ಗುಜರಾತ್‌ನಲ್ಲಿ ಆಯುರ್ವೇದ ಚಿಕಿತ್ಸೆಯ ನಂತರ ಒಂದೂವರೆ ಸಾವಿರಕ್ಕೂ ಹೆಚ್ಚು ರೋಗಿಗಳು ಕೊರೋನಾದಿಂದ ಮುಕ್ತ !

ಗುಜರಾತ್‌ನಲ್ಲಿ ಹೀಗೆ ಮಾಡಲು ಸಾಧ್ಯವಿದ್ದರೆ, ದೇಶದ ಎಲ್ಲಾ ರಾಜ್ಯಗಳಲ್ಲಿ ಏಕೆ ಮಾಡುತ್ತಿಲ್ಲ ?

ಸೂರತ್ (ಗುಜರಾತ್) – ಕೊರೋನಾದ ಮೇಲಿನ ಲಸಿಕೆ ಜಗತ್ತಿನಲ್ಲಿ ಎಲ್ಲಿಯೂ ಲಭ್ಯವಿಲ್ಲದ ಕಾರಣ ರೋಗಿಗಳ ಮೇಲೆ ಪರಿಣಾಮಕಾರಿ ಚಿಕಿತ್ಸೆಗೆ ಇನ್ನೂ ಮಿತಿಗಳಿವೆ. ಆದ್ದರಿಂದ ಭಾರತದ ಗುಜರಾತ ಸರಕಾರವು ಕೊರೋನಾ ರೋಗಿಗಳಿಗೆ ಆಯುರ್ವೇದದ ಚಿಕಿತ್ಸೆ ನೀಡುತ್ತಿದೆ. ಗುಜರಾತ ಸರಕಾರ ಮೇ ೧೫ ರಿಂದ ಇಂತಹ ರೋಗಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ಅನುಮತಿ ನೀಡಿದ ಮೇಲೆ ಉತ್ತಮ ಪರಿಣಾಮ ಕಂಡುಬರುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಇಲ್ಲಿಯವರೆಗೆ ಕೊರೋನಾದ ಕೆಲವು ಲಕ್ಷಣಗಳು ಕಾಣಿಸುತ್ತಿದ್ದವೋ, ಅಂತಹವರ ಮೇಲೆ ಆಯುರ್ವೇದ ಚಿಕಿತ್ಸೆಯನ್ನು ನೀಡಿದ ನಂತರ ೫೮೬ ರೋಗಿಗಳು ಚೇತರಿಸಿಕೊಂಡಿದ್ದರೆ, ೧೦೭೬ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರನ್ನೂ ಮನೆಗೆ ಕಳುಹಿಸಲಾಗುವುದು.

೧. ‘ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ’ಯ ಮಾರ್ಗಸೂಚಿಗಳ ಪ್ರಕಾರ ಕೊರೋನಾ ಪೀಡಿತರ ಮೇಲೆ ಚಿಕಿತ್ಸೆ ನೀಡಬಹುದು; ಆದರೆ ಗುಜರಾತ್ ಆರೋಗ್ಯ ಸಚಿವೆ ಜಯಂತಿ ರವಿಯವರು ಬೇಡಿಕೆ ಮಾಡಿದ್ದ ಆಸ್ಪತ್ರೆಗಳಿಗೆ ಆಯುರ್ವೇದ ಮತ್ತು ಹೋಮಿಯೋಪತಿ ಮೂಲಕ ಚಿಕಿತ್ಸೆ ಪಡೆಯಲು ಅವಕಾಶ ನೀಡಿದ್ದರು. ಅದಕ್ಕಾಗಿ ಆಸ್ಪತ್ರೆಗಳಲ್ಲಿಯೂ ರೋಗಿಗಳ ಲಿಖಿತ ಅನುಮತಿ ಪಡೆಯಲು ತಿಳಿಸಲಾಯಿತು. ಅದರಂತೆ ರೋಗಿಗಳಿಂದ ಆ ರೀತಿ ಬರೆಸಿಕೊಂಡ ನಂತರ ಅವರ ಮೇಲೆ ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸೆ ನೀಡಲಾಗುತ್ತಿದೆ.

೨. ಗುಜರಾತ್‌ನ ‘ಆಯುಷ್’ ವಿಭಾಗದ ನಿರ್ದೇಶಕಿ ವೈದ್ಯೆ ಭಾವನಾ ಪಟೇಲ್ ಮಾತನಾಡುತ್ತಾ, ‘ಪ್ರಸ್ತುತ ಗುಜರಾತ್ ರಾಜ್ಯದ ೮ ಆಸ್ಪತ್ರೆಗಳಲ್ಲಿ ಕೊರೋನಾದ ಮೇಲೆ ಆಯುರ್ವೇದ ಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಎಲ್ಲಿ ೧೦೦ ಕ್ಕೂ ಹೆಚ್ಚು ರೋಗಿಗಳು ಆಗಿದ್ದಾರೆ ಅಲ್ಲಿ, ಆಯುರ್ವೇದ ಚಿಕಿತ್ಸೆಯನ್ನು ಪ್ರಾರಂಭಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ರೋಗಿಗಳ ಇಚ್ಛೆಯಂತೆ ಅವರ ಮೇಲೆ ‘ಅಲೋಪತಿ’, ಆಯುರ್ವೇದ ಮತ್ತು ‘ಹೋಮಿಯೋಪತಿ’ ಚಿಕಿತ್ಸೆ ನೀಡುತ್ತೇವೆ.’ ಎಂದು ಹೇಳಿದರು.

೩. ಕೊರೋನದ ಮೇಲೆ ಶೇ. ೧೦೦ ರಷ್ಟು ಆಯುರ್ವೇದ ಚಿಕಿತ್ಸೆಯನ್ನು ಮಾಡಬಹುದು ಎಂದು ವೈದ್ಯೆ ಪಿನಾಲ್ ರಾಣಾ ಹೇಳಿದರು. ಕೊರೋನಾದಿಂದ ಗಂಭೀರ ಸ್ಥಿತಿ ಇರುವ ರೋಗಿಗಳ ಮೇಲೆಯೂ ಚಿಕಿತ್ಸೆ ನೀಡಲು ಸಾಧ್ಯವಿದೆ. ‘ಅಲೋಪತಿ’ಯಲ್ಲಿ ರೋಗಿಗೆ ಒಂದೇ ರೀತಿಯ ಔಷಧಿಯನ್ನು ನೀಡಲಾಗುತ್ತದೆ; ಆದರೆ ಆಯುರ್ವೇದದಲ್ಲಿ ರೋಗಿಗೆ ಅವರ ಪ್ರಕೃತಿಯ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ.’

೪. ಆಯುರ್ವೇದ ವೈದ್ಯರ ಮಾಹಿತಿ ನೀಡಿದ ಪ್ರಕಾರ, ‘ಪ್ರಸ್ತುತ ಸಂಶಮನಿ ವಟಿ, ಸೀತೋಪಾಲದಿ ಚೂರ್ಣ, ಲವಂಗದಿ ವಟಿ, ಸುದರ್ಶನ್ ಘನವಟಿ, ಷಡ್‌ಬಿಂದು ತೈಲ ಮತ್ತು ತುಳಸಿ ಚೂರ್ಣ ಇತ್ಯಾದಿ ಮಿಶ್ರಣ.ವನ್ನು ರೋಗಿಗೆ ಔಷಧಿಯಾಗಿ ನೀಡಲಾಗುತ್ತದೆ, ಅದೇರೀತಿ ಬಿಸಿನೀರು ಸಹ ರೋಗಿಯ ಮೇಲೆ ಶೇ. ೫೦ ರಷ್ಟು ಪರಿಣಾಮ ಬೀರುತ್ತದೆ.’