
ಅಯೋಧ್ಯೆ – ಶ್ರೀರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಾದ ಹೊಸ ಮಾಹಿತಿಯ ಪ್ರಕಾರ, ಮಂದಿರದಲ್ಲಿ ದೇಣಿಗೆಯನ್ನು ಎಣಿಸುತ್ತಿದ್ದ ೨೩ ಸಿಬ್ಬಂದಿಗಳು ಏಕಕಾಲದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಎಲ್ಲಾ ಸಿಬ್ಬಂದಿಯನ್ನು ಹೊರಗುತ್ತಿಗೆ ಸಂಸ್ಥೆಯೊಂದರ (‘ ಗುತ್ತಿಗೆ ಏಜೆನ್ಸಿ’ಯ) ಮೂಲಕ ಮಂದಿರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು.
🚨 23 Employees Quit Amid Shri Ram Mandir Donation Theft Row
In Ayodhya, 23 contract employees of the Shri Ram Mandir Teerth Kshetra Trust have resigned after the donation theft controversy.
The employees alleged sudden rule changes and pay cuts following the incident, and… https://t.co/Qi08RW2r0l pic.twitter.com/5DAK0PdU84
— Sanatan Prabhat (@SanatanPrabhat) July 10, 2026
೧. ಮೂಲಗಳ ಮಾಹಿತಿಯ ಪ್ರಕಾರ, ಕೆಲಸ ಬಿಟ್ಟಿರುವ ಎಲ್ಲಾ ಸಿಬ್ಬಂದಿಗಳ ಹೇಳಿರುವುದೇನೆಂದರೆ, ದೇಣಿಗೆ ಕಳ್ಳತನದ ವಿವಾದದ ನಂತರ ಮಂದಿರದಲ್ಲಿ ಹಲವು ನಿಯಮಗಳನ್ನು ಬದಲಾಯಿಸಲಾಗಿದೆ. ಅಷ್ಟೇ ಅಲ್ಲದೆ, ಅವರ ಗೌರವ ಧನವನ್ನೂ ಕಡಿತಗೊಳಿಸಲಾಗಿದೆ.
೨. ಈ ಎಲ್ಲಾ ಸಿಬ್ಬಂದಿ ಒಟ್ಟಾಗಿ ಸಭೆ ನಡೆಸಿ ಈ ಬದಲಾವಣೆಗಳನ್ನು ವಿರೋಧಿಸಿದರು ಮತ್ತು ಶ್ರೀರಾಮಮಂದಿರ ಆಡಳಿತ ಮಂಡಳಿಯ ಅಧಿಕಾರಿಗಳ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸಿದರು.
೩. ಆ ಸಮಯದಲ್ಲಿ ಅವರ ಬೇಡಿಕೆಗಳನ್ನು ಆಲಿಸಲಿಲ್ಲ. ಆದ್ದರಿಂದ, ಪ್ರತಿಭಟನೆಯ ರೂಪವಾಗಿ ಕೊನೆಗೆ ೨೩ ಸಿಬ್ಬಂದಿ ಒಟ್ಟಾಗಿ ರಾಜೀನಾಮೆ ನೀಡಿದ್ದಾರೆ.
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಉತ್ತರ ಪ್ರದೇಶದ ಮಥುರಾದಲ್ಲಿ ‘ಹೃದಯದಲ್ಲಿ ಬಾಬರ್, ಮುಖದಲ್ಲಿ ರಾಮ’ ಎಂಬ ಫಲಕ ಅಳವಡಿಸಿದ್ದಕ್ಕೆ ಸಮಾಜವಾದಿ ಪಕ್ಷದ ನಾಯಕರು ಆಕ್ರೋಶ! : UP Poster Row
ಗ್ರಾಹಕನಿಗೆ 40 ಸಾವಿರ ರೂಪಾಯಿ ಪರಿಹಾರ ನೀಡಿ! – ‘ಗ್ರಾಹಕ ವಿವಾದಗಳ ಪರಿಹಾರ ಆಯೋಗ’ದಿಂದ ಅಂಚೆ ಕಚೇರಿಗೆ ಆದೇಶ : Postal Parcel Stolen
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border