ಲಾಕ್‌ಡೌನ್ ನಿಯಮದ ಪಾಲನೆ
ಬದ್ರಿನಾಥ್ (ಉತ್ತರಾಖಂಡ) – ಮೇ ೧೫ ರಂದು ಬೆಳಿಗ್ಗೆ ೪.೩೦ ಕ್ಕೆ ಶ್ರೀ ಬದ್ರಿನಾಥ್ ದೇವಾಲಯದ ಬಾಗಿಲನ್ನು ವೈದಿಕ ಪಠಣದೊಂದಿಗೆ ತೆರೆಯಲಾಯಿತು. ಮುಂಜಾನೆ ೩ ರಿಂದ ಬಾಗಿಲು ತೆರೆಯುವ ಆಚರಣೆ ಪ್ರಾರಂಭವಾಗಿತ್ತು. ರಾವಲ್ ಈಶ್ವರ ಪ್ರಸಾದ ನಂಬೂದಾರಿ ಅವರು ವಿಶೇಷ ಪೂಜೆಯನ್ನು ನಡೆಸಿದರು. ಬಾಗಿಲು ತೆರೆದ ನಂತರ ದೇವಾಲಯದಲ್ಲಿ ಲಕ್ಷ್ಮಿ ದೇವಿಯನ್ನು ಸ್ಥಾಪಿಸಲಾಯಿತು. ಭಗವಾನ್ ಶ್ರೀ ಬದ್ರಿನಾಥ್ ಅವರಿಗೆ ಎಳ್ಳೆಣ್ಣೆಯಿಂದ ಅಭಿಷೇಕ ಮಾಡಲಾಯಿತು. ಪ್ರತಿವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾಗಿಲು ತೆರೆಯಲಾಗುತ್ತದೆ; ಆದರೆ, ಈ ವರ್ಷ ಸಂಚಾರ ನಿಷೇಧದಿಂದಾಗಿ ಬಾಗಿಲು ತೆರೆದಾಗ ಕೇವಲ ೨೮ ಜನರು ಹಾಜರಿದ್ದರು. ಎಲ್ಲರೂ ಮುಖಗವಸು ಧರಿಸಿದ್ದರು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಪ್ರತಿ ವರ್ಷ ಚಳಿಗಾಲದಲ್ಲಿ ಆರು ತಿಂಗಳ ಕಾಲ ದೇವಾಲಯವನ್ನು ಮುಚ್ಚಲಾಗುತ್ತದೆ ಮತ್ತು ನಂತರ ಅದನ್ನು ವಿಧಿವತ್ತಾಗಿ ತೆರೆಯಲಾಗುತ್ತದೆ.