ದೇಶದ ಶಾಲೆಗಳಲ್ಲಿ 5,೦೦೦ ದಷ್ಟು ಕುಸಿತ; ಸರಕಾರಿ ಶಾಲೆಗಳಿಗೆ ಹೋಲಿಸಿದರೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

ನವದೆಹಲಿ – ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿರುವ ‘ಯುಡೈಸ್ ಪ್ಲಸ್’ (UDISE+) ವರದಿಯ ಪ್ರಕಾರ, ಕೇವಲ ಒಂದೇ ವರ್ಷದಲ್ಲಿ ದೇಶದ ಶಾಲೆಗಳ ಸಂಖ್ಯೆ 5,೦೦೦ ದಷ್ಟು ಕಡಿಮೆಯಾಗಿದೆ.

ಇನ್ನು, ಸರಕಾರಿ ಶಾಲೆಗಳಿಗೆ ಹೋಲಿಸಿದರೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

1. ‘ಯುಡೈಸ್ ಪ್ಲಸ್’ ನ 2024-25ರ ವರದಿಯಲ್ಲಿ ದೇಶದಲ್ಲಿ 14 ಲಕ್ಷ 71 ಸಾವಿರದ 743 ಶಾಲೆಗಳಿತ್ತು; ಆದರೆ 2025-26ರ ವರದಿಯಲ್ಲಿ 14 ಲಕ್ಷ 66 ಸಾವಿರದ 682 ಶಾಲೆಗಳಿವೆ ಎಂದು ಹೇಳಲಾಗಿದೆ. ಇದರಿಂದಾಗಿ ಕೇವಲ ಒಂದೇ ವರ್ಷದಲ್ಲಿ 5,೦61 ಶಾಲೆಗಳು ಕಡಿಮೆಯಾಗಿರುವುದು ಕಂಡುಬಂದಿದೆ.

2. ವರದಿಯ ಪ್ರಕಾರ, ಶಿಕ್ಷಕರ ಸಂಖ್ಯೆಯಲ್ಲಿ ಶೇಕಡಾ 8.3% ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಶಿಕ್ಷಕ-ವಿದ್ಯಾರ್ಥಿ ಅನುಪಾತದಲ್ಲಿ ಸುಧಾರಣೆಯಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

3. ವರದಿಯ ಪ್ರಕಾರ, ಪ್ರಾಥಮಿಕ ಹಂತದಿಂದ ಮಾಧ್ಯಮಿಕ ಹಂತದವರೆಗಿನ ಒಟ್ಟು ವಿದ್ಯಾರ್ಥಿಗಳ ದಾಖಲಾತಿ 2025-26ರಲ್ಲಿ 24 ಕೋಟಿ 72 ಲಕ್ಷ ಆಗಿತ್ತು. 2023-24ರಲ್ಲಿ 24 ಕೋಟಿ 80 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ದಾಖಲಾಗಿತ್ತು. ಹೀಗಾಗಿ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

4. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 12 ಕೋಟಿ 75 ಲಕ್ಷದಿಂದ 11 ಕೋಟಿ 89 ಲಕ್ಷಕ್ಕೆ ಇಳಿಕೆಯಾಗಿದೆ. ಅಂದರೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 86 ಲಕ್ಷದಷ್ಟು ಕಡಿಮೆಯಾಗಿದೆ. ಮತ್ತೊಂದೆಡೆ, ಅನುದಾನ ರಹಿತ (Aided) ಖಾಸಗಿ ಮಾನ್ಯತೆ ಪಡೆದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 9 ಕೋಟಿಯಿಂದ 9 ಕೋಟಿ 89 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಕೇವಲ ಒಂದೇ ವರ್ಷದಲ್ಲಿ 88 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ಕಡೆಗೆ ಮುಖ ಮಾಡಿರುವುದು ಕಂಡುಬಂದಿದೆ.

ಸಂಪಾದಕೀಯ ನಿಲುವು

ಸಾರ್ವಜನಿಕರ ದೃಷ್ಟಿಯಲ್ಲಿ ಸರಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಕಡಿಮೆಯಿರುವುದರಿಂದಲೇ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸರಕಾರ ಈ ಬಗ್ಗೆ ಯಾವಾಗ ಯೋಚಿಸುತ್ತದೆ?