‘ಜ್ಞಾನಿ ರಾಜ’ರಾಗಿದ್ದ ಹಿಂದವೀ ಸ್ವರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರು !

ಶಿವಾಜಿ ರಾಜ್ಯಾಭಿಷೇಕ ದಿನ

ಜೇಷ್ಠ ಶುಕ್ಲ ಪಕ್ಷ ತ್ರಯೋದಶಿ, ಕಲಿಯುಗ ಕಲಿಯುಗ ವರ್ಷ ೫೧೨೨ ಈ ದಿನವು `ರಾಜ್ಯಾಭಿಷೇಕ ದಿನ’ವಾಗಿದೆ.

ಶಿವಾಜಿ ಮಹಾರಾಜರಂತಹ ರಾಜರಿಂದಾಗಿಯೇ ರಾಷ್ಟ್ರ ಮತ್ತು ಧರ್ಮದ ಅಂದರೆ ನಮ್ಮ ರಕ್ಷಣೆಯೂ ಆಗುವುದು.

೧. ಛತ್ರಪತಿ ಶಿವಾಜಿ ಮಹಾರಾಜರ ೭ ಕುದುರೆಗಳು

ಛತ್ರಪತಿ ಶಿವಾಜಿ ಮಹಾರಾಜರು ನಿರ್ಣಾಯಕ ಪ್ರಸಂಗಗಳಲ್ಲಿ ಮಾತ್ರ ಕುದುರೆಗಳನ್ನು ಉಪಯೋಗಿಸುತಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ೭ ಕುದುರೆಗಳು ಮತ್ತು ಅವುಗಳ ಹೆಸರು – ೧. ಮೋತಿ, ೨. ವಿಶ್ವಾಸ, ೩. ತುರಂಗಿ, ೪. ಇಂದ್ರಾಯಣಿ, ೫. ಗಾಜರ ೬. ರಣಭೀರ ಮತ್ತು ೭. ಕೃಷ್ಣಾ ಕೃಷ್ಣಾ ಇದು ಕೊನೆಯ ಕಾಲದಲ್ಲಿನ ಬಿಳಿಕುದುರೆ ! ಮಹಾರಾಜರು ರಾಜ್ಯಾಭಿಷೇಕದ ನಂತರ ಇದರ ಮೇಲೆ ಕುಳಿತರು.

೨. ಜ್ಞಾನಿ ರಾಜ

ಅ. ಛತ್ರಪತಿ ಶಿವಾಜಿ ಮಹಾರಾಜರ ಆಹಾರವು ತುಂಬಾ ಸಾಧಾರಣ ಆಗಿತ್ತು. ಅವರ ಸಂಪೂರ್ಣ ಜೀವನ ನಿರ್ವ್ಯಸನಿಯಾಗಿತ್ತು ಹೋರಾಟಗಳ ಸಮಯದಲ್ಲಿ ಅವರು ಎಲ್ಲರೊಂದಿಗೆ ಡೇರೆಗಳಲ್ಲಿಯೇ ಮಲಗುತಿದ್ದರು. ಅವರ ದಿನನಿತ್ಯದ ಉಡುಪು ಸಾಧಾರಣವಾಗಿತ್ತು; ಆದರೆ ದರ್ಬಾರದಲ್ಲಿನ ಉಡುಗೆತೊಡುಗೆಗಳು ರಾಜರಿಗೆ ಶೋಭಿಸವಂತಹವುಗಳಾಗಿದ್ದವು. `ಕಪುö್ಪ ಗಡ್ಡ, ಕಪ್ಪು ಮೀಸೆ, ಉದ್ದ ಕೂದಲು, ದೊಡ್ಡದಾದ ಹಾಗೂ ತೇಜಸ್ವೀ ಕಣ್ಣುಗಳು, ಕಾಂತಿಯುಕ್ತ ದೃಷ್ಟಿ, ಅತ್ಯಂತ ಜಾಗರೂಕ, ಮಾತನಾಡುವಾಗ ಸ್ಮಿತಹಾಸ್ಯ’, ಹೀಗೆ ಅವರ ವ್ಯಕ್ತಿತ್ವವಾಗಿತ್ತು. ಎತ್ತರದ ತುಲನೆಯಲ್ಲಿ ಅವರ ಉದ್ದ ಕೈಗಳು ದೃಷ್ಟಿಯಲ್ಲಿ ತುಂಬಿಕೊಳ್ಳುತ್ತಿದ್ದವು.

ಆ. `ಇಂದಿನ ಕಾರ್ಯ ಇಂದೇ ಆಗಬೇಕು, ನಾಳೆ ಅಲ್ಲ’, ಎಂಬುದು ಅವರ ವಿಚಾರವಾಗಿತ್ತು.

ಇ. ಅವರು ಮರಾಠಿ ಸಮಾಜದವರಿಗೆ ಸ್ವಾಭಿಮಾನದಿಂದ ಜೀವಿಸಲು ಕಲಿಸಿದರು. ೧ ಸಾವಿರದ ೩೦೦ ಕ್ಕಿಂತಲೂ ಹೆಚ್ಚು ಶಬ್ದಗಳ ಮೊದಲ ಮರಾಠಿ ಶಬ್ದಕೋಶವನ್ನು ಶಿವಾಜಿ ಮಹಾರಾಜರು ಸಿದ್ಧಪಡಿಸಿದರು.

ಈ. ಇಂದು ನಾವು ಹೊಲದಲ್ಲಿ ೩೦೦ ಅಡಿಯ `ಬೋರ್’ ಹಾಕಿದರೂ ನೀರು ಸಿಗುವುದಿಲ್ಲ; ಆದರೆ ಇಂದೂ ೪೦೦ ವರ್ಷಗಳ ನಂತರವೂ ಮಹಾರಾಷ್ಟ್ರದ ಯಾವುದೇ ಕೋಟೆಯ ಮೇಲೆ ಹೋದರೂ ಅಲ್ಲಿ ೪೦೦೦ ಅಡಿಗಳಷ್ಟು ಎತ್ತರದಲ್ಲಿ ಕಡುಬೇಸಿಗೆಯಲ್ಲಿಯೂ ನಮಗೆ ಕೋಟೆಯ ಮೇಲಿನ ಟಾಂಕಿಯಲ್ಲಿ ಸ್ವಚ್ಛ ನೀರು ಕಾಣಿಸುತ್ತದೆ, ಅದು ಕೂಡ ಯಾವುದೇ ಮೋಟರ್ ಅಥವಾ ಪೈಪ್‌ಲೈನ್ ಇಲ್ಲದಿರುವಾಗ !

ಉ. ಪ್ರತಿಯೊಂದು ಕೋಟೆಯ ಮೇಲೆ ಎರಡು ರೀತಿಯ ಟಾಂಕಿಗಳಿದ್ದವು. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕಲ್ಲುಗಳನ್ನು ಒಡೆಯಲು ಅವರು ಯಾವತ್ತೂ ಸುಡುಮದ್ದನ್ನು ಉಪಯೋಗಿಸಲಿಲ್ಲ. ಅದರ ಬದಲು ನೈಸರ್ಗಿಕ ಸಾಧನಗಳನ್ನು ಉಪಯೋಗಿಸಿ ಕಲ್ಲುಗಳನ್ನು ಒಡೆಯಲಾಗುತ್ತಿತ್ತು; ಆದ್ದರಿಂದಲೆ ಟಾಂಕಿಗಳ ಆಕಾರ ಸಂಪೂರ್ಣ ಆಯತಾಕಾರವಾಗಿವೆ. ಈ ಟಾಂಕಿಗಳ ನೀರನ್ನೆ ಸಂಪೂರ್ಣ ಕೋಟೆಗೆ ಉಪಯೋಗಿಸಲಾಗುತಿತ್ತು. ಆ ನೀರನ್ನು ಸ್ವಚ್ಛವಾಗಿಡಲು ನೈಸರ್ಗಿಕ ತಂತ್ರಗಳನ್ನು ಉಪಯೋಗಿಸಲಾಗುತಿತ್ತು. ನೀರಿನ ಟಾಂಕಿಗಳನ್ನು ಕಲ್ಲಿನಲ್ಲಿಯೆ ೫೦ ರಿಂದ ೧೫೦ ಅಡಿಗಳಷ್ಟು ಆಳವಾಗಿ ಕೊರೆಯಲಾಗಿದೆ. ಅವುಗಳಿಗೆ ಒಳಗಿನ ಭಾಗದಲ್ಲಿ `ಸ್ಟೆಪ್/ಹಂತಗಳನ್ನು ಮಾಡಲಾಗಿದೆ. ಒಂದು `ಸ್ಟೆಪ್’ ಸುಮಾರು ೨೫ ಅಡಿ ಮತ್ತು ಅದಕ್ಕಿಂತ ಹೆಚ್ಚು ದೂರವಾಗಿದೆ.

ಊ. ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯವನ್ನು ಸ್ಥಾಪಿಸುವ ವಿಚಾರವನ್ನು ಒಪುö್ಪವ ಎಲ್ಲ ಜಾತಿ-ಧರ್ಮಗಳ ಜನರನ್ನು ಒಟ್ಟು ಮಾಡಿ ಹೋರಾಡಿದರು.

ಎ. ಸ್ವರಾಜ್ಯದ ಮೇಲೆ ಆಕ್ರಮಣ ಮಾಡುವವರು, ಒಳಸಂಚು-ಕುಯುಕ್ತಿಗಳನ್ನು ಮಾಡುವವರು, ಅವರು ಶತ್ರುಗಳಿರಲಿ, ಮನೆಯವರಿರಲಿ, ಸ್ವರಾಜ್ಯದವರಿರಲಿ, `ಯಾವುದೇ ಜಾತಿ-ಧರ್ಮದವರಿರಲಿ’, ಇದರ
ವಿಚಾರ ಮಾಡದೇ ಮಹಾರಾಜರು ಅವರಿಗೆ ಕಠೋರ ಶಿಕ್ಷೆಯನ್ನು ನೀಡಿದರು.

ಐ. ಯಾರ ದರ್ಬಾರಿನಲ್ಲಿ ಯಾವತ್ತೂ ಸ್ತ್ರೀಯರು/ನರ್ತಕಿಯರು ನರ್ತನೆ ಯನ್ನು ಮಾಡಲಿಲ್ಲವೋ, ಅಂತಹ ಶಿವಾಜಿ ಮಹಾರಾಜರು ಜಗತ್ತಿನಲ್ಲಿನ ಇತಿಹಾಸದಲ್ಲಿನ ಒಬ್ಬರೇ ರಾಜರಾಗಿದ್ದಾರೆ. ಅವರು ತಮಗಾಗಿ ದೊಡ್ಡ ದೊಡ್ಡ ರಾಜಮಹಲ್‌ಗಳನ್ನು ನಿರ್ಮಿಸಲಿಲ್ಲ. ಅವರು ತಮ್ಮ ಅಧಿಕಾರವನ್ನು ತಮಗಾಗಿ ಅಥವಾ ಕುಟುಂಬದ ಲಾಭಕ್ಕಾಗಿ ಎಂದಿಗೂ ಉಪಯೋಗಿಸಲಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು `ರೈತರ ಸ್ವರಾಜ್ಯ’ ಎನ್ನುವ ಶಬ್ದವನ್ನೇ ಉಪಯೋಗಿಸುತ್ತಿದ್ದರು.

ಔ. ಮಹಾರಾಜರ ಮರಾಠರ ಕುದರೆಗಳು ಒಮ್ಮೆ ಹೊರಟರೆ, ಒಂದೇ ಸಮನೇ ೧೦೦ ರಿಂದ ೧೨೫ ಕಿಲೋ ಮೀಟರಗಳಷ್ಟು ಸಹಜವಾಗಿ ಹೋಗುತ್ತಿದ್ದವು; ಏಕೆಂದರೆ ಧರ್ಮಯೋಧರು ಸ್ವರಾಜ್ಯಕ್ಕಾಗಿ ಹೋರಾಡುತ್ತಿದ್ದರು; ಆದರೆ ಮೊಗಲರ ಕುದರೆಗಳು ೩೦ ರಿಂದ ೩೫ ಕಿಲೋ ಮೀಟರ ನಂತರ ನಿಲ್ಲುತ್ತಿದ್ದವು ಏಕೆಂದರೆ ಮೊಗಲರ ಸೈನಿಕರು ಹಣಕ್ಕಾಗಿ ಕೆಲಸವನ್ನು ಮಾಡುತ್ತಿದ್ದರು.

ಔ. ಮಹಾರಾಜರ ರಾಜದರ್ಬಾರದಲ್ಲಿ ಒಟ್ಟು ೮ ಜನ ಮಂತ್ರಿಗಳಿದ್ದರು. ಒಟ್ಟು ೩೦ ವಿಭಾಗ (೧೨ ಮಹಲ್ ಮತ್ತು ೧೮ ಕಾರ್ಖಾನೆಗಳು)ಗಳಿದ್ದವು. ಈ ೩೦ ವಿಭಾಗಗಳಲ್ಲಿ ಒಟ್ಟು ೬೦೦ ಜನ ಕಾರ್ಮಿಕರಿದ್ದರು.
ಅಂ. ೧೬೭೧ ರಲ್ಲಿ ಮಹಾರಾಷ್ಟçದ ಸಮುದ್ರದಡದಲ್ಲಿ ಉಪ್ಪಿನ ಕೃಷಿ ಮಾಡಲಾಗುತಿತ್ತು; ಆದರೆ ಆಂಗ್ಲರು, ಡಚ್ ಮತ್ತು ಪೋರ್ಚ್ಯುಗೀಜರು ಇಲ್ಲಿನ ಕೃಷಿಯನ್ನು ಮೊಟಕುಗೊಳಿಸಲು ಅಂದಿನ ಗೋವಾ ಪ್ರಾಂತದಿಂದ  ಉಪ್ಪನ್ನು ತಂದು ಅದನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾರಂಭಿಸಿದರು. ಇದು ಮಹಾರಾಜರ ಗಮನಕ್ಕೆ ಬಂದ ನಂತರ ಅವರು ಆಮದು ಮಾಡುವ ಉಪ್ಪಿನ ಮೇಲೆ ತೆರಿಗೆಯನ್ನು ಹಾಕಿದರು. ಇದರಿಂದ ಆಮದು ಮಾಡಿದ ಉಪ್ಪು ದುಬಾರಿಯಾಯಿತು ಮತ್ತು ನಮ್ಮ ರೈತರ ಉಪ್ಪಿನ ಬೇಡಿಕೆ ಹೆಚ್ಚಾಯಿತು; ಆದ್ದರಿಂದ ಶಿವಾಜಿ ಮಹಾರಾಜರನ್ನು `ಜ್ಞಾನಿ ರಾಜಾ’ ಅಥವಾ `ಜಾಣ ರಾಜ’ ಎಂದು ಕರೆಯುತ್ತಾರೆ.

ಕ. ಮಹಾರಾಜರಲ್ಲಿಗೆ ಬರುವ ಪ್ರತಿಯೊಂದು ಖಟ್ಲೆಯ ನಿರ್ಣಯ ಎಲ್ಲರೆದುರಿಗೆ ನಡೆಯುತಿತ್ತು.

ಖ. ಮಹಾರಾಜರ ಮರಣದ ೩೦೨ ವರ್ಷಗಳ ನಂತರವೂ ಅವರ ಸನ್ಮಾನವಾಗುತ್ತದೆ.

(ಆಧಾರ : `ವಾಟ್ಸ್ಅಪ್’)

ರಾಯಗಡದ ಕೋಟೆಯ ವೈಶಿಷ್ಟ್ಯಗಳು

೧. ಈ ಕೋಟೆಯ ಮೇಲೆ ೬ ಜೂನ್ ೧೬೭೪ ರಂದು ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕವಾಯಿತು.

೨. ಕೋಟೆಯ ಒಟ್ಟು ಕ್ಷೇತ್ರಫಲ ೧ ಸಾವಿರದ ೨೦೦ ಎಕರೆ ಇತ್ತು

೩. ಮಹಾರಾಜರ ಕಾಲದಲ್ಲಿ ರಾಯಗಡ ಕಿಲ್ಲೆಯ ಮೇಲಿನ ಜನಸಂಖ್ಯೆ ಕಡಿಮೆ ಎಂದರೂ ೧೦ ಸಾವಿರದಷ್ಟಿತ್ತು.

೪. ೬೫ ಕೋಟೆಗಳ ವರ್ತುಲದಲ್ಲಿ ರಾಯಗಡದ ಕೋಟೆಯಿದೆ.

೫. ರಾಯಗಡ ಕೋಟ್ಲೆಗೆ ೩ ದಿಕ್ಕುಗಳಲ್ಲಿ ರಕ್ಷಣೆ ಗೋಡೆ ಇರಲಿಲ್ಲ, ಕೇವಲ ಪಶ್ಚಿಮ ದಿಕ್ಕಿನಲ್ಲಿ ಮಾತ್ರ ರಕ್ಷಣೆ ಗೋಡೆ ಇತ್ತು. ೨ ಸಾವಿರ ಅಡಿಗಳ ಮೇಲಿನಿಂದ ನೋಡಿದರೆ, ೪ ಸಾವಿರ ಅಡಿಗಳ ಮೇಲೆ ಇನ್ನೊಂದು ರಕ್ಷಣೆ ಗೋಡೆ ಕಾಣಿಸುತ್ತದೆ. ಕೋಟೆಯ ದಾರಿ ಅತ್ಯಂತ ಕಿರಿದಾಗಿದೆ. ಕೋಟೆಯ ಮೇಲೆ ೩೦೦ ಕಟ್ಟಡಗಳಿದ್ದವು. `೧೦ ಸಾವಿರ ಜನರಿಗೆ ವರ್ಷವಿಡಿ ನೀರು ಸಿಗಬೇಕೆಂದು ೯ ಟಾಂಕಿಗಳಿದ್ದವು.

೬. ರಾಯಗಡ ಕೋಟೆಯ ಮೇಲೆ ೪೨ ಅಂಗಡಿಗಳಿದ್ದವು. ಅವುಗಳಲ್ಲಿ ರಾಯಗಡದ ಕೋಟೆಯ ವೈಶಿಷ್ಟ್ಯಗಳು ೨೧ ಅಂಗಡಿಗಳು ದೇಶಿ ವಸ್ತುಗಳ ಹಾಗೂ ೨೧ ಅಂಗಡಿಗಳು ವಿದೇಶಿ ವಸ್ತುಗಳ ಮಾರಾಟಕ್ಕಾಗಿ ಇದ್ದವು.

೭. `ರಾಯಗಡದ ಮೇಲೆ ಯಾವುದಾದರು ಕೆಲಸಕ್ಕೆಂದು ಬಂದಿರುವ ಪ್ರತಿಯೊಬ್ಬ ವ್ಯಕ್ತಿ ಭೋಜನ ಮಾಡದೆ ಕೋಟೆಯಿಂದ ಕೆಳಗಿಳಿಯಬಾರದು ಎಂಬ ನಿಯಮವಿತ್ತು.

ರಾಜಗಡದ ವೈಶಿಷ್ಟ್ಯಗಳು

ತಮ್ಮ ೧೭ ನೇಯ ವಯಸ್ಸಿನಲ್ಲಿ ಶಿವಾಜಿ ಮಹಾರಾಜರು ತಮ್ಮ ಸಂಕಲ್ಪನೆಯಂತೆ ‘ರಾಜಗಡ ಕೋಟೆಯನ್ನು ನಿರ್ಮಿಸಿದರು. ಓರ್ವ ಆಂಗ್ಲ ವ್ಯಕ್ತಿ ಹೀಗೆ ಬರೆಯುತ್ತಾನೆ, ‘ಶಿವಾಜಿ ಮಹಾರಾಜರು ‘ದ ಗ್ರೇಟ್ ಗ್ಯಾರಿಸನ್ ಎಂಬ ಇಂಜಿನೀಯರನ ಗುರುಗಳಾಗಿದ್ದರು. ರಾಜಗಡದ ನಿರ್ಮಾಣಕ್ಕೆ ೨೨ ಸಾವಿರ ಕೋಟಿ ರೂಪಾಯಿಗಳು ಖರ್ಚಾಗಿದ್ದವು. ಈ ಕೋಟೆಯಲ್ಲಿ ಮಹಾರಾಜರು ೨೭ ವರ್ಷ ವಾಸ ಮಾಡಿದರು. ೧೯೮೨ ರಲ್ಲಿ ಪೋರ್ಚ್ಯುಗಲ್‌ನ ರಾಜಧಾನಿ ‘ಲಿಸ್ಬನ್ನಲ್ಲಿ ಕೋಟೆಗಳ ಜಾಗತಿಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಆ ಪ್ರದರ್ಶನದ ಸಮಿತಿಯು ಜಗತ್ತಿನಲ್ಲಿನ ಎಲ್ಲ ಕೋಟೆಗಳನ್ನು ನೋಡಿದ ಮೇಲೆ ರಾಜಗಡ ಕೋಟೆಗೆ ಪ್ರಥಮ ಬಹುಮಾನವನ್ನು ನೀಡಿತ್ತು.