್ನು ೨ ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ವಿವಾಹಿತ ಮತಾಂಧ !

ಪ್ರಗತಿಪರರು ಮತ್ತು ಜಾತ್ಯತೀತವಾದಿಗಳು ಇದನ್ನು ‘ಪ್ರೇಮ’ ಎಂದು ಕರೆಯಲಿದ್ದಾರೆಯೇ ? ‘ಲವ್ ಜಿಹಾದ್’ನ ಇಂತಹ ಘಟನೆಗಳನ್ನು ತಡೆಯಲು ಅವರು ಪ್ರಯತ್ನಿಸುವರೇ ?

ಮೀರತ್ (ಉತ್ತರ ಪ್ರದೇಶ) – ಇಲ್ಲಿಯ ವಸೀಮ್ ಅಹಮದ್ ಎಂಬ ವಿವಾಹಿತ ಹಾಗೂ ಮಕ್ಕಳಿರುವ ಮುಸಲ್ಮಾನ ಯುವಕನು ‘ದಿನೇಶ ರಾವತ್’ ಎಂದು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ೨ ವರ್ಷ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ವಾಸೀಮ್‌ನನ್ನು ಬಂಧಿಸಿದ್ದಾರೆ. ಆತ ಇಲ್ಲಿಯ ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ನಕಲಿ ಹೆಸರು ಮತ್ತು ದಾಖಲೆಗಳ ಸಹಾಯದಿಂದ ನಕಲಿ ಆಧಾರ್ ಕಾರ್ಡ್‌ನ್ನು ಸಹ ಮಾಡಿಸಿಕೊಂಡಿದ್ದ. ಪೊಲೀಸರು ಆತನನ್ನು ಬಂಧಿಸಲು ಹೋದಾಗ ತಾನು ಪತ್ರಕರ್ತ ಎಂದು ಹೇಳಿಕೊಳ್ಳುವ ಮೂಲಕ ಪೊಲೀಸರ ಮೇಲೆ ಅಧಿಕಾರವನ್ನು ತೋರಿಸಲು ಪ್ರಯತ್ನಿಸಿದ್ದ.