ಕೇಂದ್ರ ಸರ್ಕಾರದಿಂದ ‘WeTransfer’ ಮೇಲೆ ನಿಷೇಧ

ನವ ದೆಹಲಿ: ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ‘WeTransfer’ ಈ ‘ಫೈಲ್-ಶೇರಿಂಗ್’ ಜಾಲತಾಣವನ್ನು ನಿಷೇಧಿಸಿದೆ. ಇದರ ಹಿಂದಿನ ಕಾರಣವನ್ನು ಸ್ಪಷ್ಟಪಡಿಸದಿದ್ದರೂ, ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಿಷೇಧವನ್ನು ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರು ಈ ಜಾಲತಾಣವನ್ನು ಬಳಸುತ್ತಾರೆ.