ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಯುಗಾನುಯುಗಗಳಿಂದ ಸಂಸ್ಕೃತ ವ್ಯಾಕರಣ ಅದೇ ರೀತಿ ಇದೆ. ಅದರಲ್ಲಿ ಯಾರೂ ಏನೂ ಬದಲಾವಣೆಗಳನ್ನು ಮಾಡಿಲ್ಲ. ಏಕೆಂದರೆ ಅದು ಮೊದಲಿನಿಂದಲೂ ಪರಿಪೂರ್ಣವಾಗಿಯೇ ಇದೆ. ತದ್ವಿರುದ್ಧ ಜಗತ್ತಿನಲ್ಲಿನ ಎಲ್ಲ ಭಾಷೆಗಳಲ್ಲಿನ ವ್ಯಾಕರಣಗಳು ಬದಲಾಗುತ್ತಿರುತ್ತವೆ.

ಅಧ್ಯಾತ್ಮದ ಅಧ್ಯಯನ ಮತ್ತು ಸಾಧನೆಯನ್ನು ಮಾಡಿದ ಮೇಲೆ ವಿಜ್ಞಾನವು ಶಿಶುವಿಹಾರದ ಶಿಕ್ಷಣದಂತಿದೆ ಎಂಬುದು ತಿಳಿಯುತ್ತದೆ.

ದೇವಸ್ಥಾನಗಳಲ್ಲಿನ ಸಿಬ್ಬಂದಿಗಳು ದರ್ಶನಾರ್ಥಿಗಳಿಗೆ ದರ್ಶನ ನೀಡುವುದನ್ನು ಹೊರತು ಪಡಿಸಿ ಬೇರೆ ಏನು ಮಾಡುತ್ತಾರೆ ? ಅವರು ದರ್ಶನಾರ್ಥಿಗಳಿಗೆ ಧರ್ಮಶಿಕ್ಷಣ ನೀಡಿದ್ದರೆ, ಸಾಧನೆ ಕಲಿಸಿದ್ದರೆ, ಹಿಂದೂಗಳ ಮತ್ತು ಭಾರತದ ಸ್ಥಿತಿ ದಯನೀಯವಾಗುತ್ತಿರಲಿಲ್ಲ.

ಇತರ ಪಂಥದವರ ಧ್ಯೇಯ ಇತರ ಧರ್ಮದವರ ಮೇಲೆ ಅಧಿಕಾರ ಚಲಾಯಿಸುವುದಾಗಿರುತ್ತದೆ ಮತ್ತು ಹಿಂದೂಗಳ ಧ್ಯೇಯ ಈಶ್ವರಪ್ರಾಪ್ತಿಯಾಗಿರುತ್ತದೆ.

ಈಶ್ವರಪ್ರಾಪ್ತಿಗಾಗಿ ತನು-ಮನ-ಧನದ ತ್ಯಾಗ ಮಾಡುವುದಿರುತ್ತದೆ. ಅದುದರಿಂದ ಹಣ ಸಂಪಾದನೆ ಮಾಡುವುದರಲ್ಲಿ ಜೀವನವನ್ನು ಕಳೆಯುವುದಕ್ಕಿಂತ ಸತ್ಸೇವೆಯನ್ನು ಮಾಡಿ ಹಣದೊಂದಿಗೆ ತನು ಮತ್ತು ಮನದ ತ್ಯಾಗವನ್ನು ಮಾಡಿದರೆ ಈಶ್ವರಪ್ರಾಪ್ತಿಯು ಬೇಗನೆ ಆಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ