ಕರೋನದ ಬಿಕ್ಕಟ್ಟು ಇರುವಾಗಲೇ ಈಗ ದೇಶದಲ್ಲಿ ಮಿಡತೆಯ ದಾಳಿ !

ದೇಶದ ಮೇಲೆ ಬರುವಂತಹ ಈ ರೀತಿಯ ನೈಸರ್ಗಿಕ ವಿಕೋಪಗಳಿಂದ ಪಾರಾಗಲು ಪ್ರತಿಯೊಬ್ಬರೂ ಸಾಧನೆಯನ್ನು ಮಾಡುವುದುಅಗತ್ಯವಿದೆ, ಗಮನದಲ್ಲಿಡಿ !

ನವದೆಹಲಿ: ಭಾರತದಲ್ಲಿ ಕರೋನಾ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವಾಗಲೇ, ಮತ್ತೊಂದು ದೊಡ್ಡ ಬಿಕ್ಕಟ್ಟು ಎದುರಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ, ಬೆಳೆದ ಬೆಳೆಯ ಮೇಲೆ ಮಿಡತೆಗಳು ದಾಳಿ ಮಾಡಿವೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಬೆಳೆಗಳ ಮೇಲೆ ದಾಳಿ ಮಾಡಿದ ನಂತರ ಈ ಮಿಡತೆಗಳು ಈಗ ಉತ್ತರ ಪ್ರದೇಶದತ್ತ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಉತ್ತರ ಪ್ರದೇಶವನ್ನು ಎಚ್ಚರ ಇರುವಂತೆ ಹೇಳಲಾಗಿದೆ. ಗಾಳಿಯ ದಿಕ್ಕು ಬದಲಾದ ಕೂಡಲೇ ಈ ಮಿಡತೆಗಳು ಪಾಕಿಸ್ತಾನ ಮತ್ತು ಇತರ ಭಾಗಗಳಿಂದ ಭಾರತವನ್ನು ಪ್ರವೇಶಿಸುತ್ತವೆ. ಮಳೆಗಾಲದಲ್ಲಿ ಈ ಕೀಟಗಳು ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತವೆ.

೧. ಈ ಮಿಡತೆಗಳು ಏಪ್ರಿಲ್ ಎರಡನೇ ವಾರದಲ್ಲಿ ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ಬಂದಿತ್ತು. ಮಿಡತೆಯ ಹಾವಳಿಯಿಂದಾಗಿ ರಾಜಸ್ಥಾನದ ೧೮ ಜಿಲ್ಲೆಗಳಲ್ಲಿ ಮತ್ತು ಮಧ್ಯಪ್ರದೇಶದ ಸುಮಾರು ೧೨ ಜಿಲ್ಲೆಗಳಲ್ಲಿ ಬೆಳೆಗಳನ್ನು ಹಾನಿಗೊಳಿಸಿವೆ. ಈಗ ಈ ಮಿಡತೆಗಳು ಉತ್ತರ ಪ್ರದೇಶದ ಆಗ್ರಾ, ಅಲಿಗಡ, ಮಥುರಾ, ಬುಲಂದ್‌ಶಹರ್, ಹತ್ರಾಸ್, ಎಟಾ, ಫಿರೋಜಾಬಾದ್, ಮೈನ್‌ಪುರಿ, ಇಟಾವಾ, ಫರುಖಾಬಾದ್, ಕಾನ್ಪುರ್, ಝಾನ್ಸಿ, ಹಮೀರ್‌ಪುರ ಮತ್ತು ಲಲಿತಪುರ ಜಿಲ್ಲೆಗಳ ಮೇಲೆ ದಾಳಿ ನಡೆಸಿವೆ.

೨. ಉತ್ತರ ಪ್ರದೇಶದ ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ, ಮಿಡತೆಯ ಒಂದು ದೊಡ್ಡ ಸಮೂಹವು ಒಂದು ಗಂಟೆಯಲ್ಲಿ ಹಲವಾರು ಎಕರೆಯಲ್ಲಿ ಬೆಳೆದ ಬೆಳೆಗಳನ್ನು ಹಾನಿಗೊಳಿಸುತ್ತವೆ. ಅವುಗಳ ಮೇಲೆ ರಾಸಾಯನಿಕ ಸಿಂಪಡಿಸಲಾಗುವುದು. ಆಗ್ರಾದ ಜಿಲ್ಲಾಡಳಿತವು ೨೦೪ ಟ್ರಾಕ್ಟರುಗಳನ್ನು ರಾಸಾಯನಿಕ ಸಿಂಪಡಿಸಲು ಸಿದ್ಧಪಡಿಸಿದೆ.