ಶ್ರೀರಾಮಜನ್ಮಭೂಮಿ ಟ್ರಸ್ಟ್‌ CEO ಹುದ್ದೆಗೆ ಅರ್ಜಿ ಆಹ್ವಾನ : Ram Temple CEO Vacancy

ಪದವಿ ಮತ್ತು ಆಡಳಿತಾತ್ಮಕ ಸೇವೆಯಲ್ಲಿ 20 ವರ್ಷಗಳ ಅನುಭವ ಕಡ್ಡಾಯ!

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಕ ಮಾಡಲು ರಚಿಸಲಾದ 3 ಸದಸ್ಯರ ಸಮಿತಿಯು ಅರ್ಹತೆಯ ಮಾನದಂಡಗಳನ್ನು ನಿಗದಿಪಡಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 18ರವರೆಗೆ ಅರ್ಜಿ ಸಲ್ಲಿಸಬಹುದು. ದೇವಾಲಯಕ್ಕಾಗಿ 100 ಪೂಜಾರಿಗಳನ್ನು ನೇಮಕ ಮಾಡುವ ಬಾಕಿ ಇರುವ ಪ್ರಸ್ತಾವನೆಯ ಕುರಿತು ಜುಲೈ 22ರಂದು ನಡೆಯಲಿರುವ ಟ್ರಸ್ಟ್‌ನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

20 ವರ್ಷಗಳ ಅನುಭವ ಮತ್ತು ಹಿಂದೂ ಧರ್ಮದವರಾಗಿರುವುದು ಕಡ್ಡಾಯ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಅಭ್ಯರ್ಥಿಯು ಪದವೀಧರನಾಗಿರುವುದು ಅವಶ್ಯಕವಾಗಿದೆ. ಅವರಿಗೆ ಆಡಳಿತ ಅಥವಾ ಹಣಕಾಸು ನಿರ್ವಹಣೆಯಲ್ಲಿ ಕನಿಷ್ಠ 20 ವರ್ಷಗಳ ಅನುಭವ ಇರುವುದು ಅವಶ್ಯಕವಾಗಿದೆ. ಅಭ್ಯರ್ಥಿಯು ಹಿಂದೂ ಧರ್ಮದವರಾಗಿರಬೇಕು ಎಂಬುದು ಸಹ ಒಂದು ಪ್ರಮುಖ ಷರತ್ತಾಗಿದೆ. ಈ ನೇಮಕಾತಿಯು 3 ವರ್ಷಗಳ ಅವಧಿಗೆ ಇರಲಿದೆ. ಆಯ್ಕೆಯಾದ ಅಧಿಕಾರಿಗೆ ಟ್ರಸ್ಟ್ ನಿಂದ ವೇತನ, ವಸತಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುವುದು ಮತ್ತು ಅವರು ಸಂಪೂರ್ಣವಾಗಿ ಟ್ರಸ್ಟ್‌ಗೆ ಜವಾಬ್ದಾರರಾಗಿರುತ್ತಾರೆ.

ಸಂಪಾದಕೀಯ ನಿಲುವು

ದೇವಾಲಯದ ನಿರ್ವಹಣೆಯನ್ನು ನೋಡಿಕೊಳ್ಳಬೇಕಾದರೆ, ಅದರ ಆಡಳಿತ, ಕಾರ್ಯವಿಧಾನ ಮತ್ತು ಇತರ ವ್ಯವಸ್ಥೆಗಳನ್ನು ಕಲಿಯಬಹುದು; ಆದರೆ ದೇವಾಲಯದ ನಿರ್ವಹಣೆಗೆ ಅತ್ಯಗತ್ಯವಾದ ಗುಣವೆಂದರೆ ಆ ವ್ಯಕ್ತಿ ದೇವರ ಅಪಾರ ಭಕ್ತ ಆಗಿರಬೇಕು. ಈ ಮಾನದಂಡವನ್ನು ಅನ್ವಯಿಸದ ಹೊರತು, ಸ್ವಚ್ಛ ಮತ್ತು ಪಾರದರ್ಶಕ ಆಡಳಿತದ ಭರವಸೆಯನ್ನು ಯಾರು ನೀಡುತ್ತಾರೆ?