ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವ ೬ ಕಳ್ಳಸಾಗಾಣಿಕೆದಾರರ ಬಂಧನ

ಶ್ರೀನಗರ (ಜಮ್ಮು – ಕಾಶ್ಮೀರ) – ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಹಾಯ ಮಾಡುವವ ಆರು ಜನರನ್ನು ಬಂಧಿಸಿವೆ. ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಹೆರಾಯಿನ್ ಸಹ ವಶಪಡಿಸಿಕೊಳ್ಳಲಾಗಿದೆ. ಮುದಾಸ್ಸಿರ್ ಫಯಾಜ್, ಶಬೀರ್, ಸಾಗೀರ್ ಅಹ್ಮದ್ ಪೊಸವಾಲ್, ಇಸಾಕ್ ಭಟ್ಟ ಮತ್ತು ಅರ್ಷಿದ್ ಬಂಧಿತರು. ಇವರೆಲ್ಲರೂ ಪಾಕಿಸ್ತಾನದಲ್ಲಿರುವ ತಮ್ಮ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದರು. ಇವರು ಕಾಶ್ಮೀರದ ಕಣಿವೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದರು, ಜೊತೆಗೆ ‘ಜೈಶ್-ಎ-ಮೊಹಮ್ಮದ್’ಗೆ ಹಣಕಾಸನ್ನು ಒದಗಿಸುತ್ತಿದ್ದರ‍್ತು. ಅವರ ಬಂಧನದಿಂದಾಗಿ ಭಯೋತ್ಪಾದಕರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ನಡುವಿನ ಸಂಬಂಧವನ್ನು ಬಹಿರಂಗವಾಗಿದೆ.