ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕರೆಂದರೆ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆ

ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡಿಟ್ಟುಕೊಳ್ಳಿ !

೧. ನಾಯಿ, ಆಕಳು, ಎತ್ತು, ಕುದುರೆ ಮುಂತಾದವುಗಳನ್ನು ಹೇಗೆ ಸಾಕಬೇಕು ಹಾಗೂ ಅವುಗಳಿಗೆ ಬರುವ ರೋಗಗಳಿಗೆ ಯಾವ ಚಿಕಿತ್ಸೆ ನೀಡಬೇಕೆಂದು ಕಲಿತುಕೊಳ್ಳಬೇಕು !

೨. ಮುಂಬರುವ ಆಪತ್ಕಾಲದಲ್ಲಿ ಉಪಯುಕ್ತವಾಗುವಂತಹ ಕೆಲವು ಕಲೆ ಅಥವಾ ಕೃತಿಗಳನ್ನು ಈಗಲೇ ಕಲಿತುಕೊಳ್ಳಬೇಕು ಹಾಗೂ ಆ ಕೃತಿಯನ್ನು ಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು ! : ಇದರಲ್ಲಿ ಹೊಲಿಗೆ ಯಂತ್ರದಲ್ಲಿ ಬಟ್ಟೆ ಹೊಲಿಯುವುದು, ಈಜುವುದು, ಎತ್ತಿನಗಾಡಿ ನಡೆಸುವುದು, ಕುದುರೆ ಸವಾರಿ ಇವುಗಳಂತಹ ಕೃತಿಗಳ ಸಮಾವೇಶವಿರಬೇಕು.

. ಸಾಬೂನು, ದಂತಮಂಜನ ಮುಂತಾದ ವಸ್ತುಗಳಿಗಿರುವ ಪರ್ಯಾಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು ! : ಇದರಲ್ಲಿ ಬಟ್ಟೆಗಳನ್ನು ತೊಳೆಯಲು ಅಂಟವಾಳಕಾಯಿಗಳ ಉಪಯೋಗ ಮಾಡುವುದು, ಪಾತ್ರೆಗಳನ್ನು ತೊಳೆಯಲು ಬೂದಿಯನ್ನು ಉಪಯೋಗಿಸುವುದು, ಆಕಳ ಸೆಗಣಿಯಿಂದ ತಯಾರಿಸಲಾದ ಹಲ್ಲುಪುಡಿಯಿಂದ ಹಲ್ಲು ಉಜ್ಜುವುದು ಇವುಗಳಂತಹ ಕೃತಿಗಳ ಸಮಾವೇಶವಿರಬೇಕು.

ಆಪತ್ಕಾಲದ ದೃಷ್ಟಿಯಿಂದ ವಿವಿಧ ಸ್ತರಗಳಲ್ಲಿ ಮಾಡಬೇಕಾದ ಸಿದ್ಧತೆಗಳ ಬಗ್ಗೆ ಕೆಲವು ಸಾಮೂಹಿಕ ಸೂಚನೆ

೧. ಮನೆಯಲ್ಲಿನ ಉಪಕರಣಗಳು (ಅಡುಗೆ ಮನೆಯಲ್ಲಿನ ಉಪಕರಣಗಳು, ವಿದ್ಯುತ್, ಉಪಕರಣಗಳು ಮುಂತಾದವುಗಳು), ಸೈಕಲ್, ಎತ್ತಿನಗಾಡಿ, ಮುಂತಾದವುಗಳ ದುರಸ್ತಿಗಾಗಿ ಬೇಕಾಗುವ ಬಿಡಿಭಾಗಗಳನ್ನು ಖರೀದಿಸಿಟ್ಟುಕೊಳ್ಳಬೇಕು !

೨. ಮನೆಯಲ್ಲಿನ ಉಪಕರಣಗಳು, ನಲ್ಲಿ, ಸೈಕಲ್, ಎತ್ತಿನಗಾಡಿ ಮುಂತಾದ ವಸ್ತುಗಳ ದುರಸ್ತಿ ಮಾಡುವುದನ್ನು ಕಲಿಯಬೇಕು !

೩. ಕೆಲವು ವಸ್ತುಗಳ (ಉದಾ. ಧಾನ್ಯ ಬೀಸುವುದಕ್ಕಾಗಿ ‘ಬೀಸುವ ಕಲ್ಲು) ಖರೀದಿಯನ್ನು ಈಗಲೇ ಮಾಡಬೇಕು ಮತ್ತು ಕೆಲವು ವಸ್ತುಗಳ (ಉದಾ. ಔಷಧಿಗಳ) ಖರೀದಿಯನ್ನು ಹಂತಹಂತವಾಗಿ/ ಅವುಗಳು ಉಳಿಯುವ ಕಾಲಾವಧಿ/ಸರಕಾರಿ ನಿಯಮ ಮತ್ತು ನಿರ್ಬಂಧಗಳನ್ನು ಅರಿತು ಮಾಡಬೇಕು !

೪. ದೂರದರ್ಶನ (‘ಟಿ.ವಿಯ) ಪ್ರಸಾರ ಸ್ಥಗಿತಗೊಂಡರೆ ಆಕಾಶವಾಣಿಯಲ್ಲಿ ನೀಡುವ ಸೂಚನೆ, ಸಮಾಚಾರಗಳು ಮುಂತಾದವುಗಳನ್ನು ಕೇಳುವುದಕ್ಕಾಗಿ ‘ರೇಡಿಯೋ ಖರೀದಿಸಿಟ್ಟುಕೊಳ್ಳಬೇಕು ! : ಸಂಚಾರವಾಣಿಯಲ್ಲಿ ‘ರೇಡಿಯೋ ಇರುತ್ತದೆ, ಅದನ್ನು ಕೂಡ ಉಪಯೋಗಿಸಬಹುದು.

೫. ಗೃಹನಿರ್ಮಾಣ ಸಂಸ್ಥೆ (ಹೌಸಿಂಗ್ ಸೊಸೈಟಿ), ಅಪಾರ್ಟಮೆಂಟ್ ಮುಂತಾದ ಸ್ಥಳದಲ್ಲಿರುವವರು ಒಟ್ಟಾಗಿ ಮುಂದಿನ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ! : ಇದರಲ್ಲಿ ‘ಬಯೋ-ಗ್ಯಾಸ್ ವ್ಯವಸ್ಥೆ ನಿರ್ಮಿಸುವುದು, ಬಾವಿ ತೋಡಿಸುವುದು, ಸೌರ ಶಕ್ತಿಯ ವ್ಯವಸ್ಥೆ ಮಾಡಿಕೊಳ್ಳುವುದು ಇವುಗಳಂತಹ ವ್ಯವಸ್ಥೆಗಳ ಸಮಾವೇಶವಿರಬೇಕು. – ಪರಾತ್ಪರ ಗುರು ಡಾ. ಆಠವಲೆ

(ಆಧಾರ : ಸನಾತನದ ಮುಂಬರುವ ಗ್ರಂಥ ‘ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವಸಿದ್ಧತೆ)