ಅನಾನಸ್ ಮೂಲಕ ಪಟಾಕಿಯನ್ನು ತಿನ್ನಿಸಿದ ಪರಿಣಾಮ ಹೊಟ್ಟೆಯಲ್ಲಿ ಸ್ಫೋಟಗೊಂಡು ಗರ್ಭಿಣಿ ಆನೆಯನ್ನು ಒದ್ದಾಡುತ್ತಾ ಸಾವು

ಮನುಷ್ಯನ ಕ್ರೂರತೆಯು ಮಿತಿಮೀರಿವುದನ್ನು ತೋರಿಸುವ ಘಟನೆ !

  • ಮೂಕ ಪ್ರಾಣಿಗಳ ಬಗ್ಗೆ ಇಂತಹ ಕ್ರೂರ ಕೀಟಲೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !

  • ಪ್ರಾಣಿಪ್ರಿಯರು ಎಂದು ಕರೆಯಲ್ಪಡುವವರು ಈಗ ಈ ಘಟನೆಯ ಬಗ್ಗೆ ಏಕೆ ಮೌನವಾಗಿದ್ದಾರೆ ?

ತಿರುವನಂತಪುರಂ (ಕೇರಳ) – ಕೇರಳದ ಮಲಪ್ಪುರಂನಲ್ಲಿ ಕೆಲವು ನಿರ್ದಯ ಜನರು ಗರ್ಭಿಣಿ ಆನೆಗೆ ಪಟಾಕಿ ತುಂಬಿದ ಅನಾನಸ್ ಅನ್ನು ತಿನ್ನಿಸಿದ್ದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮರಿಆನೆಯೊಂದಿಗೆ ಆ ಆನೆಯೂ ಸಾವನ್ನಪ್ಪಿದ ಘಟನೆ ಇತ್ತಿಚೆಗೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಹಂಚಿಕೊಂಡಾಗ ಜನರು ಆಕ್ರೋಶಗೊಂಡರು. ಹಸಿದ ಆನೆ ಆಹಾರವನ್ನು ಅರಸುತ್ತಾ ಕಾಡಿನಿಂದ ಹೊರಬಂದಿತ್ತು. ಅದು ಆಹಾರವನ್ನು ಅರಸುತ್ತಾ ಹಳ್ಳಿಯಲ್ಲಿ ಸುತ್ತಾಡುತ್ತಿತ್ತು. ಕೆಲವು ಸ್ಥಳೀಯರು ಅದಕ್ಕೆ ಅನಾನಾಸ ಜೊತೆಗೆ ಪಟಾಕಿಗಳನ್ನು ತಿನ್ನಿಸಿದರು. ಹಸಿದ ಆನೆ ಅನಾನಸ್ ತಿಂದು ಸ್ವಲ್ಪ ಸಮಯದಲ್ಲಿ ಅವಳ ಹೊಟ್ಟೆಯಲ್ಲಿ ಪಟಾಕಿ ಸ್ಪೋಟಗೊಂಡಿತು. ಈ ಘಟನೆಯಲ್ಲಿ ಹೆಣ್ಣಾನೆ ಗಂಭೀರವಾಗಿ ಗಾಯಗೊಂಡಿತು. ಈ ಪ್ರಕರಣ ತಿಳಿದಾಕ್ಷಣ ರಕ್ಷಣೆಯ ತಂಡವು ಘಟನಾಸ್ಥಳಕ್ಕೆ ತಲುಪಿತು; ಆದರೆ ಅಷ್ಟರಲ್ಲಿ ಆನೆ ಸಾವನ್ನಪ್ಪಿತ್ತು.