-
ಅಪರಾಧ ದಾಖಲಾದ ಕೂಡಲೇ ನಾಯಕ ಪರಾರಿ
-
ಪೊಲೀಸ್ ಠಾಣೆಯಲ್ಲೇ ಬೆದರಿಕೆ
- ಮಾರ್ಕ್ಸವಾದಿ ಕಲ್ಯನಿಸ್ಟ್ ಪಕ್ಷದ ಇಂತಹ ಗೂಂಡಾ ಪ್ರವೃತ್ತಿಯ ನಾಯಕರ ಬಗ್ಗೆ ದೇಶದ ಒಬ್ಬಾನೊಬ್ಬ ಪ್ರಗತಿ(ಆಧೋಗತಿ)ಪರರು, ಜಾತ್ಯತೀತವಾದಿಗಳು, ಸಾಮ್ಯವಾದಿಗಳು, ಪ್ರಶಸ್ತಿ ಹಿಂತಿರುಗಿಸುವ ಗುಂಪಿನವರು ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟಿಕೊಳ್ಳಿ !
- ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯನಿಸ್ಟ್ ಪಕ್ಷದವರೇ ಅಧಿಕಾರದಲ್ಲಿರುವುದರಿಂದ ಅವರ ಪದಾಧಿಕಾರಿಗಳು ಪೊಲೀಸರಿಗೆ ಬೆದರಿಸುತ್ತದೆ ಅದನ್ನು ಆಶ್ಚರ್ಯವೆನ್ನಲಾಗದು; ಏಕೆಂದರೆ ಅವರ ಇತಿಹಾಸವೇ ಗೂಂಡಾಗಿರಿ ಮತ್ತು ಹಿಂಸಾಚಾರದಿಂದ ಕೂಡಿದೆ. ಮಾರ್ಕ್ಸವಾದಿ ಕಮ್ಯನಿಸ್ಟ್ ಪಕ್ಷದ ಆಡಳಿತ ಇರುವುದರಿಂದ ಪೊಲೀಸರು ಈ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಸಾಧ್ಯ, ಇದೂ ಕೂಡ ಅಷ್ಟೇ ಸತ್ಯವಾಗಿದೆ !
ಕುಮಿಲಿ (ಇಡುಕ್ಕಿ, ಕೇರಳ) – ರಾಜ್ಯದ ಆಢಳಿತಾರೂಢ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ (‘ಮಾಕಪ’ನ) ನಾಯಕನು ವಂದಿಪೇರಿಯಾರ್ ಪೊಲೀಸ್ ಠಾಣೆಯಲ್ಲಿ ಪೊಲೀಸರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ಮಾಕಪ ನ ಇಡುಕ್ಕಿ ಜಿಲ್ಲಾ ಸಚಿವಾಲಯದ ಸದಸ್ಯ ಆರ್. ಥಿಲಕನ್, ಪಿರಮೆದು ಪ್ರದೇಶ ಸಚಿವ ಜಿ. ವಿಜಯಾನಂದ ಮತ್ತು ರೆನಿಲ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ. ತಮ್ಮ ಬಂಧನದಿಂದ ತಪ್ಪಿಸಿಕೊಳ್ಳಲು ಈ ನಾಯಕರು ಪರಾರಿಯಾಗಿದ್ದಾರೆ. ಮೂವರ ಮೇಲೆ ಆರಂಭದಲ್ಲಿ ಸಣ್ಣ ಅಪರಾಧ ದಾಖಲಿಸಲಾಗಿತ್ತು; ಆದರೆ ಜನರ ಒತ್ತಾಯದ ಮೇರೆಗೆ ಜಾಮೀನು ರಹಿತ ಅಪರಾಧವನ್ನು ನೋಂದಾಯಿಸಲಾಗಿದೆ. ಸದ್ಯ ಈ ಮೂವರು ಕೇರಳ ಉಚ್ಚನ್ಯಾಯಾಲಯದಿಂದ ಬಂಧನ ಪೂರ್ವ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.
೧. ಮೇ ೨೭ ರಂದು ಸಂಚಾರ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿ.ವೈ.ಎಫ್.ಐ) ಈ ಸಂಘಟನೆಯ ಸದಸ್ಯರ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ವಾಹನವನ್ನು ನೀಡುವಂತೆ ಮಾರ್ಕ್ಸವಾದಿ ಕಮ್ಯನಿಸ್ಟ್ ಪಕ್ಷದ ಮುಖಂಡರು ಪೊಲೀಸ್ ಠಾಣೆಗೆ ಬಂದರು. ಅವರು ಪೊಲೀಸ್ ಅಧಿಕಾರಿಗಳ ಮೇಲೆ ಕೂಗಾಡಿದರು ಹಾಗೂ ‘ನಾವು ನಿಮ್ಮ ಮನೆಗೆ ನುಗ್ಗಿ ನಿಮ್ಮ ಮೇಲೆ ದಾಳಿ ಮಾಡುತ್ತೇವೆ’, ಎಂದು ನೇರವಾಗಿ ಬೆದರಿಕೆ ಹಾಕಿದರು. ತದ ನಂತರ ಪೊಲೀಸ್ ಅಧಿಕಾರಿ ಈ ಬಗ್ಗೆ ತನ್ನ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು; ಆದರೆ ಮಾರ್ಕ್ಸವಾದಿ ಕಮ್ಯನಿಸ್ಟ್ ಪಕ್ಷದ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
೨. ಮಾರ್ಕ್ಸವಾದಿ ಕಮ್ಯನಿಸ್ಟ್ ಪಕ್ಷದ ಮುಖಂಡರಿಂದ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಒಂದು ‘ವಿಡಿಯೋ’ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಅದೇರೀತಿ ವಾರ್ತಾವಾಹಿನಿಯಲ್ಲೂ ಈ ವಾರ್ತೆಯನ್ನು ತೋರಿಸಲಾಗಿದೆ. ತರುವಾಯ ಮೇ ೨೯ ರಂದು ಮಾರ್ಕ್ಸವಾದಿ ಕಮ್ಯನಿಸ್ಟ್ ಪಕ್ಷದ ಮುಖಂಡನ ವಿರುದ್ಧ ಜಾಮೀನು ರಹಿತ ಅಪರಾಧ ದಾಖಲಿಸಲಾಯಿತು.
೩. ಈಗ ಈ ಮುಖಂಡರು ಬಂಧನಪೂರ್ವ ಜಾಮೀನು ಸಿಗಬೇಕೆಂದು ಪೊಲೀಸರು ಅವರನ್ನು ಬಂಧಿಸಲು ತಡ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. (ಪೊಲೀಸರು ತಮ್ಮ ಸಹೋದ್ಯೋಗಿಗಳಿಗೆ ಬೆದರಿಕೆ ಹಾಕುತ್ತಿರುವ ಆರೋಪಿಗಳನ್ನು ಬಂಧಿಸುವುದನ್ನು ತಪ್ಪಿಸುತ್ತಿದ್ದರೆ, ಸಾಮಾನ್ಯ ಪೀಡಿತರ ಬಗ್ಗೆ ಅವರು ಹೇಗೆ ವರ್ತಿಸುವರು ?, ಇದರ ಬಗ್ಗೆ ಯೋಚಿಸದಿರುವುದೇ ಉತ್ತಮ ! ಗೂಂಡಾಗಳಿಗೆ ಬಂಧಿಸಲು ತಡ ಮಾಡುವ ಸಂಬಂಧಪಟ್ಟ ಪೊಲೀಸರ ಮೇಲೆಯೂ ಕ್ರಮ ಕೈಗೊಳ್ಳುವಂತೆ ಜನರು ಪ್ರಯತ್ನ ಮಾಡಬೇಕಾಗಿದೆ – ಸಂಪಾದಕರು)
೪. ಮಾರ್ಕ್ಸವಾದಿ ಕಮ್ಯನಿಸ್ಟ್ ಪಕ್ಷದ ಜಿಲ್ಲಾ ಸಚಿವ ಕೆ. ಜಯಚಂದ್ರನ್ ಇವರು, ‘ಈ ಪ್ರಕರಣದಲ್ಲಿ ಭಾಗಿಯಾಗಿರುವ ಪದಾಧಿಕಾರಿಗಳನ್ನು ಸಾರ್ವಜನಿಕವಾಗಿ ಎಚ್ಚರಿಕೆ ನೀಡಲು ನಿರ್ಧರಿಸಿದೆ’ ಎಂದು ಹೇಳಿದ್ದಾರೆ.’ (ಪೊಲೀಸರಿಗೆ ಕೊಲ್ಲುವ ಬೆದರಿಕೆಯನ್ನು ನೀಡುವವರನ್ನು ಕೇವಲ ಎಚ್ಚರಿಕೆಯನ್ನು ನೀಡಿ ಬಿಟ್ಟುಬಿಡುವ ಮಾರ್ಕ್ಸವಾದಿ ಕಮ್ಯನಿಸ್ಟ್ ಪಕ್ಷದವರು ಅಮಾಯಕ ಹಿಂದೂಗಳಿಗೆ ಮಾತ್ರ ‘ಭಯೋತ್ಪಾದಕ’ ಎಂದು ನಿರ್ಧರಿಸಿ ಅವರಿಗೆ ಗಲ್ಲಿಗೇರಿಸುವ ಬೇಡಿಕೆಯನ್ನು ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)