ಮುಸಲ್ಮಾನರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ ! – ನಿತೇಶ ರಾಣೆ, ಮೀನುಗಾರಿಕೆ ಸಚಿವ

ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ

ಮುಂಬಯಿ, ೧೦ ಜುಲೈ (ಸುದ್ದಿ) – ಮುಸಲ್ಮಾನರಿಗೆ ಜಾತಿಯ ಆಧಾರದ ಮೇಲೆ ಮೀಸಲಾತಿ ದೊರೆಯಬಹುದು; ಆದರೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ, ಎಂದು ಸರಕಾರದ ಪರವಾಗಿ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ಅವರು ವಿಧಾನಸಭೆಯಲ್ಲಿ ಸ್ಪಷ್ಟ ನಿಲುವನ್ನು ಮಂಡಿಸಿದರು. ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ ಅವರು ‘ನ್ಯಾಯಾಲಯದ ನಿರ್ದೇಶನಗಳ ಪ್ರಕಾರ ಮುಸ್ಲಿಂ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಶೇ. ೧೦% ರಷ್ಟು ಮೀಸಲಾತಿ ಸಿಗಬೇಕು’, ಎಂದು ಆಗ್ರಹಿಸಿದರು. ಇದಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ನರಹರಿ ಜಿರವಳ್ ಅವರು ‘ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು’, ಎಂದು ಸದನದಲ್ಲಿ ತಿಳಿಸಿದರು. ಅದಕ್ಕೆ ಸಚಿವ ನಿತೇಶ ರಾಣೆ ಅವರು ‘ಸಚಿವ ನರಹರಿ ಜಿರವಳ್ ಅವರ ಬಾಯಿಂದ ಏನನ್ನೂ ಹೇಳಿಸಬೇಡಿ’, ಎಂದು ಹೇಳುತ್ತಾ ಮುಸಲ್ಮಾನರ ಮೀಸಲಾತಿ ಕುರಿತ ನಿಲುವನ್ನು ಸ್ಪಷ್ಟಪಡಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ೬೦ ಕೋಟಿ ರೂಪಾಯಿ ನೀಡಲಾಗಿದೆ ! – ಸಚಿವ ನರಹರಿ ಜಿರವಳ್

​ಜುಲೈ ೧೦ ರಂದು ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ ಅವರು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಬಾಕಿ ಉಳಿದಿರುವ ವಿದ್ಯಾರ್ಥಿವೇತನವನ್ನು ತಕ್ಷಣ ಮಂಜೂರು ಮಾಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಸಚಿವ ನರಹರಿ ಜಿರವಳ್ ಅವರು, ೨೦೨೩ ರಿಂದ  ೨೦೨೭ ರವರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸರಕಾರದಿಂದ ಎಷ್ಟು ಹಣ ನೀಡಲಾಗಿದೆ, ಎಂಬ ಬಗ್ಗೆ ಅಂಕಿ-ಅಂಶಗಳನ್ನು ನೀಡಿದರು.  ೨೦೨೬-೨೭ ಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ೬೦ ಕೋಟಿ ರೂಪಾಯಿ ಧನಸಹಾಯ ನೀಡಲಾಗಿದೆ ಎಂದು ಜಿರವಳ್ ತಿಳಿಸಿದರು. ಕಾಂಗ್ರೆಸ್ ಶಾಸಕ ಅಮಿತ್ ದೇಶಮುಖ್ ಅವರು ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಡೆಗೆ ಸರಕಾರದ ಗಮನ ಕಡಿಮೆ ಇದೆ’, ಎಂದು ಉಲ್ಲೇಖಿಸುತ್ತಾ ‘ಅಲ್ಪಸಂಖ್ಯಾತರಿಗಾಗಿ ಉರ್ದು ಭವನಗಳು, ಗ್ರಂಥಾಲಯಗಳು, ವಸತಿ ಶಾಲೆಗಳಿಗೆ ಮಂಜೂರಾತಿ ನೀಡಬೇಕು’, ಎಂದು ಒತ್ತಾಯಿಸಿದರು. ಇದಕ್ಕಾಗಿ ಪ್ರಯತ್ನಿಸುವುದಾಗಿ ನರಹರಿ ಜಿರವಳ್ ಭರವಸೆ ನೀಡಿದರು.

ಈ ನಡುವೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಛಗನ ಭುಜಬಲ್ ಅವರು ಮಾತನಾಡಿ, ‘ಮುಸ್ಲಿಂ ಧರ್ಮದಲ್ಲಿ ವಿವಿಧ ಜಾತಿಗಳಿವೆ. ಅವರಿಗೆ ಇತರ ಹಿಂದುಳಿದ ವರ್ಗಗಳ  ಲಾಭ ಸಿಗುತ್ತಿದೆ’, ಎಂದು ಹೇಳಿದರು.

​‘ಐಟಿಐ’ ಮುಚ್ಚಿ ಉರ್ದು ಭವನಗಳಿಗೆ ಮಂಜೂರಾತಿ ನೀಡಬೇಡಿ ! – ರಾಹುಲ್ ನಾರ್ವೇಕರ್, ಅಧ್ಯಕ್ಷರು, ವಿಧಾನಸಭೆ

​ಔದ್ಯೋಗಿಕ ತರಬೇತಿ ಸಂಸ್ಥೆಯ (ಐಟಿಐ) ಜಾಗದ ಮಂಜೂರಾತಿಯನ್ನು ರದ್ದುಗೊಳಿಸಿ ಆ ಜಾಗವನ್ನು ಉರ್ದು ಶಾಲೆಗೆ ನೀಡಲಾಗಿದೆ. ಹೀಗೆ ಮಾಡುವುದು ಸರಿಯಲ್ಲ. ಉರ್ದು ಶಾಲೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು; ಆದರೆ ಔದ್ಯೋಗಿಕ ತರಬೇತಿ ಸಂಸ್ಥೆಯನ್ನು ಮುಚ್ಚಿ ಉರ್ದು ಶಾಲೆಗೆ ಮಂಜೂರಾತಿ ನೀಡಬೇಡಿ ಎಂದು ವಿನಂತಿಸಿದರು.