ಪುಲ್ವಾಮಾದಲ್ಲಿ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಹಮ್ಮದ್‌ನ ಉಗ್ರರ ಹತ್ಯೆ

ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು, ಭಯೋತ್ಪಾದಕರನ್ನು ನಿರ್ಮಿಸುವ ಪಾಕಿಸ್ತಾನವನ್ನೇ ವಿಶ್ವದ ಭೂಪಟದಿಂದ ಅಳಿಸಿ ಹಾಕಬೇಕು !

ನವ ದೆಹಲಿ : ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಂಗನ್ ವಾನಪೊರಾ ಪ್ರದೇಶದಲ್ಲಿ ಜೂನ್ ೨ ರಂದು ಭಾರತೀಯ ಸೈನಿಕರ ಹಾಗೂ ‘ಜೈಶ-ಎ-ಮಹಮ್ಮದ’ನ ಭಯೋತ್ಪಾದಕರ ನಡುವೆ ತಡರಾತ್ರಿವರೆಗೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಇದರಲ್ಲಿ ೩ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯನ್ನು ಕೇಂದ್ರ ರಾಜ್ಯ ರಿಸರ್ವ್ ಪೊಲೀಸ್ ಪಡೆ ಮತ್ತು ೫೫ ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ನಡೆಸಿದೆ. ಭಾರತೀಯ ಸೈನಿಕರಿಗೆ ಕಂಗನ್ ವನ್‌ಪೊರಾ ಪ್ರದೇಶದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸುವಾಗ ಈ ಚಕಮಕಿ ನಡೆದಿದೆ. ಕಳೆದ ೨೪ ಗಂಟೆಗಳಲ್ಲಿ ಸೇನೆಯು ಜೈಶ್-ಎ-ಮೊಹಮ್ಮದ್‌ನ ೫ ಉಗ್ರರನ್ನು ಕೊಂದಿದೆ.