ಸರಕಾರಿಕರಣಗೊಂಡ ದೇವಸ್ಥಾನಗಳಿಂದ ೧೦ ಕೋಟಿ ರೂಪಾಯಿ ಪಡೆಯುವ ತಮಿಳುನಾಡಿನ ಸರಕಾರಿ ಆದೇಶವು ರದ್ದು ಪಡಿಸಿದ ಮದ್ರಾಸ್ ಉಚ್ಚನ್ಯಾಯಾಲಯ !
* ದೇವಸ್ಥಾನದ ಹಣವನ್ನು ಕಬಳಿಸಲು ಪ್ರಯತ್ನಿಸುವ ಸರಕಾರದ ಪ್ರಯತ್ನದ ವಿರುದ್ಧ ಕಾನೂನುಮಾರ್ಗದಿಂದ ಕೃತಿ ಮಾಡಿದ ಧರ್ಮಪ್ರೇಮಿಗಳಿಗೆ ಅಭಿನಂದನೆಗಳು !
* ಹೀಗೆ ಪ್ರತಿಯೊಬ್ಬ ಜಾಗೃತ ಹಿಂದೂಗಳು ಪ್ರಯತ್ನಿಸಬೇಕು !
* ಈ ರೀತಿಯ ಆದೇಶವನ್ನು ನೀಡುವ ಧೈರ್ಯವು ಯಾರಲ್ಲಿಯೂ ನಿರ್ಮಾಣವಾಗಬಾರದು, ಅದಕ್ಕಾಗಿ ನ್ಯಾಯಾಲಯವು ಸಂಬಂಧಪಟ್ಟವರಿಗೆ ಶಿಕ್ಷೆಯನ್ನು ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಚೆನ್ನೈ – ತಮಿಳುನಾಡು ರಾಜ್ಯದಲ್ಲಿ ಎಪ್ರಿಲ್ ೨೨ ರಂದು ‘ಹಿಂದೂ ಧಾರ್ಮಿಕ ಇಲಾಖೆಯು ರಾಜ್ಯದಲ್ಲಿ ಸರಕಾರಿಕರಣ ಗೊಂಡಿರುವ ೩ ಸಾವಿರ ದೇವಸ್ಥಾನಗಳ ಪೈಕಿ ೪೭ ಬೃಹತ್ ಹಿಂದೂ ದೇವಸ್ಥಾನಗಳಿಂದ ಕೊರೋನಾ ಹೋರಾಟದ ಸಹಾಯಕ್ಕಾಗಿ ೧೦ ಕೋಟಿ ರೂಪಾಯಿಯ ನಿಧಿಯನ್ನು ‘ಮುಖ್ಯಮಂತ್ರಿ ಸಹಾಯ ನಿಧಿಗೆ ನೀಡಬೇಕು ಎಂದು ಆದೇಶ ನೀಡಿದ್ದನ್ನು ಮದ್ರಾಸ್ ಉಚ್ಚ ನ್ಯಾಯಾಲಯ ವಜಾ ಮಾಡಿತು. ನ್ಯಾಯಮೂರ್ತಿ ವಿನೀತ ಕೊಠಾರಿ ಹಾಗೂ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಇವರ ವಿಭಾಗೀಯ ಪೀಠವು ಈ ಆದೇಶದ ವಿರುದ್ಧ ಹೂಡಿದ್ದ ೩ ಮೊಕದ್ದಮೆಗಳ ಆಲಿಕೆಯನ್ನು ಮಾಡುತ್ತಿರುವ ಸಮಯದಲ್ಲಿ ಈ ನಿರ್ಣಯವನ್ನು ನೀಡಿತು.
೧. ಹಿಂದೂ ಧಾರ್ಮಿಕ ಇಲಾಖೆಗಳ ಈ ಆದೇಶಕ್ಕೆ ತಡೆ ಕೋರಲು ಹಿಂದೂ ಮಂದಿರ ಪೂಜಕ ಸಮಿತಿಯ ಅಧ್ಯಕ್ಷ ಟಿ.ಆರ್. ರಮೇಶ ಇವರು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು. ಇದಲ್ಲದೇ ತಮಿಳು ದೈನಿಕ ‘ದಿನಮಾಲಾದ ಸಂಪಾದಕ ಆರ್.ಆರ್. ಗೋಪಾಲಜಿ ಹಾಗೂ ಇನ್ನೋರ್ವ ವ್ಯಕ್ತಿಯೂ ಹಿಂದೂ ಧಾರ್ಮಿಕ ಇಲಾಖೆಯ ಆದೇಶದ ವಿರುದ್ಧ ಮೊಕದ್ದಮೆಯನ್ನು ಹೂಡಿದ್ದರು.
೨. ರಮೇಶ ಇವರು ಮಾತನಾಡುತ್ತಾ, ‘ತಮಿಳುನಾಡು ಹಿಂದೂ ಧಾರ್ಮಿಕ ವಿಭಾಗ ೧೯೫೯ ರ ಕಾನೂನಿನಲ್ಲಿ ಕಲಂ ೩೬-ಬಿ ಅನ್ವಯ, ‘ತಮಿಳುನಾಡು ಹಿಂದೂ ಧಾರ್ಮಿಕ ವಿಭಾಗದ ಆಯುಕ್ತರು ಸ್ವತಃ ದೇವಸ್ಥಾನದಿಂದ ನೀಡಲಾಗುವ ಹಣದ ಒಪ್ಪಿಗೆಯನ್ನು ನೀಡುವ ಅಧಿಕಾರಿಯಾಗಿದ್ದಾರೆ. ಆದ್ದರಿಂದ ಅವರೇ ದೇವಸ್ಥಾನದಿಂದ ಹಣವನ್ನು ತೆಗೆದುಕೊಳ್ಳುವ ಆದೇಶವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ನ್ಯಾಯಮೂರ್ತಿಯವರು ಈ ಯುಕ್ತಿವಾದವನ್ನು ಪರಿಗಣನೆಗೆ ತೆಗೆದುಕೊಂಡರು.
೩. ತಮಿಳುನಾಡು ಹಿಂದೂ ಧಾರ್ಮಿಕ ಇಲಾಖೆಯ ಆದೇಶದಿಂದ ಆಡಳಿತಾರೂಢ ‘ಅಖಿಲ ಭಾರತೀಯ ಅಣ್ಣಾ ದ್ರವಿಡ ಮುನ್ನೆತ್ರ ಕಝಗಮ್ ಸರಕಾರ ವಿರುದ್ಧ ಹಿಂದೂಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಸರಕಾರವು ಮಸೀದಿಗಳಿಗೆ ೫ ಸಾವಿರದ ೪೫೦ ಟನ್ ಅಕ್ಕಿಯನ್ನು ಉಚಿತವಾಗಿ ನೀಡುವಂತೆ ಮಾಡಿದ್ದರಿಂದ ‘ಇದು ಹಿಂದೂಗಳ ದೇವಸ್ಥಾನದ ಹಣವನ್ನು ಲೂಟಿಗೈದು ಮತಾಂಧರ ಮೇಲೆ ಸುರಿಯುವ ಪ್ರಯತ್ನವಾಗಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.