‘ಹಿಜ್ಬುಲ್ ಮುಜಾಹಿದ್ದೀನ್’ನ ಉಪ ಮುಖ್ಯ ಕಮಾಂಡರ್ ಶಂಶೇರ್ ಖಾನ್ ಹೇಳಿಕೆ!

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದಿಂದ ಕಳುಹಿಸಲಾದ ಭಯೋತ್ಪಾದಕರು ದೀರ್ಘಕಾಲದಿಂದ ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಪಾಕಿಸ್ತಾನಿ ಭಯೋತ್ಪಾದಕರು ಕಾಶ್ಮೀರದಲ್ಲಿ ಕೇವಲ ‘ಹೋರಾಡುತ್ತಿಲ್ಲ’, ಅವರ ಗೋರಿಗಳು ಪ್ರತಿಯೊಂದು ನಗರದಲ್ಲೂ ಇವೆ. ಕಾಶ್ಮೀರದ ಲೋಲಾಬ್, ಕುಪ್ವಾರಾದಿಂದ ಹಿಡಿದು ಕಥುವಾವರೆಗಿನ ಪ್ರತಿಯೊಂದು ನಗರದಲ್ಲೂ ಪಾಕಿಸ್ತಾನಿ ಭಯೋತ್ಪಾದಕರ ಸಮಾಧಿಗಳಿವೆ. ಕಾಶ್ಮೀರದಲ್ಲಿ ಯಾವುದೇ ಪಾಕಿಸ್ತಾನಿಯನ್ನು ಹೂಳದ ಯಾವುದೇ ಕಬ್ರಸ್ತಾನ್ (ಸ್ಮಶಾನ) ಇಲ್ಲ ಎಂದು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ‘ಹಿಜ್ಬುಲ್ ಮುಜಾಹಿದ್ದೀನ್’ನ ಉಪ ಮುಖ್ಯ ಕಮಾಂಡರ್ ಶಂಶೇರ್ ಖಾನ್ ಒಪ್ಪಿಕೊಂಡಿದ್ದಾನೆ. ಆತನ ವಿಡಿಯೋವೊಂದು ವೈರಲ್ ಆಗಿದ್ದು, ಆತ ಈ ವಿಷಯವನ್ನು ಒಪ್ಪಿಕೊಂಡಿದ್ದಾನೆ. ಆತನ ಈ ಒಪ್ಪಿಗೆಯಿಂದಾಗಿ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನವೇ ಪ್ರಚೋದನೆ ನೀಡುತ್ತಿದೆ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ.
🚨 Pakistan's Role in Cross-Border Terrorism Laid Bare: Hizbul Commander Admits Pakistani Terrorists Are Buried Across Kashmir
Shamsher Khan, Deputy Chief Commander of Hizbul Mujahideen, has admitted that graveyards across Kashmir contain the graves of Pakistani terrorists.… pic.twitter.com/uV3vuc32Ec
— Sanatan Prabhat (@SanatanPrabhat) July 11, 2026
ಶಂಶೇರ್‌ನ ಈ ವಿಡಿಯೋ ಜುಲೈ 8 ರದ್ದು ಎಂದು ಹೇಳಲಾಗುತ್ತಿದೆ. ಆತ ಪಾಕ್ ಆಕ್ರಮಿತ ಕಾಶ್ಮೀರದ (PoK) ಮುಜಾಫರಾಬಾದ್‌ನಲ್ಲಿ ‘ಜಮಾತ್-ಎ-ಇಸ್ಲಾಮಿ’ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದನು. ಕಾಶ್ಮೀರಕ್ಕೆ ಪಾಕಿಸ್ತಾನದೊಂದಿಗೆ ಸಂಬಂಧವಿದ್ದು, ಅದನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ಆತ ಹೇಳಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರದ ಜನರು ಪಾಕಿಸ್ತಾನಿ ಸೇನೆ ಮತ್ತು ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿಯೇ ಶಂಶೇರ್‌ನ ಈ ವಿಡಿಯೋ ಮುನ್ನಲೆಗೆ ಬಂದಿದೆ. ಅಲ್ಲಿನ ಜನರು ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಂಶೇರ್ ಖಾನ್ ಈ ಸಮಿತಿಯನ್ನು ಟೀಕಿಸಿದ್ದು, ಇದು ಪಾಕಿಸ್ತಾನಕ್ಕೆ ದ್ರೋಹ ಬಗೆಯುತ್ತಿದೆ ಮತ್ತು ಭಾರತದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾನೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim