‘ಕೊರೋನಾದಿಂದ ಅಸ್ತವ್ಯಸ್ತಗೊಂಡಿರುವ ಜನಜೀವನವನ್ನು ನೋಡಿದಾಗ ಗುರುದೇವರು ‘ಆಪತ್ಕಾಲದಲ್ಲಿ ಮನೆಯ ಹೊರಗೆ ಹೋಗುವುದು ಸಾಧ್ಯವಾಗುವುದಿಲ್ಲ, ಎಂಬ ವಾಕ್ಯದ ಅನುಭವವಾಗಿ ಅವರ ದಾರ್ಶನಿಕತೆಯು ಸಿದ್ಧವಾಗುವುದು. – (ಸದ್ಗುರು) ಸೌ. ಬಿಂದಾ ಸಿಂಗಬಾಳ

(ಸದ್ಗುರು) ಸೌ. ಬಿಂದಾ ಸಿಂಗಬಾಳ

೧. ‘ಕೊರೋನಾ’ದಿಂದ ಎಲ್ಲೆಡೆ ಜನಜೀವನ ಅಸ್ತವ್ಯಸ್ತವಾಗಿ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುವುದು

‘ಇತ್ತೀಚೆಗೆ ಭಾರತವೂ ಸೇರಿದಂತೆ ಇತರ ದೇಶಗಳಲ್ಲಿಯೂ ‘ಕೊರೋನಾ’ ರೋಗಾಣುವಿನ ಹಾವಳಿ ಹೆಚ್ಚಾಗಿದೆ. ಸೋಂಕು ಹೆಚ್ಚುತ್ತಿರುವುದರಿಂದ ಭಾರತ ಸರಕಾರವು ನಾಗರಿಕರಿಗೆ ‘ಸಾರ್ವಜನಿಕ ಸ್ಥಳಗಳಿಗೆ ಹಾಗೂ ಪರವೂರುಗಳಿಗೆ ಹೋಗಬೇಡಿ’, ಮುಂತಾದ ಆದೇಶಗಳನ್ನು ನೀಡಿದೆ. ಕೆಲವು ನಗರಗಳಲ್ಲಿ ಗುಂಪು ಕಟ್ಟುವುದರ ಮೇಲೆ ನಿರ್ಬಂಧದ ಆದೇಶವನ್ನು ಕೂಡ ನೀಡಲಾಗಿದೆ. ಎಷ್ಟೋ ಸ್ಥಳಗಳಲ್ಲಿ ಶಾಲೆ ಹಾಗೂ ಮಹಾವಿದ್ಯಾಲಯಗಳಿಗೆ ರಜೆ ನೀಡಲಾಗಿದೆ. ಎಷ್ಟೋ ಸರಕಾರಿ ಹಾಗೂ ಖಾಸಗಿ ಕಛೇರಿಗಳ ಸಿಬ್ಬಂದಿಗಳಿಗೆ ಮನೆಯಲ್ಲಿದ್ದೇ ಕೆಲಸ ಮಾಡಲು ಆದೇಶ ನೀಡಿದೆ. ಕೆಲವು ಸ್ಥಳಗಳಲ್ಲಿ ಶೇ. ೨೫ ರಷ್ಟು ಸಿಬ್ಬಂದಿಗಳನ್ನು ಮಾತ್ರ ಹಾಜರಾಗಿರಲು ಹೇಳಲಾಗಿದೆ, ಅದೇ ರೀತಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪರಿಷತ್ತುಗಳನ್ನು ರದ್ದು ಪಡಿಸಲಾಗಿದೆ. ಒಟ್ಟಿನಲ್ಲಿ ಜನಜೀವನವು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿ ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

೨. ‘ಕೊರೋನಾದ ಸೋಂಕಿನಿಂದ ಸಾಧಕರಿಗೆ ವಿವಿಧ ಸೇವೆಗಳನ್ನು ಮಾಡಲು ಮಿತಿ ಬರುವುದು ಹಾಗೂ ಸಭೆ ಮತ್ತು ಇತರ ಉಪಕ್ರಮಗಳನ್ನು ರದ್ದು ಮಾಡಬೇಕಾಗುವುದು

‘ಕೊರೋನಾದಿಂದ ಸುರಕ್ಷೆಯ ನಿಟ್ಟಿನಿಂದ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಕೆಲವು ಮಹತ್ವವಾದ ಅಭಿಯಾನಗಳನ್ನು  (ಸನಾತನದ ಗ್ರಂಥ ಹಾಗೂ ಕಿರುಗ್ರಂಥಗಳ ಪ್ರದರ್ಶನ, ಹಿಂದೂ ರಾಷ್ಟ್ರ-ಜಾಗೃತಿ ಸಭೆ, ರಾಷ್ಟ್ರೀಯ ಆಂದೋಲನ ಇತ್ಯಾದಿ)ಗಳನ್ನು ರದ್ದು ಪಡಿಸಿದೆ. ಧರ್ಮಪ್ರಚಾರದ ಸೇವೆಗಾಗಿ ಹಿತ ಚಿಂತಕರು ಹಾಗೂ ಧರ್ಮಪ್ರೇಮಿಗಳನ್ನು ಭೇಟಿಯಾಗುವುದು, ಸಾರ್ವಜನಿಕ ಸ್ಥಳಗಳಲ್ಲಿ ಸತ್ಸಂಗ ಹಾಗೂ ಪ್ರವಚನಗಳನ್ನು ಹಮ್ಮಿಕೊಳ್ಳುವುದು ಇತ್ಯಾದಿ ಸೇವೆ ಮಾಡಲು ಸಾಧಕರಿಗೆ ಬಂಧನಗಳು ಉಂಟಾಗುತ್ತಿದೆ.

೩. ಪರಾತ್ಪರ ಗುರು ಡಾಕ್ಟರವರು ಕೆಲವು ವರ್ಷಗಳ ಹಿಂದೆ ‘ಆಪತ್ಕಾಲದಲ್ಲಿ ಮನೆಯಿಂದ ಹೊರಗೆ ಹೋಗುವುದು ಅಸಾಧ್ಯವಾಗುವುದು, ಎಂದು ಹೇಳಿರುವುದು

೧೫-೨೦ ವರ್ಷಗಳ ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರು ‘ಕಾಲಮಹಿಮೆಯಂತೆ ಶೀಘ್ರದಲ್ಲಿಯೇ ಆಪತ್ಕಾಲ ಬರಲಿದೆ. ಸೇವೆ ಹಾಗೂ ಸಾಧನೆ ಮಾಡಲು ಪ್ರತಿಕೂಲ ವಾತಾವರಣ ನಿರ್ಮಾಣವಾಗುವುದು. ಮುಂದೆ ಮುಂದೆ ಆಪತ್ಕಾಲದ ತೀವ್ರತೆ ಎಷ್ಟು ಹೆಚ್ಚಾಗುತ್ತದೆಯೆಂದರೆ,  ಸಾಧಕರಿಗೆ ಅಧ್ಯಾತ್ಮ ಪ್ರಚಾರ ಮಾಡಲು ಮನೆಯ ಹೊರಗೆ ಹೋಗಲೂ ಕಠಿಣವಾಗಲಿದೆ, ಎಂದಿದ್ದರು. ಬಿರುಗಾಳಿ, ಭೂಕುಸಿತ, ಭೂಕಂಪ, ಜಲ ಪ್ರಳಯ, ಸಾಂಕ್ರಾಮಿಕ ರೋಗ ಹರಡುವುದು,  ಇದು ಆಪತ್ಕಾಲವು ಪ್ರಾರಂಭವಾಗಿರುವುದರ ದ್ಯೋತಕವಾಗಿದೆ. ‘ಕೊರೋನಾದಂತಹ ಸಂಕ್ರಾಮಿಕ ರೋಗವು ವೇಗವಾಗಿ ಹರಡಿ ಹಲವರು ಸಾವನ್ನಪ್ಪುವುದು, ಆಪತ್ಕಾಲದ ತೀವ್ರತೆಯನ್ನು ತೋರಿಸುತ್ತದೆ. ಈ ಸ್ಥಿತಿಯೆಂದರೆ ಸಂತರು ಮೊದಲೇ ನುಡಿದ ಭವಿಷ್ಯವಾಣಿಯಂತೆ ಈಗಿರುವ ಆಪತ್ಕಾಲವು ತುಂಬಾ ಸಣ್ಣ ಸ್ವರೂಪದಲ್ಲಿದೆ.  ಇದಕ್ಕಿಂತ ಎಷ್ಟೋ ದೊಡ್ಡ ಪಟ್ಟಿನಲ್ಲಿ ಆಪತ್ಕಾಲವು ಸಮೀಪದಲ್ಲಿ ಬಂದು ನಿಂತಿದೆ. ಗುರುದೇವರು ಕೆಲವು ವರ್ಷ ಗಳ ಹಿಂದೆಯೇ ಈ ಸಂದರ್ಭದಲ್ಲಿ ಎಲ್ಲರಿಗೂ ಸೂಚಿಸಿದ್ದು ಆಪತ್ಕಾಲವನ್ನು ಎದುರಿಸಲು ಸಾಧನೆ ಮಾಡಿ ಆತ್ಮಬಲವನ್ನು ಹೆಚ್ಚಿಸಿಕೊಳ್ಳುವಂತೆ ಹೇಳಿದ್ದರು. ಇದರಿಂದ ಅವರ ದೂರದೃಷ್ಟಿ ಹಾಗೂ ಸರ್ವಜ್ಞತೆಯು ತಿಳಿದು ಬರುತ್ತದೆ.

ಸಾಧಕರೇ, ಇಂತಹ ಆಪತ್ಕಾಲದಲ್ಲಿಯೂ ಕೂಡ ಸಾಧನೆ ಹಾಗೂ ಸೇವೆ ಮಾಡುವ ಅವಕಾಶ ನಮಗೆ ಸಿಗುತ್ತಿದೆ ಎಂಬ ಬಗ್ಗೆ ಕೃತಜ್ಞತಾಭಾವವನ್ನಿಟ್ಟುಕೊಳ್ಳಿರಿ ! ‘ಸಂಪತ್ಕಾಲಕ್ಕಿಂತಲೂ ಆಪತ್ಕಾಲದಲ್ಲಿ ಸಮಯದ ಬೆಲೆ ಹೆಚ್ಚು ಪಟ್ಟಿನಲ್ಲಿ ಹೆಚ್ಚಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಗುರುಸೇವೆಗಾಗಿ ಆದಷ್ಟು ಹೆಚ್ಚು ಸಮಯವನ್ನು ನೀಡಿರಿ ಹಾಗೂ ಆಪತ್ಕಾಲದಲ್ಲಿ ಸಂಪತ್ಕಾಲದ (ಗುರುಕೃಪೆ)ಯ ಅನುಭವವನ್ನು ಪಡೆದುಕೊಳ್ಳಿರಿ ! – (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೩.೨೦೨೦)