ದೆಹಲಿಯಲ್ಲಿ ಬಿಜೆಪಿ ನಾಯಕನ ಹಾಡುಹಗಲೇ ಗುಂಡಿಕ್ಕಿ ಹತ್ಯೆ

  • ದೇಶದಾದ್ಯಂತ ಹಿಂದೂ ನಾಯಕರು, ಸಾಧು-ಸಂತರ ಮೇಲಿಂದ ಮೇಲೆ ಹತ್ಯೆಯಾಗುತ್ತಿರುವಾಗ, ಅದನ್ನು ತಡೆಯಲು ಸರ್ಕಾರಿ ಮಟ್ಟದಲ್ಲಿ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ, ಇದು ಖೇದಕರವಾಗಿದೆ ! ಅದಕ್ಕಾಗಿ ಹಿಂದೂಗಳು ಸಂಘಟಿತರಾಗಿ ಕಾನೂನು ಮಾರ್ಗವಾಗಿ ಧ್ವನಿ ಎತ್ತಬೇಕು !

  • ಬಿಗಿ ಭದ್ರತೆಯಲ್ಲಿರುವ ರಾಜಧಾನಿಯಂತಹ ಸ್ಥಳದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಪೊಲೀಸರಿಗೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ನಾಚಿಕೆಗೇಡಿನ ಸಂಗತಿ ! ಇದರಿಂದ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ಗಮನಕ್ಕೆ ಬರುತ್ತದೆ !

ನವ ದೆಹಲಿ : ಪೂರ್ವ ದೆಹಲಿಯ ಪಶ್ಚಿಮ ವಿನೋದನಗರದಲ್ಲಿ ಬಿಜೆಪಿ ನಾಯಕ ರಾಹುಲ್ ಸಿಂಗ್ ಊರ್ಫ್ ಭೂರು ಸಿಂಗ್‌ನನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದರು. ಜೂನ್ ೩ ರ ಬೆಳಿಗ್ಗೆ ರಾಹುಲ್ ಸಿಂಗ್ ಅವರು ವಾಯುವಿಹಾರಕ್ಕಾಗಿ ಹೊರಟಿದ್ದಾಗ ಮಯೂರ್ ಪಬ್ಲಿಕ್ ಸ್ಕೂಲ್ ಬಳಿ ಅಜ್ಞಾತರು ಅವರ ಮೇಲೆ ಆರು ಬಾರಿ ಗುಂಡುಗಳನ್ನು ಹಾರಿಸಿದರು. ಎಂಟು ತಿಂಗಳ ಹಿಂದೆಯೇ ರಾಹುಲ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆ ಸಮಯದಲ್ಲಿ ಅವರು ತಪ್ಪಿಸಿಕೊಂಡಿದ್ದರು. ಪರಸ್ಪರ ವಿವಾದದಿಂದಾಗಿ ರಾಹುಲ್ ಸಿಂಗ್ ಇವರ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ರಾಹುಲ್ ಅವರ ಶವವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.