‘ಎಲ್ಲರೂ ಸುಖವಾಗಿರಬೇಕು, ಯಾರೂ ದುಃಖ ಪಡಬಾರದು !, ಎನ್ನುವ ವಚನಕ್ಕನುಸಾರ ಕುಡಾಲ (ಸಿಂಧುದುರ್ಗ) ದಲ್ಲಿನ ವೈದ್ಯ ಸುವಿನಯ ದಾಮಲೆ ಆಯುರ್ವೇದದ ಪ್ರಚಾರ-ಪ್ರಸಾರ ಮಾಡುತ್ತಿದ್ದಾರೆ. ಅವರು ರೋಗಿಗಳಿಗೆ ಚಿಕಿತ್ಸೆ ನೀಡಲು ಕೇವಲ ಆಯುರ್ವೇದೀಯ ಚಿಕಿತ್ಸಾಪದ್ಧತಿಯನ್ನು ಅವಲಂಬಿಸುತ್ತಾರೆ. ಅವರ ಈ ಯೋಗದಾನವನ್ನು ಭಾರತ ಸರಕಾರದ ಆಯುಷ್ ಸಚಿವಾಲಯವು ಮನ್ನಿಸಿ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ‘ರಾಷ್ಟ್ರೀಯ ಗುರು ಎಂದು ಅವರನ್ನು ನೇಮಿಸಿದೆ. ಕೊರೋನಾ ರೋಗಾಣುವಿನ ಹಿನ್ನೆಲೆಯಲ್ಲಿ ಅವರು ಎಲ್ಲರಿಗೂ ಸರಕಾರ ಸೂಚಿಸಿದ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ರೋಗಾಣುವಿನ ಸೋಂಕನ್ನು ತಡೆಗಟ್ಟಲು ಅಗ್ನಿಹೋತ್ರವನ್ನು ಮಾಡುವ ಸಲಹೆ ನೀಡುತ್ತಾರೆ. ರೋಗಾಣುಗಳನ್ನು ತಡೆಗಟ್ಟಲು ತಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಬಹುದು, ಎಂಬುದನ್ನು ಅವರು ತಿಳಿಸುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಅವರ ವಿಚಾರವನ್ನು ಆಯ್ದುಕೊಂಡು ನಮ್ಮ ವಾಚಕರಿಗಾಗಿ ಪ್ರಕಟಿಸುತ್ತಿದ್ದೇವೆ.
೧. ಚೀನಾದ ನಿಜ ಸ್ವರೂಪವನ್ನು ತಿಳಿದುಕೊಳ್ಳಲೇ ಬೇಕು !
೩೧ ಡಿಸೆಂಬರ್ ೨೦೧೯ ರಂದು ಚೀನಾದವರಿಗೆ ಪುನಃ ಕೊರೋನಾ ‘ಎಕ್ಟಿವೇಟ್ ಆಗಿದೆಯೆಂದು ತಿಳಿಯಿತಂತೆ. ಅಂದಿನಿಂದ ಅದು ಈ ರೋಗಾಣುವಿಗೆ ಔಷಧವನ್ನು ಹುಡುಕುತ್ತಿದೆ; ಆದರೆ ಅದರಲ್ಲಿ ಯಶಸ್ವಿಯಾಗಿರುವುದು ಕಂಡುಬಂದಿಲ್ಲ. ಬಹುಶಃ ಸ್ವಲ್ಪ ದಿನಗಳಲ್ಲಿ ಸಿಗಲೂಬಹುದು; ಆದರೆ ಅವರಿಗೆ ಇನ್ನೂ ಸ್ವಲ್ಪ ಭಯ ಹುಟ್ಟಿಸಲಿಕ್ಕಿದೆ. ಆ ಮೇಲೆ ‘ಅವರು ಕೇಳಿದಷ್ಟು ಬೆಲೆಕೊಟ್ಟು ಎಲ್ಲರೂ ಸಾಮಾಜಿಕ ಅಂತರವನ್ನು ಇಟ್ಟುಕೊಂಡು ಸಾಲಿನಲ್ಲಿ ನಿಂತು ಲಸಿಕೆಯನ್ನು ಹಾಕಿಸಿಕೊಳ್ಳುವರು, ಎಂಬುದು ಅವರ ನಿಜಸ್ವರೂಪವಾಗಿದೆ. ‘ಯಾವುದೇ ಒಂದು ರೋಗಾಣು ನಮ್ಮ ಶರೀರದೊಳಗೆ ಬಂದನಂತರ ಅದನ್ನು ಹೇಗೆ ನಾಶಗೊಳಿಸುವುದು, ಎಂಬುದನ್ನು ನನ್ನ ಶರೀರಕ್ಕೆ ಮೊದಲೆ ನೀಡಿದ ‘ಟ್ರೈನಿಂಗ್ (ತರಬೇತಿ) ಎಂದರೆ ಲಸೀಕರಣ, ಎಂದು ಹೇಳುವುದು !
೨. ಅಲೋಪಥಿಯಲ್ಲಿ ‘ಮುಂಜಾಗ್ರತೆಯನ್ನು ವಹಿಸುವುದೇ ರೋಗಾಣುವನ್ನು ತಡೆಗಟ್ಟುವ ಮುಖ್ಯ ಚಿಕಿತ್ಸೆ !
ಅಲೋಪಥಿಯ ಚಿಕಿತ್ಸಾ ಪದ್ಧತಿಯಲ್ಲಿ ಯಾವುದೇ ರೋಗಾಣುವಿಗೆ ಔಷಧವಿಲ್ಲ. ಮುಂಜಾಗ್ರತೆಯನ್ನು ವಹಿಸುವುದೇ ಔಷಧ; ಆದ್ದರಿಂದ ‘ಪದೇ ಪದೇ ಸಾಬೂನಿನಿಂದ ಕೈತೊಳೆದುಕೊಳ್ಳಿ, ಮೂಗು-ಬಾಯಿಗೆ ಕರವಸ್ತ್ರವನ್ನು ಕಟ್ಟಿಕೊಳ್ಳಿ ಹಾಗೂ ಪ್ರತ್ಯೇಕವಾಗಿರಿ, ಇದೇ ೩ ಪ್ರಮುಖ ಉಪಾಯಗಳನ್ನು ಹೇಳಲಾಗುತ್ತದೆ. ಹೀಗೆ ಕಳೆದ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದರಲ್ಲಿ ಅನೇಕ ಹೊಸ ರೋಗಾಣುಗಳು ಜನ್ಮ ತಾಳಿವೆ ಹಾಗೂ ಅವುಗಳು ಹೋಗಿಯೂ ಆಗಿದೆ !
ಏಕೆಂದರೆ ಈ ರೋಗಾಣುಗಳು ಈ ಹಿಂದೆಯೂ ಇದ್ದವು, ಈಗಲೂ ಇವೆ ಹಾಗೂ ಮುಂದೆಯೂ ಇರಲಿವೆ. ಕೇವಲ ಕಾಲಾನುಸಾರ ಅವುಗಳ ಹೆಸರು ಬೇರೆ ಬೇರೆ ಇವೆ.
೩. ದಾನವರ ಅವತಾರ !
ಈ ಸಂದರ್ಭದಲ್ಲಿ ಬೇರೆಯೆ ಒಂದು ವಿಚಾರ ಮನಸ್ಸಿನಲ್ಲಿ ಬರುತ್ತದೆ. ದೇವರು ಕೆಲವು ವಿಶಿಷ್ಟವಾದ ಕಾರಣಗಳಿಗಾಗಿ ೧೦ ಅವತಾರಗಳನ್ನು ತಾಳಿದರು. ಅವುಗಳು ಸಹ ವಿಶಿಷ್ಟ ಕಾಲಕ್ಕಾಗಿ ಮತ್ತು ಕಾರ್ಯಕ್ಕಾಗಿಯೆ ಇವೆ. ಕಾರ್ಯ ಪೂರ್ಣಗೊಂಡ ನಂತರ ಅವತಾರ ಸಮಾಪ್ತಿಯಾಗುತ್ತದೆ. ಹತ್ತನೆ ಅವತಾರ ಕಲ್ಕಿ ಅವತಾರವಾಗಿದೆ. ಅದು ಮೊದಲೆ ತಿಳಿದಿದೆ; ಆದರೆ ಈ ಅವತಾರಕ್ಕೆ ಇನ್ನೂ ತುಂಬಾ ಸಮಯ ಬಾಕಿ ಇದೆ. ಹೇಗೆ ದೇವರು ಅವತಾರವನ್ನು ಪಡೆದುಕೊಂಡರೊ, ಹಾಗೆಯೆ ದಾನವರು ಸಹ ಅವತಾರವನ್ನು ತಾಳಿರಲಿಕ್ಕಿಲ್ಲವೆ ? ಖಂಡಿತವಾಗಿ ತಾಳಿದ್ದಾರೆ. ದೇವರು ಹೇಗೆ ಮನುಕುಲ, ಪೃಥ್ವಿ, ವಿಶ್ವದ ರಕ್ಷಣೆಗಾಗಿ ಅವತಾರವನ್ನು ತಾಳಿದರೊ, ಅದೇ ರೀತಿಯಲ್ಲಿ ಅಖಿಲ ವಿಶ್ವ, ಪೃಥ್ವಿ, ಮನುಕುಲವನ್ನು ನಾಶ ಮಾಡಲು ದಾನವರು ಸಹ ಅವತಾರ ತಾಳಿದ್ದಾರೆ.
೪. ಅನೇಕ ರೋಗಾಣುಗಳು ಹಬ್ಬಿಸಿರುವ ಕೋಲಾಹಲವು ದಾನವ ಅವತಾರದ ಕಾರ್ಯವಾಗಿದೆ !
ಸ್ವೈನ್ ಫ್ಲೂ, ಇಬೋಲಾ, ಸಾರ್ಸ್, ಮಾರ್ಸ್, ಚಿಕ್ಕನ್‌ಗುನಿಯಾ, ಎವಿಯನ್ ಇನ್ಫ್ಲುಎಂಜಾ, ಎಲೋಫಿವರ್, ನಿಪಾಹ, ಜಾಪನೀಸ್ ಎನ್ಸೆಫೆಲಾಯಟೀಸ್, ಡೇಂಗ್ಯೂ, ಬರ್ಡ್ ಫ್ಲೂ, ಮಂಕಿಫಿವರ್ (ಮಂಗನ ಕಾಯಿಲೆ), ಪ್ಲೇಗ್, ಪೊಲಿಯೊ, ಸಿಡುಬು, ಹ್ಯೂಮನ್ ಎಂಟೇರೊ ವೈರಸ್, ಕೆಂಗಣ್ಣು, ನೆಗಡಿ, ಇತ್ಯಾದಿ ಅನೇಕ ರೋಗಾಣು ಮಾಡಿದ ಹಾವಳಿಗಳು ತಮಗೆ ನೆನಪಿರಬಹುದು ! ಇವುಗಳಿಗೆ ಇಂದಿನ ಆಧುನಿಕ ಔಷಧೋಪಚಾರ (ಮಾಡರ್ನ ಮೆಡಿಸಿನ್) ಪದ್ಧತಿಯಲ್ಲಿ ಏನಾದರೂ ಚಿಕಿತ್ಸೆಯನ್ನು ಹೇಳಲಾಗಿದೆಯೆ ? ಇಲ್ಲವೆ ಇಲ್ಲ. ಕೇವಲ ಮೇಲೆ ಹೇಳಿರುವ ಮೂರು ಮುಂಜಾಗ್ರತೆಯನ್ನು ಪಾಲಿಸಿದರೆ ಮಾತ್ರ ಬಚಾವಾಗಬಹುದು, ಎಂದು ಹೇಳಲಾಗುತ್ತದೆ, ಇಷ್ಟೆ ! ಹಾಗಾದರೆ ಇದಕ್ಕೆ ಏನಾದರೂ ಬೇರೆ ಪರ್ಯಾಯವನ್ನು ಕಂಡುಹಿಡಿಯಲಿಕ್ಕಿಲ್ಲವೇ ? ಅಥವಾ ಔಷಧಕ್ಷೇತ್ರದಲ್ಲಿನ ತಮ್ಮ ಗುತ್ತಿಗೆಗೆ ಅಪಾಯವಾಗಬಾರದೆಂದು, ಆಯುರ್ವೇದದಂತಹ ಪ್ರಾಚೀನ ಹಾಗೂ ಪ್ರಗತಿಹೊಂದಿರುವ, ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ, ಸೂಕ್ಷ್ಮ ಹಾಗೂ ಸ್ಥೂಲ, ಸ್ವಸ್ಥವೃತ್ತಾರ್ಥ (ಆರೋಗ್ಯವನ್ನು ಕಾಪಾಡಿಕೊಳ್ಳಲು) ಮತ್ತು ವ್ಯಾಧಿನಾಶಕ್ಕಾಗಿ ಹೇಳಿರುವ ಔಷಧಗಳ ವಿಚಾರವನ್ನು ಉದ್ದೇಶಪೂರ್ವಕ ಬದಿಗೊತ್ತುವುದು ಹಾಗೂ ಯಾರಾದರೂ ಈ ವಿಷಯವನ್ನು ಹೇಳಲು ಮುಂದೆ ಬಂದರೂ ಅವರನ್ನು ಕಡೆಗಣಿಸುವುದು !
೫. ಆಯುರ್ವೇದಕ್ಕನುಸಾರ ೩ ಸ್ತರಗಳಲ್ಲಿ ಕಾಯಿಲೆ ಬರುತ್ತದೆ !
ಅಮೇರಿಕಾ, ಸ್ಪೇನ್, ಇಟಲಿ, ಇರಾನ್, ಇರಾಕ್ ಇತ್ಯಾದಿಗಳಿಗಿಂತಲೂ ಭಾರತವು ಚೀನಾದ ಅತೀ ಸಮೀಪದ ದೇಶವಾಗಿದೆ, ಆದರೆ ಇಲ್ಲಿ ಕೊರೋನಾಗೆ ನುಸುಳಲು ೩ ತಿಂಗಳು ತಗಲಲು ಕಾರಣವೇನು ? ಇದಕ್ಕೂ ಕೆಲವು ಕಾರಣಗಳಿವೆ. ಆಯುರ್ವೇದ ಹೇಳುತ್ತದೆ, ಕಾಯಿಲೆ ೩ ಹಂತಗಳಲ್ಲಿ ಬರುತ್ತದೆ. ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮತ್ತು ಇಂದಿನ ಕಾರಣ ಅದು ಸಾಮಾಜಿಕವಾಗಿದೆ !
೫ ಅ. ಆಧ್ಯಾತ್ಮಿಕ : ಭಾರತವು ದೇವಭೂಮಿಯಾಗಿದೆ. ಭಾರತದ ಸರಾಸರಿ ಉಷ್ಣಾಂಶ ೩೨ ಡಿಗ್ರಿ ಸೆಲ್ಸಿಯಸ್ ಇದೆ. ನಾವು ಉಷ್ಣ ಪ್ರದೇಶದಲ್ಲಿ ವಾಸಿಸುತ್ತೇವೆ, ಇದು ದೇವರ ಕೃಪೆಯೆ ಅಲ್ಲವೆ ?
೫. ಆ. ಮಾನಸಿಕ : ‘ನಮಗೆ ಏನೂ ಆಗಲಿಕ್ಕಿಲ್ಲ, ಎನ್ನುವ ಮೂಲಭೂತ ಮಾನಸಿಕ ಸಕಾರಾತ್ಮಕ ವಿಚಾರಧಾರೆ ದೇಶದಲ್ಲಿದೆ.
೫ ಇ. ಶಾರೀರಿಕ : ಚಿಕ್ಕಂದಿನಿಂದ ಇಂದಿನವರೆಗೆ ಸತ್ತು ಹೋಗಿರುವ ಹಾಗೂ ಅರೆಜೀವವಿರುವ ರೋಗಾಣುಗಳನ್ನು ನಾವು ಜೀರ್ಣಿಸಿ ಕೊಂಡಿದ್ದೇವೆ; ಆದರೆ ಅದರಿಂದಲೆ ನಮ್ಮ ಶಾರೀರಿಕ ಕ್ಷಮತೆ ಸಹ (ಆಟೋಇಮ್ಯೂನ್ ಸಿಸ್ಟಮ್) ಹೆಚ್ಚಾಗುತ್ತಿದೆ !
೫ ಈ. ಸಾಮಾಜಿಕ : ಇಷ್ಟು ಜನದಟ್ಟಣೆಯಲ್ಲಿ ನಾವು ಹುಟ್ಟಿ ಬೆಳೆದು ದೊಡ್ಡವರಾದೆವು, ಅದು ಲೋಕಲ್ ರೈಲ್ ಇರಲಿ ಅಥವಾ ಮೆಟ್ರೋ ! ನದಿಗಳಲ್ಲಿ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಅಥವಾ ಎಮ್ಮೆಗಳನ್ನು ತೊಳೆಯುವುದೇ ಇರಲಿ ! ಕುಂಭಮೇಳದಂತಹ ಯಾತ್ರೆಯಿರಲಿ ಅಥವಾ ಊರಿನ ಜಾತ್ರೆ ಇರಲಿ ! ಇಕ್ಕಟ್ಟಿನ ಜನಜಂಗುಳಿಯ ವಾರದ ಸಂತೆಯಾಗಿರಲಿ ಅಥವಾ ಶಾಲೆಗಳಲ್ಲಿನ ಆಟವಿರಲಿ ! ನಾಮಕರಣ ಅಥವಾ ವಿವಾಹವಿರಲಿ ! ಜನಸಂದಣಿಯಂತೂ ನಮಗೆ ಅಭ್ಯಾಸವಾಗಿ ಹೋಗಿದೆ. ನಮ್ಮ ಜನ್ಮಕ್ಕಿಂತಲೂ ಮೊದಲಿನಿಂದಲೆ ನಮಗೆ ಈ ಜನಸಂದಣಿಯ ಅಭ್ಯಾಸವಿದೆ, ಆದ್ದರಿಂದ ನಮಗೆ ಒಂದೇ ದಿನದಲ್ಲಿ ಕ್ವಾರಂಟೈನ್ಗೆ ಹೋಗುವುದು ಕಠಿಣವೆನಿಸುವುದು ಸಹಜ.
೬. ಎಲ್ಲೆಡೆ ಆರ್ಥಿಕ ಮುಗ್ಗಟ್ಟು ಇರುವಾಗ ಚೀನಾ ಮಾತ್ರ ವೇಗ ಪಡೆದಿದೆ !
ರೋಟರೀ, ಲಯನ್ಸ್, ಜಾಯಂಟ್ಸ್ ಮತ್ತು ರೆಡ್‌ಕ್ರಾಸ್‌ನಂತಹ ಅನೇಕ ಅಂತರಾಷ್ಟ್ರೀಯ ಮನ್ನಣೆ ಹೊಂದಿರುವ ಸಂಘಟನೆಗಳು ಆಯಾಯ ದೇಶಗಳಲ್ಲಿವೆ. ಅವರು ಭಾರತಕ್ಕೆ ಈ ರೋಗಾಣುವಿನ ಅರಿವನ್ನು ಯೋಗ್ಯಸಮಯದಲ್ಲಿ ಏಕೆ ಮಾಡಿಕೊಡಲಿಲ್ಲ ? ಈಗ ಮೋಜು ಹೇಗಿದೆ ನೋಡಿ. ಈ ರೋಗಾಣುವನ್ನು ಕಂಡು ಹಿಡಿದದ್ದು ಚೀನಾ ! ಕಿಟ್‌ಗಳನ್ನು ಪೂರೈಸಿದ್ದು ಚೀನಾ ಲಸಿಕೆಯನ್ನು ಸಿದ್ಧಪಡಿಸುವುದು ಚೀನಾವೆ ! ಬಾಕಿ ಎಲ್ಲ ದೇಶಗಳಲ್ಲಿ ಕುಸಿತ, ಕೇವಲ ಚೀನಾ ವೇಗ ಪಡೆದಿದೆ ! ಅಂದರೆ ಇಲಿ ಮತ್ತು ಬೆಕ್ಕು ಎರಡೂ ನಮ್ಮದೇ; ಆದರೆ ಅವುಗಳು ಎಲ್ಲೆಲ್ಲಿ ಓಡುತ್ತವೆಯೋ, ಅಲ್ಲಿ ಆಗಿರುವ ಹಾನಿಗೆ ನಾವು ಹೊಣೆಯಲ್ಲ. ‘ಇದರಲ್ಲಿ ಚೀನಾದ ಕುತಂತ್ರ ಏನಾದರೂ ಇರಲಿಕ್ಕಿಲ್ಲವೆ ?, ಎಂದು ನಾನು ಹೇಳಿದರೆ, ಕಿವಿ ನೆಟ್ಟಗೆ ಮಾಡಿ ಕಣ್ಣು ದೊಡ್ಡದು ಮಾಡಿ ನನ್ನತ್ತ ನೋಡುವವರಿಗೇನೂ ಕಡಿಮೆಯಿಲ್ಲ. ಚೀನಾದಲ್ಲಿ ಈ ರೋಗಾಣುವಿನ ನಾಮಕರಣವಾಯಿತು. ಆ ದೇಶ ಸಹ ತಮ್ಮ ಪಾರಂಪಾರಿಕ ಚಿಕಿತ್ಸಾ ಪದ್ಧತಿಗಳಿಗೆ ಮನ್ನಣೆ ಕೊಡುತ್ತಿದೆ, ಆದರೆ ನಾವು ಮಾತ್ರ ದುರ್ಬಲರಾಗಿ ತಮ್ಮನ್ನು ‘ಕ್ವಾರಂಟೈನ್ ಮಾಡಿಸಿಕೊಳ್ಳುತ್ತಿದ್ದೇವೆ.
೭. ಆಯುರ್ವೇದದಲ್ಲಿ ಅನೇಕ ಉಪಾಯಗಳಿವೆ
ಆಯುರ್ವೇದಕ್ಕನುಸಾರ ಎಷ್ಟು ಬೇಕಾದರೂ ಚಿಕಿತ್ಸೆಗಳನ್ನು ಹೇಳಬಹುದು; ಆದರೆ ಪೂರ್ವಗ್ರಹಪೀಡಿತರಾಗಿದ್ದು ‘ಆಯುರ್ವೇದ ಚಿಕಿತ್ಸಾಲಯಗಳು ಕೇವಲ ಆಮ್ಲಪಿತ್ತ (ಎಸಿಡಿಟಿ) ಮತ್ತು ವಾತದ ಕಾಯಿಲೆಗಳನ್ನು ಗುಣಪಡಿಸಲಿಕ್ಕಾಗಿ ಇವೆ. ಅವುಗಳನ್ನು ತಮ್ಮ ‘ಶೈನಿಂಗ್ ಮತ್ತು ‘ಮಾರ್ಕೇಟಿಂಗ್ ಹೆಚ್ಚಿಸಲು ನಡೆಸಲಾಗುತ್ತದೆ, ಎನ್ನುವ ನಿರರ್ಥಕ ಸಲಹೆ ನೀಡುವವರಿಗೆ ಅದು ಇಷ್ಟವಾಗಬೇಕಲ್ಲವೆ ? ಇರಲಿ. ಅದು ಅವರ ಇಷ್ಟ, ಆದರೆ ಯಾವುದು ಯೋಗ್ಯವಾಗಿದೆಯೊ, ಅದನ್ನು ಹೇಳುವುದು ಆಯುರ್ವೇದ ವೈದ್ಯನಾಗಿ ನನ್ನ ಕರ್ತವ್ಯವೆಂದು
೭ ಅ. ನಿತ್ಯ ಉಪಾಯ : ರಾತ್ರಿಯ ಊಟವನ್ನು ಸಾಯಂಕಾಲ ೭ ಗಂಟೆಯೊಳಗೆ ಮಾಡಬೇಕು. ಸಾಯಂಕಾಲ ೭ ರ ನಂತರ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ನೀರನ್ನು ಊಟ ಮಾಡುವಾಗ ಮಾತ್ರ ಕುಡಿಯಬೇಕು. ಉಳಿದ ಸಮಯದಲ್ಲಿ ಬಾಯಾರಿಕೆಯಾದರೆ ಒಂದು ಗುಟುಕು ಮಾತ್ರ ಕುಡಿಯಬೇಕು ಇಲ್ಲವಾದರೆ ಕುಡಿಯಬಾರದು. ಹಸಿವಿಗಿಂತ ನಾಲ್ಕು ತುತ್ತು ಕಡಿಮೆ ಉಣ್ಣಬೇಕು. ನಿಯಮಿತವಾಗಿ ಪ್ರಾಣಾಯಾಮ ಮಾಡಬೇಕು. ಅವಶ್ಯಕತೆಗನುಸಾರ ಆಯುರ್ವೇದ ವೈದ್ಯರಿಂದ ಚಿಕಿತ್ಸೆಯನ್ನೂ ಮಾಡಿಸಿಕೊಳ್ಳಬೇಕು.
೭ ಆ. ಅತೀ ಉತ್ತಮವಾದ ಧೂಪನ ಚಿಕಿತ್ಸೆ : ಮನೆಯಲ್ಲಿ ೨ – ೩ ಬಾರಿ ಧೂಪ ಹಾಕಬೇಕು. ಧೂಪದ ಬದಲು ಕಹಿಬೇವಿನ ಎಲೆಗಳು, ಅರಿಸಿನಪುಡಿ, ಕರ್ಪೂರ, ಗುಗ್ಗುಳ, ಲವಂಗ, ಏಲಕ್ಕಿ, ನೀರುಳ್ಳಿ-ಬೆಳ್ಳುಳ್ಳಿಯ ಸಿಪ್ಪೆ, ಮೆಣಸಿನ ತೊಟ್ಟು, ತುಪ್ಪ, ಅಕ್ಷತೆ ಹಾಗೂ ಹಸುವಿನ ಸೆಗಣಿಯ ಬೆರಣಿ, ಗೆರಟೆ, ಇದ್ದಲು ಇತ್ಯಾದಿ ಯಾವುದು ಲಭ್ಯವಿದೆಯೋ ಅದನ್ನು ಉಪಯೋಗಿಸಿ ಅಗ್ನಿಹೋತ್ರ ಮಾಡಬೇಕು. ಸಂಜೆ ಚಿಕ್ಕ ಮಕ್ಕಳ ಮತ್ತು ವೃದ್ಧರ ದೃಷ್ಟಿ ತೆಗೆಯಬೇಕು.
೭ ಇ. ಜಂತುನಾಶಕ ಸ್ಪ್ರೇ : ಮನೆಗಳಲ್ಲಿ ಮತ್ತು ಅಂಗಳದಲ್ಲಿ ಗೋಮೂತ್ರ ವನ್ನು ಸಿಂಪಡಿಸುವುದು; ಹಸುವಿನ ಸೆಗಣಿಯನ್ನು ಸಾರಿಸುವುದು; ಕಹಿಬೇವು, ಕರಂಜ, ಅರಿಸಿನ, ತುಳಸಿ ಇತ್ಯಾದಿ ಜಂತುನಾಶಕ ವಸ್ತುಗಳ ಮಿಶ್ರಣವನ್ನು ತಯಾರಿಸಿ ಮನೆಯ ಸುತ್ತಮುತ್ತ ಸಿಂಪಡಿಸುವುದು. ಇದನ್ನು ಮಾಡುವಾಗ ‘ಕ್ವಾರಂಟೈನ್ ಆಗಲು ಏನೂ ಅಡ್ಡಿಯಿಲ್ಲ. ಈ ಉಪಾಯವನ್ನು ಸಹ ಆಯುರ್ವೇದದಲ್ಲಿ ಬರೆಯಲಾಗಿದೆ. ಟೀಕೆ ಮಾಡುವವರು ಸತ್ಯ ಏನೆಂದು ತಿಳಿದುಕೊಳ್ಳಲು ಮೂಲ ಗ್ರಂಥವನ್ನು ಸ್ವಲ್ಪ ಓದಿ ನೋಡಬೇಕು
ಪ್ರಸಙ್ಗಾದ್‌ಗಾತ್ರಸಂಸ್ಪರ್ಶಾನ್ನಿಃಶ್ ವಾಸಾತ್ ಸಹಭೋಜನಾತ್ |
ಸಹಶಯ್ಯಾಸನಾಚ್ಚಾಪಿ ವಸ್ತ್ರಮಾಲ್ಯಾನುಲೇಪನಾತ್ ||
ಕುಷ್ಠಂ ಜ್ವರಾಶ್ ಚ ಶೋಷಶ್ ಚ ನೇತ್ರಾಭಿಷ್ಯನ್ದ ಎವ ಚ |
ಔಪಸರ್ಗಿಕರೋಗಾಶ್ ಚ ಸಙ್ಕ್ರಾಮನ್ತಿ ನರಾನ್ನರಮ್ ||
– ಸುಶ್ರುತಸಂಹಿತಾ, ನಿದಾನಸ್ಥಾನ, ಅಧ್ಯಾಯ ೫, ಶ್ಲೋಕ ೩೩ ಮತ್ತು ೩೪
ಅರ್ಥ : ನಿತ್ಯವೂ ಒಟ್ಟಾಗಿ ಕೆಲಸ ಮಾಡುವುದು, ಪರಸ್ಪರ ಸ್ಪರ್ಶಿಸುವುದು, ಇತರರು ಬಿಟ್ಟ ಉಚ್ಚ್ವಾಸವನ್ನು ಸ್ವೀಕರಿಸುವುದು, ಒಟ್ಟಾಗಿ ಕುಳಿತು ಊಟ ಮಾಡುವುದು, ಒಂದೇ ಆಸನದಲ್ಲಿ ಕುಳಿತು ಕೊಳ್ಳುವುದು, ಒಂದೇ ಮಂಚದಲ್ಲಿ ಮಲಗುವುದು, ಬೇರೆಯವರ ವಸ್ತ್ರವನ್ನು ಧರಿಸುವುದು, ಇತರರು ಮೂಸಿ ನೋಡಿರುವ ಹೂವುಗಳನ್ನು ಮೂಸುವುದು, ಬೇರೆಯವರು ಉಪಯೋಗಿಸಿದ ಗಂಧ(ಚಂದನ)ವನ್ನು ತಾನು ಹಚ್ಚಿಕೊಳ್ಳುವುದು ಇತ್ಯಾದಿ ಕಾರಣಗಳಿಂದ ಚರ್ಮರೋಗ, ಜ್ವರ, ಟಿ.ಬಿ, ಕೆಂಗಣ್ಣು ಮುಂತಾದ ‘ಔಪಸರ್ಗಿಕ(ಸಾಂಕ್ರಾಮಿಕ) ಕಾಯಿಲೆಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಈ ಶ್ಲೋಕವು ಸುಶ್ರುತ ಸಂಹಿತೆಯಲ್ಲಿ, ಶಸ್ತ್ರಚಿಕಿತ್ಸೆಯ ‘ಆದ್ಯಜನಕನೆಂದು ಹೇಳುತ್ತಾ ಜಗತ್ತು ಯಾರ ಮುಂದೆ ತಲೆಬಾಗಿಸುತಿದೆಯೋ, ಅವರಿಗೆ ಸಂಬಂಧಿಸಿದೆ.
೮. ಇಂತಹ ಕ್ವಾರಂಟೈನ್ ಬೇರೆ ಯಾವುದೆ ಚಿಕಿತ್ಸಾ ಪದ್ಧತಿಯಲ್ಲಿದೆಯೆ ?
ಪರಸ್ಪರರಲ್ಲಿ ಆಗುವ ಗಾತ್ರಸ್ಪರ್ಶವನ್ನು ತಪ್ಪಿಸುವುದು, ಪರಸ್ಪರರ ಶ್ವಾಸ ಸಂಪರ್ಕವಾಗದಂತೆ ಒಂದು ಮೀಟರ್ ಅಂತರದಲ್ಲಿರುವುದು ಹಾಗೂ ಒಂದೇ ತಟ್ಟೆಯಲ್ಲಿ ಭೋಜನ ಮಾಡುವುದು, ಪರಸ್ಪರರ ಎಂಜಲನ್ನವನ್ನು, ಉದಾ. ಕೇಕ್ ಇತ್ಯಾದಿ ತಿನ್ನುವುದು ಅಥವಾ ತಿನ್ನಿಸುವುದು; ಮೈಗೆ ಮೈ ತಾಗಿಸುವುದು; ಪರಸ್ಪರರ ಹಾಸಿಗೆ, ಹೊದಿಕೆ, ಬಟ್ಟೆ ಇತ್ಯಾದಿ ಉಪಯೋಗಿಸುವುದು; ಪರಸ್ಪರರ ಆಭರಣಗಳನ್ನು ಉದಾ. ಕಿವಿಯ, ಮೂಗಿನ, ಕೊರಳಿನ, ಆಭರಣಗಳು, ಕುಂಕುಮ ಬಿಂದಿ, ಇಯರ್‌ಫೋನ್; ಲಿಪ್‌ಸ್ಟಿಕ್, ಟೂಥ್‌ಪೇಸ್ಟ್, ಟೂಥ್‌ಬ್ರಶ್, ಬಾಚಣಿಗೆ, ಪೌಡರ್, ಸಾಬೂನು ಇತ್ಯಾದಿ ಸೌಂದರ್ಯ ಸಾಧನಗಳನ್ನು ಉಪಯೋಗಿಸುವುದು; ಬೇರೆಯವರ ಶೂ ಮತ್ತು ಸಾಕ್ಸ್, ಮ್ಯಾಚಿಂಗ್ ಚಪ್ಪಲ್, ಶಲ್ಯ, ಬಿಂದಿ ಇತ್ಯಾದಿ ಪರಸ್ಪರ ಉಪಯೋಗಿಸುವುದು; ಹೀಗೇನಾದರೂ ಮಾಡಿದರೆ, ಅನೇಕ ತರಹದ ಜ್ವರ, ಚರ್ಮರೋಗ, ಉಸಿರಾಟದ ಕಾಯಿಲೆಗಳು, ಕೆಂಗಣ್ಣು ಇತ್ಯಾದಿ ಅನೇಕ ಔಪಸರ್ಗಿಕ (ಇನ್ಫೆಕ್ಶನ್ ಡಿಸೀಸ್, ಸಾಂಕ್ರಾಮಿಕ) ಕಾಯಿಲೆಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಇಷ್ಟು ಸ್ಪಷ್ಟವಾದ ಕ್ವಾರಂಟೈನ್ ಬೇರೆ ಯಾವ ಚಿಕಿತ್ಸಾ ಪದ್ಧತಿಯಲ್ಲಿದೆ, ಎಂಬುದನ್ನು ತೋರಿಸಿಕೊಡಬಹುದೆ ?
೯. ಸೂಕ್ಷ್ಮ ಬಾಧೆಯ ತೊಂದರೆ ೨೧ ದಿನಗಳವರೆಗೆ ಇರುತ್ತದೆ !
ವಾಗ್‌ಭಟಾಚಾರ್ಯರು ಇನ್ನೂ ಮುಂದೆ ಹೋಗಿ ಹೇಳುತ್ತಾರೆ, ಈ ಸೂಕ್ಷ್ಮ ಬಾಧೆಯು ೨೧ ದಿನಗಳವರೆಗೆ ಇರುತ್ತದೆ. ಈ ೨೧ ದಿನಗಳ ಸಂಖ್ಯೆಯನ್ನು ಅರ್ಥವಿಲ್ಲದೆ ಕಂಡು ಹಿಡಿದಿರಬಹುದೇ ? ಈ ೨೧ ದಿನಗಳ ನಿರ್ಧಿಷ್ಟ ಸಂಖ್ಯಾಗಣಿತವು ಆ ಕಾಲದ ಶಾಸ್ತ್ರಜ್ಞರಿಗೆ ಖಂಡಿತವಾಗಿ ತಿಳಿದಿರಬಹುದು. ಆ ಋಷಿಗಳು ಇಷ್ಟು ವರ್ಣನೆಯನ್ನು ಮಾಡಿದ್ದಾರೆ, ‘ಏನು ಮಾಡಬೇಕು, ಏನು ಮಾಡಬಾರದು, ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ, ಅವರು ಇದರ ಚಿಕಿತ್ಸೆಯನ್ನು ಹೇಳಿರಲಿಕ್ಕಿಲ್ಲವೆ ? ಖಂಡಿತವಾಗಿ ಹೇಳಿದ್ದಾರೆ; ಆದರೆ ಯಾರು ವಿಶ್ವಾಸವಿಡುವರು ? ಯಾರಿಗೆ ಆಯುರ್ವೇದದ ಮೇಲೆ ವಿಶ್ವಾಸವಿದೆಯೋ, ಅವರು ಈ ಮುಂದಿನ ಉಪಾಯವನ್ನು ಖಂಡಿತವಾಗಿ ಮಾಡಬೇಕು. ಇದು ಗಾಳಿಸುದ್ದಿಯಲ್ಲ, ಆದರೆ ಅದನ್ನು ಪ್ರಯೋಗಿಸಲು ಸರಕಾರ ರೋಗಿಯನ್ನು ದೊರಕಿಸಿ ಕೊಡಬೇಕಲ್ಲವೇ ?
‘ನಾವು ಹೇಳುವುದೇ ಸರಿ, ಉಳಿದವರೆಲ್ಲರೂ ಮೂರ್ಖರು, ಎನ್ನುವ ಮಾನಸಿಕತೆ ಇರುವವರಿಗೆ ಬುದ್ಧಿವಂತಿಕೆಯನ್ನು ಹೇಳಲು ಹೋಗಬಾರದು. ಅದರಲ್ಲಿ ನಮ್ಮಂತಹ ವೈದ್ಯರೇ ಮೂರ್ಖರಾಗುತ್ತಾರೆ. ಆದ್ದರಿಂದ ‘ನಾವಾಯಿತು, ನಮ್ಮ ರೋಗಿಗಳಾಯಿತು, ಎಂದು ಆಯುರ್ವೇದದಲ್ಲಿ ೫೦ ವರ್ಷಗಳ ಅನುಭವವಿರುವ ನಮ್ಮ ಗುರು ನಾನಾ (ಧುಳೆಯಲ್ಲಿನ ಪ್ರಖ್ಯಾತ ವೈದ್ಯ ಪ್ರಭಾಕರ ತಾನಾಜಿ ಜೋಶಿ) ಹೇಳುತ್ತಾರೆ, ಅದು ಸುಳ್ಳಲ್ಲ.
೧೦. ಈಗ ಬಿಡುವಿನ ಸಮಯದಲ್ಲಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇನ್ನೂ ಏನು ಮಾಡಬಹುದು ?
೧೦ ಅ. ‘ಇಮ್ಯುನಿಟಿ ಬೂಸ್ಟರ್ (ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸಲು) ಕಷಾಯ
ತುಳಸಿಯ ೫ – ೬ ಹೂಗೊಂಚಲು, (ತುಳಸಿಯ ಪೌಡರ್ ಬೇಡ), ೪ ಕರಿಮೆಣಸು, ೪ ಲವಂಗ, ಇವುಗಳನ್ನು ೬ ಕಪ್ ನೀರಿನಲ್ಲಿ ಕುದಿಸಿ ೨ ಕಪ್ ಮಾಡಬೇಕು. ಅದನ್ನು ಸೋಸಿ ‘ಥರ್ಮಾಸ್ನಲ್ಲಿ ತುಂಬಿಸಿ ಇಡಬೇಕು. ಇದನ್ನು ಪ್ರತಿದಿನ ೩ – ೪ ಬಾರಿ ಗುಟುಕರಿಸುತ್ತಾ ಸೇವಿಸಬೇಕು.
೧೦ ಆ. ಮನೆಯಲ್ಲಿಯೆ ಪಂಚಕರ್ಮ
೧೦ ಆ ೧. ವಿರೇಚನ : ಯಾವುದೇ ತೊಂದರೆ ಇಲ್ಲದವರು ೪ ಚಮಚ ಔಡಲ ಎಣ್ಣೆಯನ್ನು ಮುಂಜಾನೆ ೪ ಗಂಟೆಗೆ ನಿರಂತರ ೪ ದಿನ ತೆಗೆದುಕೊಳ್ಳಬೇಕು. ಇದರಿಂದ ೩ – ೪ ಬಾರಿ ಬೇಧಿ ಆಗುತ್ತದೆ. ಹೊಟ್ಟೆ ಸ್ವಚ್ಛವಾಗುತ್ತದೆ. ಹೊಟ್ಟೆಯಲ್ಲಿನ ಮಲಿನ ಅಂಟು ಪದಾರ್ಥ, ಆಮ್ಲತೆ ದೂರವಾಗುತ್ತದೆ. ಜೀರ್ಣಶಕ್ತಿ ಹೆಚ್ಚಾಗುತ್ತದೆ.
೧೦ ಆ ೨. ನಶ್ಯ : ಮೂಗಿಗೆ ತುಪ್ಪ ಅಥವಾ ಎಣ್ಣೆ ಹಾಕಬೇಕು. ಮನೆಯಿಂದ ಹೊರಗೆ ಹೋಗುವಾಗ ಮೂಗಿನ ಒಳಬಾಗದಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಸವರಬೇಕು. ಪ್ರತಿದಿನ ಬೆಳಿಗ್ಗೆ ಸ್ನಾನದ ಮೊದಲು ಮೈಗೆ ಎಣ್ಣೆಯಿಂದ ಮಸಾಜು ಮಾಡಬೇಕು.
೧೦ ಆ ೩. ವಮನ, ಬಸ್ತಿ ಮತ್ತು ರಕ್ತಮೋಕ್ಷಣ ಈ ಕರ್ಮಗಳನ್ನು ಎಲ್ಲ ರೋಗಾಣುಗಳ ಸೋಂಕು ಮುಗಿದ ನಂತರ ಸಮೀಪದಲ್ಲಿರುವ ಪಂಚಕರ್ಮ ತಜ್ಞರಲ್ಲಿಗೆ ಹೋಗಿ ಮಾಡಿಸಿಕೊಳ್ಳಬೇಕು.
೧೧. ಆಯುರ್ವೇದದಲ್ಲಿನ ಲಸಿಕೆಗಳು
ರೋಗ ಬಂದ ನಂತರ ಚಿಕಿತ್ಸೆಯನ್ನು ಹುಡುಕುವ ಬದಲು ರೋಗ ಬರಲೇ ಬಾರದು ಎಂದು ಪ್ರಯತ್ನಿಸಬೇಕು. ‘ಬಾಯಾರಿಕೆಯಾದಾಗ ಬಾವಿಯನ್ನು ತೋಡುವುದು, ಎನ್ನುವ ಗಾದೆಯ ನೆನಪಾಗಬಹುದು. ಆಯುರ್ವೇದಕ್ಕನುಸಾರ ಹೇಳಿರುವ ದಿನಚರಿ-ಋತುಚರ್ಯೆಯನ್ನು ಪಾಲಿಸುವುದು, ಆಹಾರದ ನಿಯಮಗಳನ್ನು ಪಾಲಿಸುವುದು, ಪ್ರಕೃತಿ ಗನುಸಾರ ತಮ್ಮ ತಮ್ಮ ಪಥ್ಯವನ್ನು ನಿರ್ಧರಿಸುವುದು, ನಿಯಮಿತವಾಗಿ ವ್ಯಾಯಾಮ ಹಾಗೂ ಪ್ರಾಣಾಯಾಮ ಮಾಡುವುದು ಇತ್ಯಾದಿ ರೋಗ ಬರಬಾರದೆಂದು, ಅದಕ್ಕಾಗಿ ವಹಿಸಿರುವ ಕಾಳಜಿಯೆಂದರೆ ಲಸೀಕರಣ ವಾಗಿದೆಯೆಂದಾದರೆ, ಆಯುರ್ವೇದದಲ್ಲಿ ಹೇಳಿರುವ ಇದು ಲಸೀಕರಣವಲ್ಲವೆ ?
೧೨. ಇನ್ನಾದರೂ ಆಯುರ್ವೇದ ಶಾಸ್ತ್ರಕ್ಕೆ ಅವಕಾಶ ಸಿಗಬೇಕು !
ಇವೆಲ್ಲವನ್ನೂ ನಮ್ಮ ಎಲ್ಲ ಆಯುರ್ವೇದ ಸಂಸ್ಥೆಗಳು ಒಟ್ಟಾಗಿ ದೇಶದ ಆಯಷ್ ಸಚಿವಾಲಯ, ಪ್ರಧಾನಮಂತ್ರಿ, ಆರೋಗ್ಯಮಂತ್ರಿ, ಗೃಹಮಂತ್ರಿ ಮುಂತಾದವರಿಗೆ ವಿವರಿಸಿ ಹೇಳಿದೆ. ಈಗ ಅವಶ್ಯತೆ ಇರುವುದೆಂದರೆ, ಜನರೆ ಪದೇ ಪದೇ ಹೇಳುವುದು ! ಇನ್ನಾದರೂ ಆಯುರ್ವೇದ ಶಾಸ್ತ್ರಕ್ಕೆ ಅವಕಾಶವನ್ನು ನೀಡಬೇಕು. ಶಾಸ್ತ್ರವನ್ನು ಸಿದ್ಧಪಡಿಸುವ ಅವಕಾಶ ಸಿಗದಿದ್ದರೆ ಜ್ಞಾನ ಮತ್ತು ಪರಂಪರೆಯ ಲಾಭವಾದರೂ ಏನು ? ಇಷ್ಟವಾದರೆ ವಿಚಾರ ಮಾಡಿ ! ಇಲ್ಲವಾದರೆ ಚೀನಾದ ಮುಂದಿನ ರೋಗಾಣು ‘ಹಂಟಾ ಸಿದ್ಧವಾಗಿದೆ. (ಅದು ಒರಿಜಿನಲ್ ಆಗಿದೆಯೆ ಅಥವಾ ‘ಚೈನೀಸ್ ಎಂಬುದು ಪತ್ತೆಯಾಗಿಲ್ಲ.) ಆದರೂ ಜಾಗರೂಕರಾಗಿರಿ.
– ವೈದ್ಯ ಸುವಿನಯ ದಾಮಲೆ, ಕುಡಾಳ, ಸಿಂಧುದುರ್ಗ.